ಹೋಳಿಗೆ ಫೈಬರ್‌ ಹಲಿಗೆ ಹಾವಳಿ


Team Udayavani, Mar 19, 2019, 9:48 AM IST

have.jpg

ಹಾವೇರಿ: ಈ ಮೊದಲು ಹೋಳಿ ಸಮೀಪಿಸುತ್ತಿದ್ದಂತೆ ಎಲ್ಲೆಡೆ “ಡಂಣ್‌ ಡಂಣಕ್ಕ, ಜಕ್ಕಣಕ್ಕ ಡಂಡಣಕ್ಕ ಜಕ್ಕಣಕ್ಕ..’ ಎಂಬ ಶಬ್ದ ಲಯಬದ್ಧವಾಗಿ ಎಲ್ಲೆಡೆ ಮೊಳಗುತ್ತಿತ್ತು. ಕೇಳುಗರ ಕಿವಿಗೆ ಚರ್ಮವಾದ್ಯದ ತರಂಗಗಳು ಮೈನವಿರೇಳಿಸುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಚರ್ಮದ ಹಲಿಗೆ ಸಂಪೂರ್ಣ ತೆರೆಮರೆಗೆ ಸರಿದಿದ್ದು ಇದರ ಜಾಗದಲ್ಲಿ ಫೈಬರ್‌ ಹಲಿಗೆ ಕಾಲಿಟ್ಟಿದೆ. ಫೈಬರ್‌ ಹಲಿಗೆ ಹೊರಹೊಮ್ಮುವ ಕರ್ಕಶ ಶಬ್ದ ಕಿವಿಗಡಚಿಕ್ಕುವ ರೀತಿಯ ಅಪ್ಪಳಿಸುವಂತಿದೆ.

ಸಾಂಪ್ರದಾಯಿಕ ಆಚರಣೆಯಲ್ಲೊಂದಾದ ಹೋಳಿ ಹಬ್ಬದ ಸಂದರ್ಭದಲ್ಲಿ ಕೇಳಬಹುದಾಗಿದ್ದ ಹಲಿಗೆ ನಿನಾದ ಮರೆಯಾಗಿದೆ. ಫೈಬರ್‌ ನಿರ್ಮಿತ ಹಲಿಗೆಯ ಬಡಿತ ಎಲ್ಲೆಡೆ ಕೇಳುತ್ತಿತ್ತು. ಮನಸ್ಸಿಗೆ ಮುದ ನೀಡುವ ಬದಲಾಗಿದೆ. ತಲೆನೋವು ತರುವಂತಾಗಿದ್ದು ಇದು ಆಧುನೀಕರಣ ತಂದ ಅದ್ವಾನಗಳಲ್ಲೊಂದಾಗಿದೆ. 

ಹೋಳಿ ಹುಣ್ಣಿಮೆ 15 ದಿನಗಳು ಇರುವಾಗಲೇ ಓಣಿ ಓಣಿಗಳಲ್ಲಿ ಯುವಕರಾದಿಯಾಗಿ ಪುರುಷರೆಲ್ಲರೂ ಗುಂಪು ಕಟ್ಟಿಕೊಂಡು ಬೆಂಕಿ ಹಾಕಿ ಚರ್ಮದ ಹಲಿಗೆ ಬಡಿತಕ್ಕೆ, ಲಯಕ್ಕೆ ಹೊಂದಿಕೊಳ್ಳುವಂತೆ ಕಾಯಿಸುತ್ತಿದ್ದರು. ಹಲಿಗೆ ಕಾಯಿಸುತ್ತ ಕಾಯಿಸುತ್ತ ಬಡಿಯುವ ಹಲಿಗೆ “ಡಂ.. ಡಂ..’ ಎಂಬ ಘಂಟೆಯ ರೀತಿಯಲ್ಲಿ ತರಂಗಳಲ್ಲಿ ಹೊರಹೊಮ್ಮಿಸುವ ಮೂಲಕ ಕೇಳುಗರ ಕಿವಿ ತಂಪಾಗಿಸುತ್ತಿತ್ತು.
 
