ಉಚಿತ ಯೋಗ ತರಬೇತಿಗೆ ಹೆಸರಾದ ಪತಂಜಲಿ
ಕಳೆದ 13 ವರ್ಷಗಳಿಂದ ಪತಂಜಲಿ ಯೋಗ ಸಮಿತಿ ಸದ್ದಿಲ್ಲದೇ ನಡೆಸುತ್ತಿರುವ ಸಮಾಜಮುಖೀ ಕಾರ್ಯ-ಎಲ್ಲೆಡೆ ಶ್ಲಾಘನೆ
Team Udayavani, Jun 20, 2022, 5:21 PM IST
ರಾಣಿಬೆನ್ನೂರ: ಶ್ರೀಸಾಮಾನ್ಯರಲ್ಲಿ ಯೋಗದ ಅರಿವಿನ ಜೊತೆಗೆ ಕಳೆದ 13 ವರ್ಷಗಳಿಂದ ಸ್ಥಳೀಯ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಭಾರತ್ ಸ್ವಾಭಿಮಾನ ಟ್ರಸ್ rನವರು ನಿಸ್ವಾರ್ಥ ಸೇವೆಯೊಂದಿಗೆ ಸಹಸ್ರಾರು ಜನರಿಗೆ ನಿರಂತರವಾಗಿ ಉಚಿತ ಯೋಗ ತರಬೇತಿ ಶಿಬಿರ, ಆರೋಗ್ಯ ತಪಾಸಣೆ ಶಬಿರಗಳನ್ನು ನಡೆಸುವ ಮೂಲಕ ಸದ್ದಿಲ್ಲದೇ ಮಾಡುತ್ತಿರುವ ಸಮಾಜಮುಖೀ ಕಾರ್ಯಗಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
2009ರಿಂದ ಯೋಗ ಶಿಬಿರ: ಯೋಗದಿಂದ ಸರ್ವ ರೋಗಗಳು ನಿವಾರಣೆಯಾಗುತ್ತವೆ ಎಂಬ ಯೋಗ ಗುರು ಬಾಬಾ ರಾಮದೇವ ಅವರ ನುಡಿಯನ್ನು ಮೆಚ್ಚಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಭಾರತ್ ಸ್ವಾಭಿಮಾನ ಟ್ರಸ್ಟ್‌ನವರು ನಗರದ ಆದಿಶಕ್ತಿ ದೇವಸ್ಥಾನದ ಧ್ಯಾನಮಂದಿರದಲ್ಲಿ ಆರಂಭಿಸಿರುವ ಯೋಗ ಶಿಬಿರ ಇಂದು ತಾಲೂಕಿನಾದ್ಯಂತ 40 ಮತ್ತು ಜಿಲ್ಲೆಯ ತಾಲೂಕುಗಳೂ ಸೇರಿದಂತೆ 60ಕ್ಕೂ ಅಧಿ ಕ ಕಡೆಗಳಲ್ಲಿ ಶಿಬಿರಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ರೋಗಿಗಳ ಉಚಿತ ತಪಾಸಣೆ: ಯೋಗ ಶಿಬಿರಗಳನ್ನು ಮಾಡುವುದರ ಜೊತೆಗೆ ಹಲವಾರು ಜಾಗೃತಿ ಜಾಥಾದಂತಹ ಜನೋಪಯೋಗಿ ಕಾರ್ಯಗಳನ್ನು ಪತಂಜಲಿ ಸಮಿತಿ ಮಾಡುತ್ತಿದೆ. ಪತಂಜಲಿ ಉತ್ಪನ್ನಗಳ ಮಾರಾಟದೊಂದಿಗೆ ಪ್ರತಿದಿನ ಆಗಮಿಸುವ ಅನೇಕರಿಗೆ ಇಲ್ಲಿನ ಪಿಬಿ ರಸ್ತೆಯಲ್ಲಿರುವ ಪತಂಜಲಿ ಮೇಘಾ ಸ್ಟೋರ್‌ನಲ್ಲಿಯೇ ನುರಿತ ವೈದ್ಯರಿಂದ ಪ್ರತಿ ದಿನ ಉಚಿತವಾಗಿ ತಪಾಸಣೆ, ಸಲಹೆಗಳನ್ನು ನೀಡಲಾಗುತ್ತದೆ.
