ಮಲೇರಿಯಾ ನಿರ್ಲಕ್ಷ್ಯವಹಿಸದಿರಿ: ಸುಹಿಲ್
Team Udayavani, Apr 26, 2019, 4:26 PM IST
ಹಾವೇರಿ: ಮಲೇರಿಯಾ ರೋಗ ಗುಣಪಡಿಸಬಹುದಾಗಿದ್ದು, ರೋಗದ ಲಕ್ಷಣಗಳು ಕಂಡಕೂಡಲೇ ನಿರ್ಲಕ್ಷ್ಯ ವಹಿಸದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಸುಹಿಲ್ ಹರವಿ ಹೇಳಿದರು.
ಗುರುವಾರ ನಗರದ ವಾರ್ತಾ ಭವನದಲ್ಲಿ ವಿಶ್ವ ಮಲೇರಿಯಾ ದಿನ ಕುರಿತು ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೋಗವನ್ನು ಒಂದು ವೇಳೆ ಅಲಕ್ಷ ಮಾಡಿದರೆ ಸಾವು ಸಂಭವಿಸಬಹುದು. ಶಿಶುಗಳು ಮತ್ತು ಗರ್ಭಿಣಿಯರಿಗೆ ಮಲೇರಿಯಾ ರೋಗವು ಆತಂಕಕಾರಿಯಾಗಿದ್ದು, ಅಂತಹವರು ಯಾವುದೇ ಜ್ವರವಿರಲಿ ತಡಮಾಡದೇ ವೈದ್ಯರ ಸಲಹೆ ಪಡೆಯುವುದು ಅವಶ್ಯಕವಾಗಿದೆ ಎಂದರು.
ನೀರು ಶೇಖರಣಾ ತೊಟ್ಟಿಗಳನ್ನು ಮುಚ್ಚಳದಿಂದ ಮುಚ್ಚಿರಬೇಕು. ಗ್ರಾಮೀಣ ಭಾಗದಲ್ಲಿ ಸಿಬ್ಬಂದಿಗಳು ಡಿಡಿಟಿ ಸಿಂಪರಣೆ ಕಾರ್ಯಕ್ಕೆ ಮನೆಗಳಿಗೆ ಬಂದಾಗ ಸಂಪೂರ್ಣ ಸಹಕಾರ ನೀಡಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳಲ್ಲಿ ಲಾರ್ವಾಹಾರಿ ಮೀನುಗಳಾದ ಗ್ಯಾಂಬೋಸಿಯ ಮತ್ತು ಗಪ್ಪಿ ಎಂಬ ಮೀನುಗಳನ್ನು ಬಿಡುವ ಮೂಲಕ ಲಾರ್ವಾ ನಾಶ ಮಾಡಲಗುತ್ತಿದೆ. ಉಡುಪಿ, ಮಂಗಳೂರ ಜಿಲ್ಲೆ ಹಾಗೂ ಪಕ್ಕದ ಗೋವಾ ರಾಜ್ಯದಲ್ಲಿ ಮಲೇರಿಯಾ ರೋಗ ಹೆಚ್ಚಾಗಿ ಕಂಡುಬರುತ್ತದೆ. ಕಾರಣ ಜಿಲ್ಲೆಯ ಜನತೆ ಈ ಪ್ರದೇಶಗಳಿಗೆ ಹೋಗಿ ಬಂದಾಗ ಕಡ್ಡಾಯವಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರು ಕಸವನ್ನು ಚರಂಡಿಗೆ ಹಾಕದೇ ಕಸದ ತೊಟ್ಟಿಗಳಿಗೆ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಎಸ್. ರಾಘವೇಂದ್ರಸ್ವಾಮಿ ಮಾತನಾಡಿ, ಭಾರತವನ್ನು 2025ರ ವೇಳೆಗೆ ಮಲೇರಿಯಾ ಮುಕ್ತ ಮಾಡಲು ಉದ್ದೇಶಹೊಂದಲಾಗಿದೆ. ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಈ ವರ್ಷದ ಘೋಷಣೆಯಾಗಿದೆ. ಜಿಲ್ಲೆಯಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇಳಿಮುಖ: ಜಿಲ್ಲೆಯಲ್ಲಿ ಮಲೇರಿಯಾ ರೋಗ ಇಳಿಮುಖವಾಗುತ್ತಿದೆ. 2017ರಲ್ಲಿ 70, 2018ರಲ್ಲಿ 35 ಹಾಗೂ 2019ರ ಈವರೆಗೆ ಕೇವಲ ಎರಡು ಮಲೇರಿಯಾ ವರದಿಗಳು ಪತ್ತೆಯಾಗಿವೆ. ಈ ರೋಗವು ಬರುವ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅಧಿಕವಾಗುವ ಸಂಭವವಿದೆ. ಕಾರಣ ಮಲೇರಿಯಾ, ಡೆಂಗ್ಯು, ಚಿಕನ್‌ಗುನ್ಯಾ ರೋಗಗಳು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಲು ಕೋರಿದರು.