ಆದರೆ, ಈಗ ಕಾಲ ಬದಲಾಗಿದೆ. ಈಗಲೂ ಹೋಳಿ ಬಂತೆಂದರೆ ಓಣಿ ಓಣಿಗಳಲ್ಲಿ ಚಿಕ್ಕಮಕ್ಕಳಾದಿಯಾಗಿ ದೊಡ್ಡವರವರೆಗೂ ಹಲಿಗೆ ಹಿಡಿದು ಬಡಬಡ ಬಡಿಯುತ್ತಿರುತ್ತಾರೆ. ಅವರು ಎಷ್ಟೇ ಬಡಿದರೂ ಅಲ್ಲಿಂದ ಹೊರಹೊಮ್ಮುವುದು ತರಂಗಗಳನ್ನೊಳಗೊಂಡ ಇಂಪಾದ ಶಬ್ಧವಂತೂ ಅಲ್ಲ.
 
ಆಧುನಿಕ ಸಮಾಜಕ್ಕೆ ಲಗ್ಗೆ ಇಟ್ಟಿರುವ ಫೈಬರ್‌ ಹಲಿಗೆಗಳ ಕರ್ಕಶ ಶಬ್ಧದ ಎದುರು ತರಂಗಗಳ ಸುಲಲಿತ ಶಬ್ಧ ಹೊರಹೊಮ್ಮಿಸುವ ಚರ್ಮದ ಹಲಿಗೆಗಳು ಕಾಲ್ಕಿತ್ತಿವೆ. ಹೀಗಾಗಿ ಹೋಳಿ ಎಂದರೆ ಅನೇಕರಿಗೆ ಕರ್ಕಶ ಶಬ್ಧ ಕೇಳುವ ಹಿಂಸೆ ಅನುಭವ ಆಗುತ್ತದೆ.

ಹೋಳಿ ಹಬ್ಬದಲ್ಲಿ ಓಕುಳಿಗೆ ಮೆರಗು ನೀಡುವ ಚರ್ಮದ ಹಲಿಗೆಯ ತಾಳಕ್ಕೆ ಹುಲಿವೇಷ, ಇತರ ಮುಖವಾಡ ಧರಿ ಕುಣಿಯುವುದು ವಾಡಿಕೆ. ಹಿಂದಿನ ಕಾಲದಲ್ಲಿ ಅಹೋರಾತ್ರಿ ಹಲಿಗೆಯನ್ನು ಬಾರಿಸುವ ಸ್ಪರ್ಧೆ, ಹೋಳಿ ಹಬ್ಬದ ಪದ ಹೇಳುವ ಸ್ಪರ್ಧೆ ನಡೆಯುತ್ತಿದ್ದವು. ಆಧುನಿಕತೆ ಬಿರುಗಾಳಿಗೆ ಸಿಲುಕಿ ಫೈಬರ್‌ ಹಲಿಗೆ ಭರಾಟೆಯಲ್ಲಿ ಸ್ಪರ್ಧೆ ಏರ್ಪಡಿಸಿದರೂ ಅದನ್ನು ಕೇಳುವ ಗಟ್ಟಿ ಕಿವಿಯ ಜನರೇ ಇಲ್ಲದಂತಾಗಿದೆ.
 
ಫೈಬರ್‌ ಹಲಿಗೆ ಹಾವಳಿ: ಕಳೆದ 4-5 ವರ್ಷಗಳಿಂದ ಮಾರುಕಟ್ಟೆಗೆ ಮಹಾರಾಷ್ಟ್ರ, ಬೆಳಗಾವಿ, ಮಿರಜ್‌ ಹಾಗೂ ಸಾಂಗ್ಲಿಯ ಫೈಬರ್‌ ಹಲಿಗೆ ಲಗ್ಗೆ ಇಟ್ಟಿವೆ. ನೋಡಲು ಬಿಳಿಯ ಸುಂದರಿಯಂತೆ ಕಾಣುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿವೆ. ಆದರೆ, ಅದನ್ನು ಬಾರಿಸಿದಾಗ ಹೊರ-ಹೊಮ್ಮುವ ಕರ್ಕಶ ಶಬ್ಧ ಕರ್ಣಗಳಿಗೆ ಸುಡು ಎಣ್ಣೆ ಹಾಕಿದಂತಾಗುತ್ತದೆ. ಆದರೂ ಕಡಿಮೆ ಬೆಲೆ, ನಿರ್ವಹಣೆ ಇಲ್ಲದ ಸುಲಭ ಮಾರ್ಗಿಗಳಿಗೆ ಫೈಬರ್‌ ಹಲಿಗೆ ಹೆಚ್ಚು ಆಕರ್ಷಿಸುತ್ತಿವೆ. 

