ಕುಸಿಯುತ್ತಿದೆ ನವಾಬರ ಕೋಟೆ ದ್ವಾರ
Team Udayavani, Aug 11, 2019, 12:48 PM IST
ಸವಣೂರು: ನಿರಂತರ ಸುರಿಯುತ್ತಿರುವ ಮಳೆಗೆ ಕುಸಿದಿರುವ ಪಟ್ಟಣದ ಸಿಂಪಿಗಲ್ಲಿಯ ನವಾಬರ ಕಾಲದ ಕೋಟೆ ದ್ವಾರದ ಗೋಡೆ.
ಸವಣೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನವಾಬರು ನಿರ್ಮಿಸಿದ್ದ ಸಿಂಪಿಗಲ್ಲಿಯ ದಂಡಿನದುರ್ಗಾದೇವಿ ದೇವಸ್ಥಾನದ ಹತ್ತಿರದ, ಮೋತಿ ತಲಾಬ್ ದಂಡೆಯ ಮೇಲಿನ ಹಾಗೂ ಬಂಕಾಪೂರ ರಸ್ತೆಯಲ್ಲಿರುವ ಕೋಟೆಯ ದ್ವಾರಗಳ ಕಲ್ಲುಗಳು ಕುಸಿಯುತ್ತಿವೆ.
ದ್ವಾರಗಳ ಮೂಲಕ ಸಾರ್ವಜನಿಕರ ಓಡಾಟವಿರುವುದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಮಾರಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ದ್ವಾರಗಳ ಸುತ್ತ ವಾಸವಿರುವ ಕುಟುಂಬಗಳ ರಕ್ಷಣೆಗಾಗಿ ಶೀಘ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯವಾಗಿದೆ.
ಪಟ್ಟಣದ ಅಂಬೇಡ್ಕರ ನಗರ, ಗೌಡ್ರಓಣಿ, ಕೋರಿಪೇಟಿ, ವಡ್ಡರ ಓಣಿ, ದಂಡಿನಪೇಟಿ, ಖಾದರಬಾಗ, ಕಸಬಾ ಪೇಟೆ, ಶುಕ್ರವಾರ ಪೇಟೆ, ಸಮಗಾರ ಓಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ 120ಕ್ಕೂ ಮನೆಗಳು ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿ ರವಿ ಮಾಚಕ್ಕನವರ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.