ಮಲೇರಿಯಾ ಅನಾಫೆಲೀಸ್ ಸೊಳ್ಳೆಯಿಂದ ಹರಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಚಳಿ, ಜ್ವರ, ವಾಕರಿಕೆ, ಹೊಟ್ಟೆನೋವು, ಬೆವರಿನ ಮೂಲಕ ಜ್ವರ ಕಡಿಮೆಯಾಗುವುದು ಮಲೇರಿಯಾ ರೋಗದ ಲಕ್ಷಣಗಳಾಗಿವೆ. ಸಾರ್ವಜನಿಕರು ಮಲೇರಿಯಾ ರೋಗ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮನೆ ಸುತ್ತಮತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಸೊಳ್ಳೆಪರದೆ ಉಪಯೋಗಿಸಬೇಕು, ಬೇವಿನ ಸೊಪ್ಪಿನ ಹೊಗೆ ಹಾಕುವುದು ಹಾಗೂ ಸೊಳ್ಳಿಬತ್ತಿಗಳನ್ನು ಉಪಯೋಗಿಸಬೇಕು. ನೀರು ಶೇಖರಿಸಿದ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಗಟಾರಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಸ್ಥಳೀಯ ನಗರ ಸಂಸ್ಥೆಗಳು ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ 18 ಗ್ರಾಮಗಳಲ್ಲಿ 8,500 ಔಷಧಿಯುಕ್ತ ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. ಮುಂಜಾಗ್ರತಾ ಕ್ರಮಗಳ ಕುರಿತು ಶಾಲಾ ಮಕ್ಕಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಪ್ರತಿ ಮಾಹೆಯ ಮೊದಲ ಹಾಗೂ ಮೂರನೇ ಶುಕ್ರವಾರ ಲಾರ್ವಾ ಸರ್ವೇ ಸಮೀಕ್ಷೆ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕೀಟತಜ್ಞೆ ಇಂದಿರಾ ಪಾಟೀಲ ಮಾತನಾಡಿ, ನಿಂತ ನೀರಿನಲ್ಲಿ 24ರಿಂದ 48 ಗಂಟೆಗಳಲ್ಲಿ ಮೊಟ್ಟೆಗಳು, ಏಳು ದಿನದಲ್ಲಿ ಲಾರ್ವಾ ಹಾಗೂ 24 ತಾಸಿನಲ್ಲಿ ಸೊಳ್ಳೆಗಳು ತನ್ನ ರೂಪ ಪಡೆದುಕೊಳ್ಳುತ್ತವೆ. 32ರಿಂದ 42 ದಿನಗಳ ವಾತಾವರಣದಲ್ಲಿರುತ್ತವೆ. ಅನಾಫೆಲೀಸ್ ಸೊಳ್ಳೆ ಪ್ರಾಣಿಗಳನ್ನು ಕಚ್ಚುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದನಕರುಗಳನ್ನು ಸಾಕುವುದು ಕಡಿಮೆಯಾಗಿದೆ. ಪ್ರಾಣಿಗಳ ಸಿಗದಿದ್ದಾಗ ಮನುಷ್ಯನ್ನು ಕಚ್ಚುತ್ತವೆ ಎಂದು ತಿಳಿಸಿದರು.
ಗ್ರಾಮಗಳಲ್ಲಿ ದನಕರುಗಳಿಗೆ ನೀರು ಕುಡಿಸಲು ನಿರ್ಮಿಸಲಾದ ಸಿಮೆಂಟ್ ತೊಟ್ಟಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಗ್ರಾಪಂ ಪಿಡಿಒಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 43 ಕೆರೆ ಹಾಗೂ 15 ಚಿಕ್ಕ ಹೊಂಡಗಳಲ್ಲಿ ಲಾರ್ವಾಹಾನಿ ಮೀನುಗಳನ್ನು ಬಿಡಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರಭಾಕರ ಕುಂದೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಗದೀಶ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.