ಜಿಪಂ ಕ್ಷೇತ್ರ ಏರಿಕೆ-ತಾಪಂ ಇಳಿಕೆ
Team Udayavani, Mar 30, 2021, 1:12 PM IST
ಹಾನಗಲ್ಲ: ಜನಸಂಖ್ಯೆ ಆಧರಿಸಿ ಚುನಾವಣೆ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯ ನಡೆಸುತ್ತಿದ್ದು,ಹಾನಗಲ್ಲ ತಾಲೂಕಿಗೆ ಒಂದು ಜಿಪಂ ಸ್ಥಾನಹೆಚ್ಚಾಗುತ್ತಿದ್ದರೆ ಐದು ತಾಪಂ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದೆ.ಹಾನಗಲ್ಲ ತಾಲೂಕಿನಲ್ಲಿ 6ಜಿಪಂ ಕ್ಷೇತ್ರಗಳಿದ್ದು, ಈಗಹೊಸದಾಗಿ ಮತ್ತೂಂದುಕ್ಷೇ ತ್ರ ಸೇರ್ಪಡೆಯಾಗಲಿದೆ.
ತಾಪಂ 24 ಕ್ಷೇತ್ರಗಳಲ್ಲಿ ಐದು ಸ್ಥಾನಗಳು ಕಡಿಮೆಯಾಗಿ19ಕ್ಕೆ ಇಳಿಯುವ ಸಾಧ್ಯತೆ ಇದೆ.ನೂತನ ಜಿಪಂ ಕ್ಷೇತ್ರವಾಗಿ ಕೂಸನೂರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಕ್ಷೇತ್ರಕ್ಕೆಯಾವ ಯಾವ ಗ್ರಾಮಗಳು ಸೇರ್ಪಡೆಗೊಳ್ಳುತ್ತವೆ ಎಂಬಲೆಕ್ಕಾಚಾರದಲ್ಲಿ ರಾಜಕೀಯಮುಖಂಡರು ತಮ್ಮ ತಮ್ಮ ತಯಾರಿಯಲ್ಲಿದ್ದಾರೆ.
ಜಿಪಂ ಕ್ಷೇತ್ರ ವಿಂಗಡನೆಯಿಂದತಿಳವಳ್ಳಿ ಭಾಗದ ಸೋಮಸಾಗರಗ್ರಾಮ ನೂತನ ಕ್ಷೇತ್ರವಾದ ಕೂಸನೂರಗೆ ಸೇರ್ಪಡೆಯಾದರೆ, ತಿಳವಳ್ಳಿ ಕ್ಷೇತ್ರಕ್ಕೆ ಹೀರೂರಕ್ಷೇತ್ರದ ಚಿಕ್ಕಾಂಶಿ ಹೊಸೂರ ಗ್ರಾಮ, ಹೀರೂರ ಕ್ಷೇತ್ರಕ್ಕೆ ಬಮ್ಮನಹಳ್ಳಿ ಕ್ಷೇತ್ರದ ಕೊಪ್ಪರಸಿಕೊಪ್ಪಗ್ರಾಮ, ಆಡೂರು ಕ್ಷೇತ್ರಕ್ಕೆ ನರೇಗಲ್ಲ ಕ್ಷೇತ್ರದಮಾರನಬೀಡ ಗ್ರಾಮ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಈಗಾಗಲೆಕೇತ್ರವಾರು ಗುರುತಿಸಿಕೊಂಡಿರುವಹಾಗೂ ಜಿಪಂ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವನಾಯಕರಲ್ಲಿ ಕ್ಷೇತ್ರ ಬದಲಾಯಿಸುವ ಸಾಧ್ಯತೆ ಹೆಚ್ಚಾಗಲಿದೆ.
ತಾಲೂಕಿನಲ್ಲಿ ಈ ಹಿಂದೆ ಇದ್ದ24 ತಾಪಂ ಕ್ಷೇತ್ರಗಳಿದ್ದುದನ್ನು 19 ಕ್ಷೇತ್ರಗಳಿಗೆ ಕಡಿತಗೊಳಿಸಲಾಗುತ್ತಿದ್ದು, ಅದರಲ್ಲಿಕಂಚಿನೆಗಳೂರು, ಶ್ಯಾಡಗುಪ್ಪಿ, ಸುರಳೇಶ್ವರ,ಹುಲ್ಲತ್ತಿ, ಹೇರೂರು ಕ್ಷೇತ್ರಗಳನ್ನು ಕೈಬಿಡುವ ಸಾಧ್ಯತೆಗಳಿವೆ. ಇದರಿಂದಾಗಿ ತಾಪಂ ಕ್ಷೇತ್ರಗಳಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ನಿರಾಶೆಕಾದಿದೆ. ಆದರೂ ಚುನಾವಣೆ ಆಯೋಗದವರದಿ ಬರುವವರೆಗೂ ಕಾದು ನೋಡುವ ಕುತೂಹಲ ಆಕಾಂಕ್ಷಿಗಳಲ್ಲಿದೆ.
ತಾಲೂಕಿನಲ್ಲಿ ಪ್ರಸ್ತುತ ಆರು ಜಿಪಂ ಕ್ಷೇತ್ರಗಳಿದ್ದು, ಈಗಏಳು ಕ್ಷೇತ್ರಗಳಾಗಲಿವೆ. ಮೊದಲಿದ್ದ24 ತಾಪಂಗಳಲ್ಲಿ 5 ಕ್ಷೇತ್ರಗಳು ಕಡಿಮೆಗೊಳಿಸಿ 19ಕ್ಕೆ ಇಳಿಸಲಾಗಿದೆ.ಈ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಚುನಾವಣೆ ಆಯೋಗಅಧಿಕೃತವಾಗಿ ಘೋಷಣೆ ಮಾಡಿದರೆ ಕ್ಷೇತ್ರಗಳ ವಿಂಗಡನೆ ಕುರಿತು ತಿಳಿಸಲಾಗುವುದು. ಪಿ.ಎಸ್.ಎರ್ರಿಸ್ವಾಮಿ, -ತಹಶೀಲ್ದಾರ್ ಹಾನಗಲ್ಲ.
-ರವಿ ಲಕ್ಷ್ಮೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.