15 ವರ್ಷದಲ್ಲಿ ಅಂತರ್ಜಲ ಭಾರಿ ಕುಸಿತ

•ಒಂದೂವರೆ ದಶಕದಲ್ಲಿ ಈ ಬಾರಿ ಪಾತಾಳ ಕಂಡ ಜೀವಜಲ•500 ಅಡಿ ಕೊರೆದರೂ ಸಿಗದ ಜಲ

Team Udayavani, May 28, 2019, 12:34 PM IST

haveri-tdy-1..

ಹಾವೇರಿ: ನೀರಿಲ್ಲದೇ ಒಣಗಿರುವ ಹಾವೇರಿಯ ಹೆಗ್ಗೇರಿ ಕೆರೆ ಅಂಗಳ.

ಹಾವೇರಿ: ಸತತ ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಜಿಲ್ಲೆಯ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದು ಕಳೆದ ಒಂದೂವರೆ ದಶಕದ ಅಂತರ್ಜಲಮಟ್ಟ ಗಮನಿಸಿದರೆ ಈ ವರ್ಷ ಅಂತರ್ಜಲ ಅತಿಹೆಚ್ಚು ಕುಸಿದಿದೆ.

ಸಮರ್ಪಕ ಮಳೆ ಇಲ್ಲದೇ ತುಂಗಭದ್ರಾ, ವರದಾ ನದಿಗಳು ಸಂಪೂರ್ಣ ಬತ್ತಿದ್ದು ಅಂತರ್ಜಲ ಭಾರಿ ಕುಸಿತ ಕಂಡಿದೆ. ಕೆರೆ, ಹಳ್ಳ, ನದಿ, ನಾಲೆಗಳೆಲ್ಲ ಈ ಬಾರಿ ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಪ್ರತಿದಿನವೂ ಒಂದಡಿಯಷ್ಟು ಆಳಕ್ಕೆ ಹೋಗುತ್ತಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ ಕೈಗೊಂಡ ಸಮೀಕ್ಷೆಯಿಂದ ಖಚಿತ ಪಟ್ಟಿದೆ.

ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸರಾಸರಿ 200-250 ಅಡಿ ಆಳ ಕೊರೆದರೆ ನೀರು ಸಿಗುತ್ತಿತ್ತು. ಆದರೆ, ಸದ್ಯ 500 ಅಡಿಕೊರೆದರೂ ನೀರು ಸಿಗುತ್ತಿಲ್ಲ. ವಿಫಲಗೊಂಡ ಕೊಳವೆಬಾವಿಗಳೇ ಅಧಿಕವಾಗುತ್ತಿವೆ. ಸರ್ಕಾರದಿಂದ ಕೊರೆಸಿರುವ ಕೊಳವೆಬಾವಿಗಳನ್ನು ಮರು ಡ್ರಿಲ್ಲಿಂಗ್‌ ಮಾಡಿಸಲಾಗಿದ್ದು ಅಂಥ ಕೊಳವೆಬಾವಿಗಳೂ ಈ ಬಾರಿ ಬತ್ತಿವೆ.

ಅಂತರ್ಜಲ ಕುಸಿತ ಪ್ರಮಾಣ: 2004-05ರಿಂದ ಪ್ರಸಕ್ತ ಜನವರಿ ತಿಂಗಳವರೆಗಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಈ ಸಲ ಅಂತರ್ಜಲ ಅತಿ ಕೆಳಗೆ ಹೋಗಿದೆ. ಜಿಲ್ಲೆಯಲ್ಲಿ 2004ರ ಈ ವೇಳೆಗೆ ಜಿಲ್ಲೆಯ ಸರಾಸರಿ ಅಂತರ್ಜಲಮಟ್ಟ 25.26 ಮೀಟರ್‌ ಇತ್ತು. 2005ರಲ್ಲಿ 22.35 ಮೀಟರ್‌ ಸರಾಸರಿ ಇತ್ತು. ಜನವರಿ ತಿಂಗಳಲ್ಲಿ ಸರಾಸರಿ ಸ್ಥಿರ ಜಲಮಟ್ಟವು 14 ಮೀಟರ್‌ಗೆ ಇರುತ್ತಿತ್ತು. ಆದರೆ, ಈ ವರ್ಷ ಜನವರಿಯಲ್ಲಿ ಅದು 17.71 ಮೀಟರ್‌ ಆಗಿದ್ದು, ಸುಮಾರು ಎರಡು ಅಡಿಯಷ್ಟು ನೀರು ಕೆಳಗೆ ಹೋಗಿದೆ. ಮೇ ತಿಂಗಳಲ್ಲಿ ಇದು 20 ಮೀ. ದಾಟಿದೆ.

