ಆತ್ಮನಿರ್ಭರ ಪರಿಣಾಮಕಾರಿ ಜಾರಿ
Team Udayavani, Jul 11, 2020, 4:41 PM IST
ಹಾನಗಲ್ಲ: ಭಾರತದ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುತ್ತಿದ್ದು, ನವಭಾರತ ನಿರ್ಮಾಣಕ್ಕೆ ಕೇಂದ್ರ ಸರಕಾರದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸುಭದ್ರ ಯುವ ಭಾರತ ನಿರ್ಮಾಣಕ್ಕೆ ನರೇಂದ್ರ ಮೋದಿ ಅಚಲ ವಿಶ್ವಾಸದಿಂದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಓಕಲ್ ಟು ಲೋಕಲ್ ಮೆಕ್ ಇಟ್ ಗ್ಲೋಬಲ್, ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಿ, ಅದಕ್ಕೆ ಪೂರಕವಾದ ಸ್ಕೀಮ್‌ಗಳನ್ನು ಜಾರಿಗೊಳಿಸಲಾಗಿದೆ. ಸ್ಥಳೀಯವಾಗಿ ಸ್ವದೇಶಿ ವಸ್ತುಗಳನ್ನು ಬಳಸಿ ಕೃಷಿ, ಹಾಲು ಉತ್ಪಾದನೆ, ಮತ್ಸ್ಯೋದ್ಯಮ, ತೋಟಗಾರಿಕೆ ಅಲ್ಲದೆ, ಉದ್ಯಮಗಳಿಗೆ ಪುನಶ್ಚೇತನ ನೀಡುವ ಮೂಲಕ ಗುಣಮಟ್ಟದ ವಸ್ತುಗಳ ತಯಾರಿಕೆ ಹಾಗೂ ಅವುಗಳನ್ನು ಜಾಗತಿಕ ಮಟ್ಟದ ಬ್ರ್ಯಾಂಡ್ ಮಾಡುವ ಸಂಕಲ್ಪ ನೆರವೇರಬೇಕಾಗಿದೆ ಎಂದು ತಿಳಿಸಿದ್ದಾರೆ. ಹಾವೇರಿ-ಗದಗ ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 64 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ 280 ಕೋಟಿ ವ್ಯಯಿಸಲಾಗಿತ್ತು. ಆದರೆ ಈಗ ಏ. 1ರಿಂದ ಜೂ. 16 ತನಕ 28,41,191 ಮಾನವ ದಿನಗಳನ್ನು ಸೃಜಿಸಲಾಗಿದೆ. 102 ಕೋಟಿ ಕೋಟಿ ಹಣ ವ್ಯಯಿಸಲಾಗಿದೆ. ಆ ಮೂಲಕ ಜನರಿಗೆ ಸ್ಥಳೀಯವಾಗಿ ಹೆಚ್ಚು ಉದ್ಯೋಗ ನೀಡಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಕೃಷಿ ಸಮ್ಮಾನ ಯೋಜನೆಯಡಿ ಎರಡು ಜಿಲ್ಲೆಗಳಲ್ಲಿ 3.10 ಲಕ್ಷ ಫಲಾನುಭವಿಗಳಿಗೆ 62 ಕೋಟಿ ಹಣ ಜಮೆಗೊಳಿಸಲಾಗಿದೆ. ಮಹಿಳಾ ಜನಧನ ಖಾತೆಗೆ 4.83 ಲಕ್ಷ ಫಲಾನುಭವಿಗಳಿಗೆ 72.45 ಕೋಟಿ ಹಣ ನೀಡಲಾಗಿದೆ. ಉಜ್ವಲ ಯೋಜನೆಯಡಿ 2.53 ಲಕ್ಷ ಉಚಿತ ಸಿಲಿಂಡರ್ ವಿತರಿಸಲಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿ 2.98 ಜನರಿಗೆ ಲಾಭ ದೊರೆತಿದೆ. ಗರೀಬ್ ಕಲ್ಯಾಣ ಯೋಜನೆಯಡಿ 5.97 ಲಕ್ಷ ಕುಟುಂಬಕ್ಕೆ ಉಚಿತ ಪಡಿತರ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ನಿಯಮಬದ್ಧಗೊಳಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಹಾವೇರಿ-ಗದಗ ಜಿಲ್ಲೆಗಳಲ್ಲಿ ಹೊಸದಾಗಿ ಆಹಾರ ಸಂಸ್ಕರಣಾ ಘಟಕಗಳು ತೆರೆದುಕೊಳ್ಳುವ ಆಶಯವಿದೆ ಎಂದು ಉದಾಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.