ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ
Team Udayavani, Jun 30, 2020, 3:15 PM IST
ರಾಣಿಬೆನ್ನೂರ: ಭೂಸುಧಾರಣೆ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ರಾಜ್ಯ ಪ್ರದೇಶ ರೈತ ಹಾಗೂ ರೈತ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಶೀಲ್ದಾರ್ ಗೆ ಸಲ್ಲಿಸಿದರು.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಕೃಷಿ ಭೂಮಿ ನಾಶವಾದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಉದ್ಭವವಾಗಲಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಆಗುವ ಅನಾಹುತಗಳಿಗೆ ನೇರವಾಗಿ ರೈತರೇ ಬಲಿ ಪಶುಗಳಾಗುತ್ತಾರೆ. ಮಧ್ಯಮ ಮತ್ತು ಸಣ್ಣ ರೈತರಿಗೆ ವ್ಯವಸಾಯ ಮಾಡಲು ಜಮೀನುಗಳಿಲ್ಲದೆ ಬಡವರಾಗುತ್ತಾರೆ. ಬಂಡವಾಳ ಶಾಹಿಗಳು ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ಕೃಷಿ ಚಟುವಟಿಯಲ್ಲಿದ್ದ ರೈತರು ವಿಮುಖರಾದಲ್ಲಿ ದೇಶದಲ್ಲಿ ಆಹಾರ ಕೊರತೆಯಾಗಲಿದೆ ಎಂದರು.
ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಮಾತನಾಡಿದರು. ಹಿರಿಯ ರೈತ ಮುಖಂಡ ದಯಲಾಲ್ ಸಂಘವಿ, ಕೃಷ್ಣಪ್ಪ ಚವ್ಹಾಣ, ಚಂದ್ರಪ್ಪ ಕಾಳಪ್ಪನವರ, ಪ್ರಶಾಂತ್ ಬಿಸವಳ್ಳಿ, ಶಶಿಕಲಾ ಹದ್ಯರಹಳ್ಳಿ,ಲೀಲಾವತಿ ಹೊಸಹಳ್ಳಿ, ದೇವರಾಜ ಚವ್ಹಾಣ, ಶಿವಾನಂದ ಹೊಸಮನಿ, ರಮೇಶ ಹಿರೇತನದೇವರ, ಎಚ್ .ಟಿ.ಅರಳಿಕಟ್ಟಿ, ವಿರುಪಾಕ್ಷಪ್ಪ ಮೇಡ್ಲೆàರಿ, ಜೆ.ಎಸ್.ನಾಗವತ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.