ಹಬ್ಬ-ಹರಿದಿನ-ಜಾತ್ರೆ ಸಾಮರಸ್ಯದ ಸಂಕೇತ

Team Udayavani, Dec 11, 2021, 3:04 PM IST

ಹಬ್ಬ-ಹರಿದಿನ-ಜಾತ್ರೆ ಸಾಮರಸ್ಯದ ಸಂಕೇತ

ಬಂಕಾಪುರ: ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನುಬಿತ್ತಿ ಬೆಳೆಯುವದರ ಜೊತೆಗೆ, ಸರ್ವಜನಾಂಗದವರಲ್ಲಿ ಸಾಮರಸ್ಯ ಮೂಡಿಸುವ ಸಂಕೇತಗಳಾಗಿವೆ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಕೆ.ಎಸ್‌.ಕೌಜಲಗಿ ಹೇಳಿದರು.

ಪಟ್ಟಣದ ಶ್ರೀ ದೇಸಾಯಿ ಮಠದ ಆವರಣದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನಡೆದ ಎಣ್ಣೆದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಋತುಮಾನಗಳಲ್ಲಿ ನಡೆಯುವಹಬ್ಬ ಹರಿದಿನಗಳಲ್ಲಿ ನಾವು ಮಾಡುವ ಅಡುಗೆ, ಆಹಾರ ಸೇವನೆಯ ಸಂಪ್ರದಾಯಗಳುಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ. ಸರ್ವಜನಾಂಗದವರು ಒಂದೆಡೆ ಸೇರಿ ಸಾಮರಸ್ಯದಿಂದಬದುಕಲು ಪೂರಕ ವಾತಾವರಣ ಸೃಷ್ಟಿಸುತ್ತಲಿವೆ ಎಂದು ಹೇಳಿದರು.

ಡಾ|ಆರ್‌.ಎಸ್‌.ಅರಳೆಲೆಮಠ ಮಾತನಾಡಿ, ಎಂ.ಎ. ಪದವೀಧರರಾದ ಶ್ರೀ ಮಹಾಂತಸ್ವಾಮಿಗಳು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣನೀಡಲು ಶಿಕ್ಷಣ ಸಂಸ್ಥೆ ತೆರೆದು ವಿದ್ಯಾದಾನಮಾಡುವುದರ ಮೂಲಕ ಇತರರಿಗೆಪ್ರೇರಣಾದಾಯಕರಾಗಿದ್ದಾರೆ. ಸೃಷ್ಟಿ, ಪ್ರಕೃತಿಬಗ್ಗೆ ಅಪಾರ ಕಾಳಜಿ ಹೊಂದಿದ ಶ್ರೀಗಳುದೇಸಾಯಿ ಮಠದ ಆವರಣವನ್ನು ಸುಂದರಉದ್ಯಾನವನವನ್ನಾಗಿ ಮಾಡಿರುವುದು ಎಲ್ಲರ ಕಣ್ಮನಸೆಳೆಯುತ್ತವೆ ಎಂದರು.

ಇಳಿಯ ವಯಸ್ಸಿನಲ್ಲಿಯೂಎಳೆಯರಾಗಿ ಭಕ್ತರೇ ತಮ್ಮ ಸರ್ವಸ್ವವೆಂದು ಬಡ ಕುಟುಂಬಗಳು ಮಂಗಲ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಉಚಿತವಾಗಿ ಶ್ರೀಮಠದಕಲ್ಯಾಣ ಮಂಟಪ ಧಾರೆ ಎರೆಯುತ್ತಿರುವುದುಶ್ರೀ ಮಠದ ಸ್ವಾಮೀಜಿಯವರ ನಿಸ್ವಾರ್ಥ ಸೇವಾಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಸದಾಶಿವಪೇಟೆ ವಿರಕ್ತಮಠದ ಶ್ರೀ ಗದಿಗೇಶ್ವರಸ್ವಾಮಿಗಳು, ಶ್ರೀ ಮಠದ ಮಹಾಂತಸ್ವಾಮಿಗಳು ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದವರಾಗಿದ್ದಾರೆ. ಅವರ ತತ್ವ, ಸಿದ್ಧಾಂತಗಳಡಿ ಯಾವುದೇ ವಸ್ತುವನ್ನು ದುಂದು ವೆಚ್ಚ ಮಾಡಬಾರದೆಂಬ ಉದ್ದೇಶದಿಂದ ಕಾರ್ತಿಕೋತ್ಸವವನ್ನುಸಾಂಕೇತಿಕವಾಗಿ ದೀಪಾರಾಧನೆ ಮೂಲಕಆಚರಿಸಿ, ಇದರ ಅಂಗವಾಗಿ ಬಡವರಿಗೆ ಎಣ್ಣೆದಾನ ಮಾಡುತ್ತಿರುವುದು ಶ್ರೀಗಳವರ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು. ಪರಶುರಾಮನರೇಗಲ್‌ ಅವರಿಂದ ಸಂಗೀತ ಸೇವೆ ನಡೆಯಿತು. ಮಕ್ಕಳ ಭರತನಾಟ್ಯ ಪ್ರದರ್ಶನಕಣ್ಮನ ಸೆಳೆಯಿತು. ಸವಣೂರ ಅಕ್ಕನ ಬಳಗದಅಧ್ಯಕ್ಷೆ ಲಲಿತಾ ಮೆಣಸಿನಕಾಯಿ, ಅನ್ನಪೂರ್ಣಅಡವಿಸ್ವಾಮಿಮಠ, ಬಸವಂತರಾವ್‌ಮಾಮ್ಲೆದೇಸಾಯಿ, ಶೇಖಪ್ಪ ಅಂಕಲಕೋಟಿ,ಅನೀಲ್‌ ಕುಮಾರ ಮಾಮ್ಲೆ ದೇಸಾಯಿ, ಸಿದ್ದಪ್ಪಹರವಿ, ಬಿ.ಎಸ್‌.ಗಿಡ್ಡಣ್ಣವರ, ಸುರೇಶ ದೇಸಾಯಿ,ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಸಿ.ಆರ್‌.ದೇಸಾಯಿ ಇತರರಿದ್ದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.

ಅಣ್ಣ ಬಸವಣ್ಣನವರು ಸರ್ವ ಜನಾಂಗದವರನ್ನು ಅನುಭವ ಮಂಟಪಕ್ಕೆ ಕರೆತಂದು ಸರ್ವ ಜನಾಂಗದರಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಆದರೆ, ಈಗ ಜಾತಿಗೊಂದು ಪೀಠ ಉದಯಿಸಿ ಅವರವರ ಸಮುದಾಯಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದದ ಸಂಗತಿ. ಶ್ರೀ ಮಹಾಂತಸ್ವಾಮಿಗಳು, ಪೀಠಾಧಿಪತಿ, ದೇಸಾಯಿಮಠ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ

By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ

ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್‌, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..

ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್‌, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.