ವೀರಭದ್ರ ಶಿವಾಚಾರ್ಯರಿಂದ ಗೋ ಸೇವೆ
25 ಗುಂಟೆ ಜಾಗೆಯಲ್ಲಿ ಗೋಶಾಲೆ ಸ್ಥಾಪನೆ, ತ್ರಿವಿಧ ಜಂಗಮ ದಾಸೋಹ ಟ್ರಸ್ಟ್‌ಗೆ ಜಮೀನು ದಾನ
Team Udayavani, Mar 1, 2021, 4:33 PM IST
ರಾಣಿಬೆನ್ನೂರ: ತಾಲೂಕಿನ ಸುಕ್ಷೇತ್ರಲಿಂಗದಹಳ್ಳಿ ರಂಭಾಪುರಿ ಶಾಖಾಮಠದವೀರಭದ್ರ ಶಿವಾಚಾರ್ಯ ಸ್ವಾಮಿಗಳುಭಕ್ತರ ಸಹಕಾರದೊಂದಿಗೆ ಗೋಶಾಲೆನಡೆಸುತ್ತಿದ್ದು, ಗೋಸೇವೆಯಲ್ಲಿ ನಿರತರಾಗಿದ್ದಾರೆ.
25 ಗುಂಟೆ ಜಾಗೆಯಲ್ಲಿ ಸ್ಥಾಪಿಸಿರುವ ಗೋಶಾಲೆಯಲ್ಲಿ 9 ಗೋವುಗಳಿದ್ದು,ಸರಕಾರದ ಯಾವುದೇ ಅನುದಾನ ಪಡೆಯದೆ ನಡೆಸುತ್ತಿದ್ದಾರೆ. ಇಲ್ಲಿರುವಹಸುಗಳಿಗೆ ರಾಜೋಪಚಾರ ಇದೆ. ಇವುಗಳಿಗೆ ಹಸಿರು ಮೇವು ಸಹಿತ ಜೋಳದ ದಂಟುಗಳನ್ನುಸಣ್ಣದಾಗಿ ಕತ್ತರಿಸಿ ಹಾಕಲಾಗುತ್ತಿದೆ.ಮಾರುವ ಹಸುಗಳನ್ನು ಖರೀ ದಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ಪೂಜ್ಯರು.
ಗೋಮಾತೆ ಯಜಮಾನನಿಗೆ ತೋರುವ ಪ್ರೀತಿ ಎಂತಹದ್ದು ಎಂಬುದು ಸಾಕಿದವರಿಗೆ ಗೊತ್ತು.ಅದು ಅವರ್ಣನೀಯ. ನಮ್ಮಪ್ರೀತಿಯ ಮಾತುಗಳಿಗೆ ಅವು ಸ್ಪಂದಿಸುವ ರೀತಿಯೇ ಬೇರೆ.ಗೋವುಗಳ ಆರೈಕೆಯಲ್ಲಿ ಮಲ್ಲಪ್ಪಜ್ಜಓಲೇಕಾರ ಮತ್ತು ಸಿ.ಸಿ.ಹಿರೇಮಠ ಅವರ ಪಾತ್ರ ಪ್ರಮುಖವಾಗಿದೆ ಎನ್ನುತ್ತಾರೆ ಶ್ರೀಗಳು.
ಲಿಂಗದಳ್ಳಿಯ ಶ್ರೀ ವೀರಭದ್ರ ಶಿವಾಚಾರ್ಯರು ಒಂದು ಮಠವನ್ನು ಮುನ್ನಡೆಸುವುದರೊಂದಿಗೆ ವಿದ್ಯುತ್ ಪ್ರಸರಣ ನಿಗಮದ ಇಟಗಿ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಮಗೆ ಪ್ರತಿ ತಿಂಗಳ ಬರುವ 1.33 ಲಕ್ಷ ರೂ.ಸಂಭಾವನೆಯನ್ನು ಶಿಕ್ಷಣ, ದಾಸೋಹ, ಗೋಸೇವೆ ಸೇರಿದಂತೆ ಧರ್ಮ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ.
ಸುಕ್ಷೇತ್ರ ಲಿಂಗದಹಳ್ಳಿಯ ತಮ್ಮ ಸ್ವಂತ ಜಮೀನಿನಲ್ಲಿ ರಂಭಾಪುರಿ ಶಾಖಾ ಮಠಕಟ್ಟಿಸಿ ಆದಿ ಜಗದ್ಗುರು ರೇಣುಕಾಚಾರ್ಯರು, ಸ್ಫಟಿಕ ಲಿಂಗ ಸ್ಥಾಪಿಸಿದ್ದಾರೆ. ಮಠದ ಆವರಣದಲ್ಲಿ ದ್ವಾದಶ ಜ್ಯೋತಿರ್ಲಿಂಗದ ಪ್ರತೀಕವಾಗಿ 12 ಲಿಂಗಗಳು, 18 ಶಕ್ತಿಪೀಠಗಳ ಪ್ರತೀಕವಾಗಿ ಶಕ್ತಿದೇವತೆ ಸ್ಥಾಪಿಸಿದ್ದಾರೆ.ಶ್ರೀ ರುದ್ರಮುನೀಶ್ವರ ತ್ರಿವಿಧ ಜಂಗಮ ದಾಸೋಹ ಟ್ರಸ್ಟ್‌ಗೆ ತಮ್ಮ ಸ್ವಂತ ಜಮೀನು ದಾನ ಮಾಡಿದ್ದಾರೆ.
ಗೋವುಗಳ ಸೇವೆಯಿಂದ ಮನಸ್ಸಿಗೆ ನೆಮ್ಮದಿ, ಸಂತೋಷ, ಸಂತೃಪ್ತಿ ಮೂಡುತ್ತದೆ. ಗೋಸೇವೆ ಮಾಡುವುದರಿಂದ ಆಸ್ತಮಾ, ಚರ್ಮದ ಕಾಯಿಲೆ ಗಳು ಬರ ದಂತೆ ತಡೆಯುತ್ತದೆ. ಇವುಗಳ ಪೋಷಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. – ಶ್ರೀ ವೀರಭದ್ರ ಶಿವಾಚಾರ್ಯರು, ಲಿಂಗದಹಳ್ಳಿ
-ಮಂಜುನಾಥ ಎಚ್. ಕುಂಬಳೂರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.