ಗುಲಾಬಿ ಆಂದೋಲನಕ್ಕೆ ಚಾಲನೆ
Team Udayavani, Dec 14, 2020, 6:29 PM IST
ಶಿಗ್ಗಾವಿ: ತಾಲೂಕು ಆಡಳಿತ, ತಾಪಂ,ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಪಟ್ಟಣದ ಪಾನಶಾಪ್ ಗಳಿಗೆ ತಹಶೀಲ್ದಾರ್ ಪ್ರಕಾಶ ಕುದರಿ ಗುಲಾಬಿ ಹೂವು ನೀಡುವ ಮೂಲಕ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದಮೇಲೆ ಹಲವಾರು ರೀತಿಯದುಷ್ಪರಿಣಾಮ ಬೀರುತ್ತವೆ. ಅಲ್ಲದೇ, ಯುವ ಜನಾಂಗಕ್ಕೆ ತಂಬಾಕಿನಿಂದಾಗುವದುಷ್ಪರಿಣಾಮಗಳ ಬಗ್ಗೆ ಜಾಗೃತಿಮೂಡಿಸಬೇಕು. ಜೊತೆಗೆ ಯುವ ಜನಾಂಗ ಈ ದುಶ್ಚಟಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಹನುಮಂತಪ್ಪ ಕುಡಚಿ ಮಾತನಾಡಿ, ಸಿಗರೆಟ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೇ,ಇನ್ನೊಬ್ಬರ ಆರೋಗ್ಯ ಕೂಡಾಹಾಳಾಗುತ್ತದೆ. ಇದರಿಂದಾಗಿನಾವೆಲ್ಲರೂ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೇವೆ. ಪ್ರಚಲಿತ ದಿನಗಳಲ್ಲಿ ಗರ್ಭಿಣಿಯರು ತಂಬಾಕು ಸೇವನೆಯಿಂದ ಮಹಿಳೆಯರಲ್ಲಿ ನಿರ್ಜೀವ ಜನನ, ಅವಧಿ ಪೂರ್ಣ ಜನನ ಹಾಗೂ ಕಡಿಮೆ ತೂಕ ಇರುವ ಮಕ್ಕಳು ಮತ್ತು ಜನನವಾದರು ಅಂಗವಿಕಲರಾಗಿ ಹುಟ್ಟುವ ಮಕ್ಕಳ ಪ್ರಮಾಣ ಜಾಸ್ತಿಯಾಗಿರುತ್ತದೆ ಎಂದರು.
ತಂಬಾಕಿನ ಕಾನೂನು ಅರಿವು ಕೋಟ್ಪಾ 2003ರ ಬಗ್ಗೆ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿಧೂಮಪಾನ ನಿಷೇಧ ಮಾಡಲಾಗಿದೆ. ಈ ಕಾನೂನು ಉಲ್ಲಂಘಿಸಿದ ವ್ಯಕ್ತಿಗೆ200ರೂ. ದಂಢ ವಿ ಧಿಸಲಾಗುವುದು.ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇಧಿಸಲಾಗಿದೆ. ಸೆಕ್ಷನ್ 7ರ ಪ್ರಕಾರಸಿಗರೆಟ ಮತ್ತು ಇತರ ತಂಬಾಕುಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೇ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧಕ್ಕೆ ತುತ್ತಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಬಸವರಾಜ ಹಳಬಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ, ಸಿಡಿಪಿಒ ನೀತಾ ವಾಡಕರ,ಆಹಾರ ಸುರಕ್ಷತಾ ಅಧಿ ಕಾರಿ ಜಿ.ವ್ಹಿ.ಕುಂದಗೋಳ, ಪುರಸಭೆ ಆರೋಗ್ಯನಿರೀಕ್ಷಕ ಕಮದೋಡ, ಹಿರಿಯ ಆರೋಗ್ಯ ಸಹಾಯಕ ಶ್ರೀಕಾಂತ ಸರ್ಜಾಪೂರ, ಪ್ರಭಾರಿ ಎಲ್‌ಎಚ್‌ವ್ಹಿ ಸರೋಜಾ ಹರಿಜನ, ಮಲ್ಲಿಕಾರ್ಜುನ ಬಿ., ವ್ಹಿ.ಎಲ್.ಶಿರೂರ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.