ಪಾದರಕ್ಷೆ ಹೊಲಿಯುವ ರಾಣಿಗೆ ಸನ್ಮಾನ
Team Udayavani, May 18, 2019, 1:38 PM IST
ಹಾವೇರಿ: ಕೆಇಬಿ ಕಾರ್ಮಿಕ ಸಂಘ ರಾಣಿ ಅರ್ಜುನ್ ಸೇರಿ ಇತರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿತು.
ಹಾವೇರಿ: ಕೆಇಬಿ ಕಾರ್ಮಿಕ ಸಂಘ ಇತ್ತೀಚೆಗೆ ನಡೆದ ಕಾರ್ಮಿಕ ದಿನದಂದು ಪಾದರಕ್ಷೆ ಹೊಲಿಯುವ ಮಹಿಳೆ ‘ರಾಣಿ’ ಅವರನ್ನು ಸನ್ಮಾನಿಸಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನಗರದ ಸಿದ್ಧಪ್ಪ ರಸ್ತೆ ಬಳಿ ಮಳೆ, ಬಿಸಿಲು, ಧೂಳುಗಳ ಮಧ್ಯೆ ಕುಳಿತು ಪಾದರಕ್ಷೆ ಹೊಲಿಯುವ ರಾಣಿ ಅರ್ಜುನ್ ಮೂಲತಃ ಪಾಂಡಿಚೇರಿ ಪ್ರಾವ್ಹೆನ್ಸಿಯ ಗೋರಿಮೂಡಿ ಗ್ರಾಮದವರು. ಮೂರು ಮಕ್ಕಳ ತಾಯಿ. ಆರು ಮೊಮ್ಮಕ್ಕಳು. 9ನೇ ತರಗತಿವರೆಗೆ ಓದಿರುವ ಸುಶಿಕ್ಷಿತೆ. ತಂದೆ ಸೆಲ್ವ್ರಾಜ, ತಾವಿ ವೀರಮ್ಮ. 53 ಪ್ರಾಯದ ರಾಣಿಯವರ ಪತಿ ಅರ್ಜುನ್ ಸೇಲಂ ಇಲ್ಲಿಯ ನಗರಸಭೆ ಕಾರ್ಮಿಕ ಹಾಗೂ ರಂಗಭೂಮಿ ಕಲಾವಿದ.
1984ರಲ್ಲಿ ಪಾಂಡಿಚೇರಿಯಿಂದ ಬಂದು ತಮಿಳುನಾಡಿನ ಅರ್ಜುನ್ ಅವರನ್ನು ಬೆಂಗಳೂರಿನಲ್ಲಿ ಮದುವೆಯಾದರು. ಅವರ ಮದುವೆ ಆದ ಒಟ್ಟು ಖರ್ಚು 400 ರೂ. ಮಾತ್ರ. ಪ್ರತಿ ದಿನ ಬೆಳಗ್ಗೆ 6ರಿಂದ ಸೂರ್ಯಾಸ್ತದವರೆಗೆ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿರುವ ರೇಣುಕಾ ದರ್ಶಿನಿ ಬದಿಗೆ ನಿತ್ಯ ಪಾದರಕ್ಷೆ ಹೊಲಿಯುವ ಕಾಯಕ ಮಾಡುತ್ತಾರೆ. ಕಾಯಕದ ತಪಸ್ಸಿನ ಫಲದಿಂದಲೇ ನಡೆಯುತ್ತಿದೆ ಅವರ ಉಪಜೀವನ.
ಕಾರ್ಮಿಕ ಸನ್ಮಾನದ ಬಗ್ಗೆ ಪ್ರಸ್ತಾಪಿಸಿದಾಗ ‘ನಮ್ಮ ಕೈ ಕಾಲೇ ನಮ್ಮ ದುಡಿಯುವ ಆಳುಗಳು’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ಸಂಘಟಕರು ಸ್ಮರಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಇಲ್ಲಿಯ ಕೆಇಬಿ ಕಾರ್ಮಿಕ ನೌಕರರ ಸಂಘ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಕಾರ್ಮಿಕ ದಿನ ಆಚರಿಸಿಕೊಂಡು ಬಂದಿದ್ದು ಈ ಬಾರಿ ಸನ್ಮಾನ ಸ್ವೀಕರಿಸಿದ ಕಾರ್ಮಿಕರಲ್ಲಿ ಅಸಂಘಟಿತ ವಲಯದ ರಾಣಿ ಅರ್ಜುನ್ ಕೂಡ ಒಬ್ಬರಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.