ರೋಗ ಪೀಡಿತರು ನಿರಾಶ್ರಿತರಾಗದಿರಲಿ
Team Udayavani, Dec 6, 2019, 12:24 PM IST
ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್‌ಐವಿ(ಏಡ್ಸ್) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರೋಗಪೀಡಿತರನ್ನು ನೋಡುವಂತಹ ದೃಷ್ಟಿಕೋನದಲ್ಲಿ ಬದಲಾವಣೆಗಳಾಬೇಕಾಗಿದೆ ಎಂದು ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ ಹೊಸ್ಮನೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಮೋಟೆಬೆನ್ನೂರಿನ ಸಿ.ಆರ್. ಬಳ್ಳಾರಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯಇಲಾಖೆ ಆಶ್ರಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಫ್ರಿಕಾದ ಒಬ್ಬ ಮಹಿಳೆಯಿಂದ 1972 ರಲ್ಲಿ ಬೆಳಕಿಗೆ ಬಂದಂತಹ ಈ ರೋಗ ಇಡೀ ವಿಶ್ವವನ್ನೇ ವ್ಯಾಪಿಸಿ ಜನರನ್ನು
ತಲ್ಲಣಗೊಳಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಚೆನೈ ನಗರದಲ್ಲಿ ಬಳಿಕ ರಾಜ್ಯದ ಸವದತ್ತಿಯಲ್ಲಿ ಕಂಡು ಬಂದಂತಹ ರೋಗವು ಇದೀಗ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ, ಹೀಗಾಗಿ ಎಚ್‌ಐವಿ ಸೋಂಕಿತರನ್ನು ಸಮಾನವಾಗಿ ಕಾಣುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸ ಎಲ್ಲರಿಂದಾಗಬೇಕಿದೆ ಎಂದರು.
ತಪ್ಪು ಕಲ್ಪನೆ ಬೇಡ: ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಏಡ್ಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತಹ (ಸೋಂಕು) ರೋಗವಲ್ಲ. ಇದೊಂದು ರಕ್ತಕ್ಕೆ ಸಂಬಂಧಿ ಸಿದ ಕಾಯಿಲೆಯಾಗಿದ್ದು, ಅನೈತಿಕವಾಗಿ ಹಾಗೂ ಅಸುರಕ್ಷಿತ ಲೈಂಗಿಕ ಚಟುವಟಿಕೆ ನಡೆಸುವವರಲ್ಲಿ ಏಡ್ಸ್ ಕಾಯಿಲೆ ಕಾಣಿಸಿಕೊಳ್ಳಲಿದೆ, ಏಡ್ಸ್ ಸೋಂಕಿತ ವ್ಯಕ್ತಿಯ ಸ್ಪರ್ಶದಿಂದ ಅಥವಾ ಅವರ ಜತೆಯಲ್ಲಿ ಕುಳಿತು ಊಟ ಮಾಡುವುದರಿಂದ ರೋಗ ಹರಡುವುದಿಲ್ಲ, ಆದರೆ, ಬಹುತೇಕ ಜನರಲ್ಲಿ ಏಡ್ಸ್ ಕುರಿತು ಇರುವಂತಹ ತಪ್ಪು ಕಲ್ಪನೆಗಳು ಇಂದಿಗೂ ದೂರವಾಗಿಲ್ಲ. ಹೀಗಾಗಿ ಹೆಚ್ಚು ಹೆಚ್ಚು ಜಾಗೃತಿ ಶಿಬಿರಗಳನ್ನು ನಡೆಸುವ ಮೂಲಕ ಸ್ಪಷ್ಟ ತಿಳುವಳಿಕೆಗಳನ್ನು ಸಾರ್ವಜನಿಕರಿಗೆ ನೀಡಬೇಕಾಗಿದೆ ಎಂದರು.
ಆರೋಗ್ಯ ಸಹಾಯಕ ಪ್ರಶಾಂತ ನವಲೆ, ನ್ಯಾಯವಾದಿಗಳಾದ ಪಿ.ಸಿ.ದೊಣ್ಣೇರ, ಆರ್. ಎನ್.ಪಾಳೇದ, ಲಕ್ಷ್ಮೀ ಗುಗ್ಗರಿ, ಪ್ರಾಚಾರ್ಯ ಎ.ಎಸ್.ದೇವಿಹೊಸೂರ, ಚಂದ್ರು ಲಮಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.