ನುರಿತ ಯೋಗ ಶಿಕ್ಷಕರ ಬಳಕೆ: ಸರ್ವ ರೋಗಕ್ಕೂ ಯೋಗವೇ ಮದ್ದು ಎಂದರಿತ ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ರವಿ ಬಿಜಾಪೂರ ಅವರು ಆಪ್ತರು, ನಾಗರಿಕರು, ಯೋಗ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಆರಂಭಿಸಿದ ಶಿಬಿರಗಳು ಈಗಲೂ ಅಡ್ಡಿ ಆತಂಕಗಳಿಲ್ಲದೇ ನಿರಂತರವಾಗಿ ಮುನ್ನಡೆಯುತ್ತಿವೆ. ಜಿಲ್ಲಾದ್ಯಂತ ಪ್ರತಿದಿನ ಸುಮಾರು 1000ಕ್ಕೂ ಅಧಿ ಕ ಜನರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, 100ಕ್ಕೂ ಅಧಿಕ ನುರಿತ ಯೋಗ ಶಿಕ್ಷಕರು ಉಚಿತವಾಗಿ ಶಿಬಿರ ಮುನ್ನಡೆಸಿಕೊಡುತ್ತಿದ್ದಾರೆ.
ಯೋಗ ಎಲ್ಲ ರೋಗಗಳಿಗೂ ರಾಮಬಾಣವಾಗಿದೆ. ಯೋಗದ ಬಗ್ಗೆ ಮೊದಲಿನಿಂದಲೂ ಹೆಚ್ಚಿನ ಆಸಕ್ತಿಯಿತ್ತು. ಕಳೆದ ದಶಕಗಳಿಂದೀಚೆಗೆ ನಗರದಾದ್ಯಂತ ಯೋಗ ಶಿಬಿರಗಳನ್ನು ತೆರೆದಾಗ ಅಷ್ಟೊಂದು ಪ್ರಮಾಣದಲ್ಲಿ ಜನರಲ್ಲಿ ಅಭಿರುಚಿ ಇರಲಿಲ್ಲ. ಆದರೀಗ ಜನರಲ್ಲಿ ಬಹಳಷ್ಟು ಜಾಗೃತಿ ಮೂಡಿದೆ. ವೈದ್ಯರ ಸಹಾಯವಿಲ್ಲದೇ ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಸರ್ವರಿಗೂ ಅರ್ಥವಾಗಿದೆ. –ಎಸ್.ಡಿ ಹಾವನೂರ, ಯೋಗ ಶಿಕ್ಷಕ
ಜಿಲ್ಲಾದ್ಯಂತ ಕಳೆದ 13 ವರ್ಷಗಳಿಂದ ಶಿಬಿರಗಳನ್ನು ನಿರಂತರವಾಗಿ ಯಶಸ್ವಿಯಾಗಿ ಮುನ್ನಡೆಸಲು ಸಮಿತಿ ಹಾಗೂ ಟ್ರಸ್ಟ್‌ನ ಸರ್ವರ ಸಹಕಾರ, ನಾಗರಿಕರ ಪ್ರೋತ್ಸಾಹವೇ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಪರಿಣಾಮದಿಂದ ನಾಗರಿಕರು ಶಿಬಿರಕ್ಕೆ ಬರಲು ಹಿಂದೇಟು ಹಾಕಿದ್ದು, ಇದೀಗ ಮತ್ತೆ ಎಂದಿನಂತೆ ಯೋಗಾಸಕ್ತರು ಆಗಮಿಸುತ್ತಿದ್ದಾರೆ. ನಗರದ ಪ್ರತಿಯೊಂದು ವಾರ್ಡ್ನಲ್ಲೂ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿಯೂ ಯೋಗದ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಶಿಬಿರಗಳನ್ನು ಏರ್ಪಡಿಸಲು ಯೋಜನೆಯಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ. –ರವೀಂದ್ರ ಬಿಜಾಪೂರ, ಪತಂಜಲಿ ಸಮಿತಿಯ ಅಧ್ಯಕ್ಷ
-ಮಂಜುನಾಥ ಎಚ್. ಕುಂಬಳೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.