ಮೂಢನಂಬಿಕೆ ಮಟ್ಟ ಹಾಕಲು ಪವಾಡ ರಹಸ್ಯ ಬಯಲು
Team Udayavani, May 13, 2019, 3:56 PM IST
ಹಾವೇರಿ: ಮೂಢನಂಬಿಕೆ ಮಟ್ಟಹಾಕಲು, ಮುಗ್ಧ ಜನರು ಮೋಸ ಹೋಗದಂತೆ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಿಕ್ಷಕ ಆರ್.ಸಿ. ನಂದಿಹಳ್ಳಿ ಹೇಳಿದರು.
ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ಯಾಡಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಆಶಾಕಿರಣ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬ್ಯಾಡಗಿ ರಂಗಮಂದಿರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಡೆದ ಪವಾಡ ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರಂತರವಾಗಿ ಜಾಗೃತಿ ಮೂಡಿಸಲು ಪವಾಡ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೇ ಮಕ್ಕಳಲ್ಲಿ ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಲು ಹಾಗೂ ವಿಜ್ಞಾನ ವಿಷಯದಲ್ಲಿ ಆಸಕ್ತಿದಾಯಕ ಕಲಿಕೆಗೆ ಪೂರಕವಾಗಿದೆ ಎಂದರು.
ಆಶಾಕಿರಣ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಮಾತನಾಡಿ, ಮೂಢನಂಬಿಕೆ ಎಂದ ತಕ್ಷಣ ನಮಗೆ ನೆನೆಪಾಗುವುದು ಮಾಟ, ಮಂತ್ರ, ದೆವ್ವ, ಭೂತಾರಾಧನೆ, ಬೆಕ್ಕು ಅಡ್ಡ ಹೊಯಿತು, ಸೀನು, ಕುರಿ-ಕೋಣ ಬಲಿಕೊಡುವುದು, ನೋಡಿದ ತಕ್ಷಣ ಬೆಂಕಿ ಹತ್ತುವುದು, ಮಂತ್ರದ ನಿಂಬೆಹಣ್ಣು ಮುಂತಾದ ಹತ್ತು ಹಲವಾರು ಕಂದಾಚಾರಗಳಿಗೆ ಮುಗ್ಧ ಜನ ಬಲಿಯಾಗುತ್ತಿದ್ದಾರೆ. ಡೋಂಘಿ ಬಾಬಾಗಳಿಂದ ಹಾಗೂ ಸ್ವಯಂಘೋಷಿತ ದೇವಮಾನವರಿಂದ ಮುಗ್ಧ ಮಹಿಳೆಯರು, ಅಮಾಯಕರು ಮೋಸಕ್ಕೆ ಒಳಗಾಗುತ್ತಿದ್ದಾರೆ, ಇವೆಲ್ಲವುಗಳ ಜಾಗೃತಿಗಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉಪಯುಕ್ತ ಎಂದರು.
ಪವಾಡ ರಹಸ್ಯ ಬಯಲು: ತೆಂಗಿನ ಕಾಯಿಯಲ್ಲಿ ಹೂವು ಬರುವುದು, ನಿಂಬೆ ಹಣ್ಣಿನಲ್ಲಿ ರಕ್ತ ಬರುವುದು, ಬೆಂಕಿ-ಕರ್ಪೂರ ಬಾಯಲ್ಲಿ ಬೆಳಗುವುದು, ಗಾಳಿಯಲ್ಲಿ ವಿಭೂತಿ, ಚೈನು, ಉಂಗುರ ಸೃಷ್ಟಿಸುವುದು, ಮುಟ್ಟಿದ್ದೆಲ್ಲ ಸಿಹಿ ಮಾಡುವುದು, ಕೊಳ್ಳಿ ದೆವ್ವ, ಮೈಯಲ್ಲಿ ಶಸ್ತ್ರ ಹಾಕಿಕೊಳ್ಳುವುದು ಹೀಗೆ ಮುಂತಾದವುಗಳನ್ನು ಕಡಿವಾಣ ಹಾಕುವ ಸಲುವಾಗಿ ವೈಜ್ಞಾನಿಕ ಕ್ರಿಯೆಯಿಂದ ಜರುಗುವ ಅದರಲ್ಲಿ ಅಡಗಿರುವ ನಿಜವಾದ ರೂಪ ತೋರಿಸಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ್, ರಾಧಾ, ರಮೇಶ ನಾಯ್ಕ, ಮಂಗಳಾ ಮತ್ತು ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.