2006ರಲ್ಲಿ 20.84 ಮೀಟರ್‌ಗೆ ಕುಸಿತ ಕಂಡಿದ್ದರೆ, 2007ರಲ್ಲಿ 17.06, 2008ರಲ್ಲಿ 16.52, 2009ರಲ್ಲಿ 18.50 ಮೀಟರ್‌ ಆಗಿತ್ತು. ಹೀಗೆ ನಿರಂತರವಾಗಿ ನೀರಿನ ಮಟ್ಟ ಏರಿದ್ದನ್ನು ಅಂಕಿಸಂಖ್ಯೆಗಳಿಂದ ಕಂಡುಬರುತ್ತದೆ. 20015ರಲ್ಲಿ 15.82 ಮೀಟರ್‌ ಇದ್ದ ಅಂತರ್ಜಲ ಮಟ್ಟವು ಈ ಬಾರಿ ಡಿಸೆಂಬರ್‌ ಅಂತ್ಯದಲ್ಲೇ 20.96 ಮೀಟರ್‌ಗೆ ಕುಸಿದಿದೆ. ಅಂದರೆ ಕಳೆದ ವರ್ಷಕ್ಕಿಂತ ಸುಮಾರು 5 ಮೀಟರ್‌ನಷ್ಟು ಕುಸಿದಿದೆ. ಮಾರ್ಚ್‌ ಹಾಗೂ ಏಪ್ರಿಲ್, ಮೇ ಈ ಮೂರು ತಿಂಗಳಲ್ಲಂತೂ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಎಲ್ಲ ಕೊಳವೆಬಾವಿಗಳಲ್ಲಿ ಸದ್ಯ ಸರಾಸರಿ ಐದು ಮೀಟರ್‌ ನೀರು ಇಳಿಕೆಯಾಗಿದೆ. ಇನ್ನು ಕೆಲವು ಕೊಳವೆಬಾವಿಗಳಲ್ಲಿ ದಿನವೂ ಅರ್ಧ ಅಡಿಯಷ್ಟು ನೀರು ತಳಕ್ಕೆ ಹೋಗುತ್ತಿದೆ.

ಖಾಲಿಯಾಗುವ ಆತಂಕ: ಮಳೆ ಈ ವಾರದಲ್ಲಿಯೂ ಬರದೇ ಇದ್ದರೆ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ಬಹುತೇಕ ಎಲ್ಲ ಕೊಳವೆ ಬಾವಿಗಳು ನೀರಿಲ್ಲದೇ ಒಣಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಕೊಳವೆಬಾವಿಗಳಲ್ಲಿ ನೀರು ಪಾತಾಳ ಕಂಡಿದ್ದು, ಅಲ್ಪಸ್ವಲ್ಪ ಸವಳು ನೀರು ಬರುತ್ತಿದೆ. ಆದ್ದರಿಂದ ತೀರಾ ಪಾತಾಳ ಕಂಡ ಕೊಳವೆಬಾವಿ ನೀರು ಕುಡಿಯಲು ಆಗದ ಪರಿಸ್ಥಿತಿ ಇದೆ.

ಒಟ್ಟಾರೆ ಈ ಬಾರಿ ಬರದಿಂದಾಗಿ ಅಂತರ್ಜಲಮಟ್ಟ ಭಾರೀ ಪ್ರಮಣದಲ್ಲಿ ಕುಸಿದಿದ್ದು, ಜೂನ್‌ ತಿಂಗಳಲ್ಲಿಯೂ ಬವಣೆ ಎದುರಿಸುವ ಮೊದಲು ಸಾಕಷ್ಟು ಮಳೆಯಾಗಿ ಭೂಮಿ ತಂಪಾದರೆ ಸಾಕು ಎಂಬ ಅಪೇಕ್ಷೆ ಎಲ್ಲರದ್ದಾಗಿದೆ.

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15

Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್‌ ಶೂಟಿಂಗ್‌

1

Udupi: ಕುದ್ರು ನೆಸ್ಟ್‌ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.