ರೈತರ ಆತ್ಮಹತ್ಯೆ: ತಂದೆ ರಕ್ಷಿಸಲು ಮುಂದಾದ ಮಗನೂ ನೀರುಪಾಲು
Team Udayavani, Nov 23, 2018, 6:50 AM IST
ಎನ್.ಆರ್.ಪುರ/ಬಂಕಾಪುರ: ರಾಜ್ಯದ ವಿವಿಧೆಡೆ ಸಾಲಬಾಧೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆಯನ್ನು ರಕ್ಷಿಸಲು ಹೋದ ಯುವಕನೂ ನೀರು ಪಾಲಾದ ಘಟನೆ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಹೊನ್ನೇಕುಡಿಗೆ ಗ್ರಾಮದ ತಿಮ್ಮಣ್ಣಗೌಡ (54) ಎಂಬುವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ, ತಂದೆ ರಕ್ಷಿಸಲು ಹೋದ ಪುತ್ರ ಅಭಿಷೇಕ್ (24) ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಿಮ್ಮಣ್ಣ ಗೌಡ ಸಾಲೂರು ಗ್ರಾಮದಲ್ಲಿ 2 ಎಕರೆ ಜಮೀನು ಹೊಂದಿದ್ದು, ಕೃಷಿ ಕಾರ್ಯಕ್ಕಾಗಿ ಎನ್.ಆರ್. ಪುರದ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಯಲ್ಲಿ 3 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಜಮೀನಿನಲ್ಲಿ ಬಾಳೆ, ಶುಂಠಿ, ಭತ್ತ ಬೆಳೆದಿದ್ದರು. ಆದರೆ ಬೆಳೆ ನಷ್ಟವಾಗಿತ್ತು. ಬುಧವಾರ ರಾತ್ರಿ ಕುಟುಂಬದವರೊಂದಿಗೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಸಾಲದ ಬಗ್ಗೆ ಪ್ರಸ್ತಾಪಿಸಿದ ತಿಮ್ಮಣ್ಣಗೌಡ ಸಾಲ ತೀರಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಏಕಾಏಕಿ ಎದ್ದು ಓಡಿ ಹೋಗಿದ್ದಾರೆ. ಇದರಿಂದ ಗಾಬರಿಗೊಂಡ
ಮಗ ಅಭಿಷೇಕ್ ಸಹ ತಂದೆಯನ್ನು ಹಿಂಬಾಲಿಸಿದ್ದಾರೆ.
ತಂದೆ ಕೆರೆಗೆ ಹಾರಿದ್ದನ್ನು ನೋಡಿದ ಅಭಿಷೇಕ್ ಅವರನ್ನು ರಕ್ಷಿಸಲು ತಾನೂ ಕೆರೆಗೆ ಹಾರಿದ್ದಾನೆ. ಹಾವೇರಿ ಜಿಲ್ಲೆ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದ ರಮೇಶ ಬಸವಣ್ಣೆಪ್ಪ ಪೂಜಾರ (46) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ 3 ಎಕರೆ ಜಮೀನು ಹೊಂದಿದ್ದ. ಈ ಬಾರಿ ಹತ್ತಿ, ಗೋವಿನಜೋಳ ಬೆಳೆದಿದ್ದ. ಇಲ್ಲಿಯ ಕೆನರಾ ಬ್ಯಾಂಕಿನಲ್ಲಿ 75 ಸಾವಿರ ಸಾಲ, ಕೆವಿಜಿ
ಬ್ಯಾಂಕಿನಲ್ಲಿ 1ಲಕ್ಷ ಸೇರಿದಂತೆ ಕೈಗಡ ಎರಡು ಲಕ್ಷಕ್ಕಿಂತ ಅಧಿಕ ಸಾಲ ಮಾಡಿರುವುದಾಗಿ ತಿಳಿದು ಬಂದಿದೆ.ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.