ಚರ್ಮ ಹಲಿಗೆ ತಯಾರಿಕರ ಬದುಕು ದುಸ್ತರ: ಹಿಂದೆ ಹೋಳಿ ಹಬ್ಬ ತಿಂಗಳು ಇರುವ ಮುಂಚೆಯೇ ಹಲಿಗೆ ತಯಾರಿಸುವವರಿಗೆ ಮುಂಗಡ ಹಣ ಕೊಟ್ಟು ಇಂತಿಷ್ಟು ಹಲಿಗೆ ತಯಾರಿಸಿ ಕೊಡಿ ಎಂದು ಹಲಿಗೆ ತಯಾರಕರ ಮನೆ ಬಾಗಿಲಿಗೆ ಹೋಗುತ್ತಿದ್ದರು. ಆಗ ತಮಟೆ, ರಣಹಲಿಗೆ, ಕೈಹಲಿಗೆ ಸೇರಿದಂತೆ ಮಕ್ಕಳಿಂದ ಹಿಡಿದು ದೊಡ್ಡವರ ಬಾರಿಸುವ ಹಲಿಗೆ ತಯಾರಿಕೆಯಲ್ಲಿ ಹಿಗ್ಗಿನಿಂದ ತೊಡಗುತ್ತಿದ್ದರು.

ಕಾಲಚಕ್ರದ ಸುಳಿಗೆ ಸಿಲುಕಿ ಫೈಬರ್‌ ಹಲಿಗೆಯಿಂದ ವಂಶಪರಂಪರೆ ಚರ್ಮದ ತಯಾರಿಸುವ ಕುಲಕಸಬು ನಂಬಿದವರ ಬದುಕು ಬೀದಿಗೆ ಬಂದಿದೆ. ಫೈಬರ್‌ ಹಲಿಗೆ ಮೇಲಿನ ವ್ಯಾಮೋಹ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಚರ್ಮದ ಹಲಿಗೆಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವ ಪ್ರಸಂಗ ಬಂದರೂ ಆಶ್ಚರ್ಯಪಡಬೇಕಿಲ್ಲ ಚರ್ಮದ ಹಲಿಗೆ ಕೇಳುವವರೇ ಇಲ್ಲ ಚರ್ಮದ ಹಲಿಗೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕಾಯಿಸಬೇಕು. ಹದಗೊಳಿಸಿ ಬಡಿತ ಬಡಿಯಬೇಕು. ಇಷ್ಟೆಲ್ಲ
ತೊಂದರೆ ಇಲ್ಲದ ಫೈಬರ್‌ ಹಲಿಗೆ ಕಡೆ ಜನರು ವಾಲಿದ್ದರಿಂದ ಚರ್ಮದ ಹಲಿಗೆ ಕೇಳುವವರೇ ಇಲ್ಲದಂತಾಗಿದೆ. 8-10 ವರ್ಷಗಳ ಹಿಂದೆ ಮೊದಲು ಪ್ರತಿ ಹಬ್ಬಕ್ಕೆ ಸಣ್ಣ ಹಾಗೂ ದೊಡ್ಡ ಹಲಿಗೆ ಸೇರಿ 500ಕ್ಕೂ ಹೆಚ್ಚು ಹಲಿಗೆ ಮಾರಾಟ ಮಾಡುತ್ತಿದ್ದೇವು. ಈಗ ವ್ಯಾಪಾರ, ತಯಾರಿಕೆ ಎರಡೂ ನಿಂತಿದೆ.
 ಚನ್ನಯ್ಯ, ಚರ್ಮದ ಹಲಿಗೆ ತಯಾರಕ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.