ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆ
ರಂಭಾಪುರಿ ಶ್ರೀಗಳಿಂದ ಗದ್ದುಗೆಗಳ ಶಂಕುಸ್ಥಾಪನೆ
Team Udayavani, Apr 1, 2022, 3:36 PM IST
ಲಕ್ಷ್ಮೇಶ್ವರ: ಭೂ ಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾಗಿ ಜ್ಯೋತಿರ್ಲಿಂಗಗಳಷ್ಟೇ ಪವಿತ್ರ ಕ್ಷೇತ್ರವಾಗಬೇಕೆಂಬ ಲಿಂ|ಜ|ವೀರ ಗಂಗಾಧರ ಶಿವಾಚಾರ್ಯರ ಕನಸು, ಸಂಕಲ್ಪ ಈಡೇರಿಕೆಗೆ ಕಾಲ ಕೂಡಿ ಬಂದಿದೆ.
ಅವರ ಕೃಪಾಶೀರ್ವಾದದಿಂದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಏ.2 ರಂದು ಶನಿವಾರ ಬೆಳಿಗ್ಗೆ 9ಕ್ಕೆ ಬಾಳೆಹೊನ್ನೂರು ಜ|ಪ್ರಸನ್ನ ರೇಣುಕ ಡಾ|ವೀರ ಸೋಮೇಶ್ವರ ಶಿವಾಚಾರ್ಯರು ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಗದ್ದುಗೆಗಳ ಶಂಕುಸ್ಥಾಪನೆ(ಗುದ್ದಲಿ ಪೂಜೆ) ನೆರವೇರಿಸಲಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಹೇಳಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 2-3 ದಶಕಗಳ ಭಕ್ತರ ಕನಸಾಗಿರುವ ತ್ರಿಕೋಟಿ ಲಿಂಗ ಸ್ಥಾಪನೆಗೆ ಅನೇಕ ಸಮಸ್ಯೆಗಳು ಎದುರಾದರೂ ಸಹ ಇದೀಗ ಲಿಂ|ಜಗದ್ಗುರುಗಳ ಸಂಕಲ್ಪ ಸಾಕಾರಕ್ಕೆ ಮುಂದಡಿ ಇಡಲಾಗುತ್ತಿದೆ.
ಕ್ಷೇತ್ರದಲ್ಲಿ ಈಗಾಗಲೇ ಸಿದ್ಧಗೊಂಡಿರುವ ಸಾವಿರಾರು ಶಿವಲಿಂಗಗಳು ಪ್ರತಿಷ್ಠಾಪನೆಗೊಂಡರೆ ಶ್ರೀಕ್ಷೇತ್ರ ದೇಶಾದ್ಯಂತ ಪ್ರಸಿದ್ಧಿ ಪಡೆಯಲಿದೆ. 2.5 ಅಡಿ ಎತ್ತರದ ಶಿವಲಿಂಗವೊಂದರಲ್ಲಿ 6000 ಗರ್ಭಲಿಂಗಗಳಿರುವಂತಹ 5000 ಶಿವಲಿಂಗಗಳು ಸೇರಿದಾಗ ತ್ರಿಕೋಟಿ ಲಿಂಗವಾಗುತ್ತವೆ. ಈ 5000 ಶಿವಲಿಂಗಗಳು 8 ವರ್ತುಲಗಳಲ್ಲಿ ಪ್ರತಿಷ್ಠಾಪಿತಗೊಂಡು ನಡುವೆ ಲಿಂ|ಜಗದ್ಗುರುಗಳ ಹಾಗೂ ರೇಣುಕರ ಬೃಹತ್ ಮೂರ್ತಿ ಮಂದಿರ ನಿರ್ಮಾಣಗೊಳ್ಳಲಿದೆ.
ಈಗಾಗಲೇ ಕ್ಷೇತ್ರದಲ್ಲಿ 4500ಕ್ಕೂ ಹೆಚ್ಚು ಶಿವಲಿಂಗಗಳು, ಒಂದು ಬೃಹತ್ ಶಿವಲಿಂಗ ಮತ್ತು ಬಸವಣ್ಣನ ಮೂರ್ತಿ ಸಿದ್ಧಗೊಂಡು ಶ್ರೀಕ್ಷೇತ್ರದಲ್ಲಿ ನೆಲೆನಿಂತಿವೆ. ಲಿಂ|ಶ್ರೀಗಳ ಸಂಕಲ್ಪ ಈಡೇರಿಕೆಗೆ ನಾಡಿನ ಅನೇಕ ಭಕ್ತರು ಸಹಾಯ ನೀಡಿದ್ದು, 1 ಶಿವಲಿಂಗ ಸೇವೆಗೆ 6001 ರೂ. ನಿಗದಿಪಡಿಸಲಾಗಿದೆ ಎಂದರು.
ಬಹುದೊಡ್ಡ ಧರ್ಮ ಕಾರ್ಯಕ್ಕೆ ಭಕ್ತರಿಂದ ತನು, ಮನ, ಧನದ ಸಹಾಯ- ಸಹ ಕಾರದ ಅಗತ್ಯವಿದೆ. “ಮಾನವ ಧರ್ಮಕ್ಕೆ ಜಯವಾಗಲಿ- ಧರ್ಮದಿಂದಳೇ ವಿಶ್ವಕ್ಕೆ ಶಾಂತಿ’ ಎಂಬ ಘೋಷಣೆಯನ್ನು ಜಗತ್ತಿಗೆ ನೀಡಿದ ಲಿಂ|ಜ|ವೀರಗಂಗಾಧರ ಶಿವಾಚಾರ್ಯರು ಸಂಕಲ್ಪ ಈಡೇರಿಕೆಗೆ ಕೈಗೊಂಡ ಮಹೋನ್ನತ ಕಾರ್ಯಕ್ಕೆ ರಂಭಾಪುರಿ ಪೀಠದ ಜಗದ್ಗುರುಗಳ ಅನುಗ್ರಹ, ಭಕ್ತ ಗಣದ ಸಹಾಯ- ಸಹಕಾರದಿಂದ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾರ್ಯಕ್ಕೆ ಮುಂದಡಿಯಿಡಲು ಸಾಧ್ಯವಾಗುತ್ತಿವೆ ಎಂದರು.
ಈ ಶ್ರೇಷ್ಠ ಕಾರ್ಯ ನಿರ್ವಿಘ್ನವಾಗಿ ಸಾಗಲು ಯುಗಾದಿಯ ಪರ್ವಕಾಲದ ಶುಭಕೃತ ನಾಮ ಸಂವತ್ಸರದಲ್ಲಿ ರಂಭಾಪುರಿ ಜಗ ದ್ಗುರುಗಳು ಭೂಮಿಪೂಜೆ ನೆರವೇರಿಸಲಿದ್ದಾರೆ. ನಾಡಿನ ಹರ-ಗುರು-ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸುವರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.