ಹಾವೇರಿ ಕೇತ್ರದಲ್ಲಿದ್ದಾರೆ 17ಲಕ್ಷ ಮತದಾರರು
1952ರಲ್ಲಿದಿದ್ದು ಕೇವಲ 3.71 ಲಕ್ಷ ಮತದಾರರು67 ವರ್ಷದಲ್ಲಿ 14ಲಕ್ಷ ಹೆಚ್ಚಳ
Team Udayavani, Mar 28, 2019, 5:29 PM IST
ಹಾವೇರಿ: ಜಿಲ್ಲಾ ಸ್ವೀಪ್ ಸಮಿತಿಯಿಂದ ಗ್ರಾಮವೊಂದರಲ್ಲಿ ಮತದಾನ ಜಾಗೃತಿ ಮೂಡಿಸಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಹಾವೇರಿ: ಜಿಲ್ಲೆಯಲ್ಲಿ ನಡೆದ ಲೋಕಸಭೆ ಕ್ಷೇತ್ರ ಚುನಾವಣೆ ಇತಿಹಾಸ ಗಮನಿಸಿದರೆ ಮತದಾರರ
ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು ಕಳೆದ 67 ವರ್ಷಗಳಲ್ಲಿ 14ಲಕ್ಷ ಮತದಾರರು ಹೆಚ್ಚಾಗಿದ್ದಾರೆ.
1952ರಿಂದ 2004ರ ವರೆಗೆ ಇದು ಧಾರವಾಡ ದಕ್ಷಿಣ ಮತಕ್ಷೇತ್ರವಾಗಿತ್ತು. 1952ರಲ್ಲಿ ಮತದಾರರ ಸಂಖ್ಯೆ ಕೇವಲ 3,71,753 ಮಾತ್ರ ಇತ್ತು. ಈಗ ಮತದಾರರ ಸಂಖ್ಯೆ 17,02618ಕ್ಕೆ ಏರಿದೆ. 1952ರಲ್ಲಿ ಮತದಾರರ ಸಂಖ್ಯೆ 3.71 ಲಕ್ಷ, 1957ರಲ್ಲಿ 3.50ಲಕ್ಷ, 1962ರಲ್ಲಿ 4.19ಲಕ್ಷ, 1971ರಲ್ಲಿ 4.79ಲಕ್ಷ, 1977ರಲ್ಲಿ 5.77ಲಕ್ಷ, 1980ರಲ್ಲಿ 6.76ಲಕ್ಷ, 1984ರಲ್ಲಿ 7ಲಕ್ಷ, 1989ರಲ್ಲಿ 9.34ಲಕ್ಷ, 1991ರಲ್ಲಿ 9.41ಲಕ್ಷ, 1996ರಲ್ಲಿ 10.40ಲಕ್ಷ, 1998ರಲ್ಲಿ 10.61ಲಕ್ಷ, 1999ರಲ್ಲಿ 10.88ಲಕ್ಷ, 1998ರಲ್ಲಿ 10.61ಲಕ್ಷ, 1999ರಲ್ಲಿ 10.88ಲಕ್ಷ 2004ರಲ್ಲಿ 12.04ಲಕ್ಷ ಮತದಾರರು ಇದ್ದರು.
ಕ್ಷೇತ್ರ ಪುನರ್ ವಿಂಗಡಣೆಯಾಗಿ ಹಾವೇರಿ ಲೋಕಸಭೆ ಕ್ಷೇತ್ರವಾಗಿ; ಪರಿವರ್ತನೆಯಾದ ಬಳಿಕ 2009ರಲ್ಲಿ ನಡೆದ ಚುನಾವಣೆ ವೇಳೆಗೆ ಮತದಾರರ ಸಂಖ್ಯೆ 13.70 ಲಕ್ಷ ಆಯಿತು. 2014ರಲ್ಲಿ ಮತದಾರರ ಸಂಖ್ಯೆ 15.57 ಲಕ್ಷ ಆಯಿತು. ಪ್ರಸಕ್ತ ವರ್ಷ ಮತದಾರರ ಸಂಖ್ಯೆ 17ಲಕ್ಷ ಆಗಿದ್ದು. ಐದು ವರ್ಷಗಳಲ್ಲಿ ಸರಾಸರಿ ಎರಡು ಲಕ್ಷ ಮತದಾರರು ಹೆಚ್ಚಾಗಿದ್ದಾರೆ.
ಮತದಾರರ ವಿವರ: ಪ್ರಸಕ್ತ ಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 216229, ಗದಗ ವಿಧಾನಸಭೆ ಕ್ಷೇತ್ರದಲ್ಲಿ 220309, ರೋಣ ವಿಧಾನಸಭೆ ಕ್ಷೇತ್ರದಲ್ಲಿ 227832, ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ 197169, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ 223672, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ 202126, ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ 182796, ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ 232485 ಸೇರಿ ಒಟ್ಟು ಕ್ಷೇತ್ರದಲ್ಲಿ 1702618 ಮತದಾರರಿದ್ದಾರೆ.
ದಿವ್ಯಾಂಗ ಮತದಾರರು: ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ 21584 ದಿವ್ಯಾಂಗ ಮತದಾರರನ್ನು ಗುರುತಿಸಲಾಗಿದೆ. ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 2665, ಗದಗ ವಿಧಾನಸಭೆ ಕ್ಷೇತ್ರದಲ್ಲಿ 1839, ರೋಣ ವಿಧಾನಸಭೆ ಕ್ಷೇತ್ರದಲ್ಲಿ 4308, ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ 3795, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ 2060, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ 2367, ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ 2405, ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ 2145 ದಿವ್ಯಾಂಗ ಮತದಾರರಿದ್ದಾರೆ.
ಮತದಾನ ಜಾಗೃತಿ: ಜಿಲ್ಲಾ ಸ್ವೀಪ್ ಸಮಿತಿ ಮತದಾನ ಜಾಗೃತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಎಲ್ಲ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಮತದಾನ ಮಾಡುವಂತೆ ಪಾಲಕರಿಗೆ ಪತ್ರ, ವಿವಿಧ ಸ್ಪರ್ಧೆ, ಕಾರಾಗೃಹ, ಎನ್‌ಎಸ್ ಎಸ್ ಶಿಬಿರ, ಜಾತ್ರೆಗಳು, ಸಂತೆ, ರೈಲ್ವೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ವಿಶೇಷ ಕಾರ್ಯಕ್ರಮ ನಡೆಸುತ್ತಿದೆ. ಚುನಾವಣಾ ಜಾಗೃತಿ ವೇದಿಕೆ, ಮತಗಟ್ಟೆ ಜಾಗೃತಿ ಗುಂಪುಗಳು, ರಾಯಭಾರಿಗಳು, ಸಾಕ್ಷರತಾ ಸಂಘದಿಂದ ನಿಂತರ ಜಾಗೃತಿ ನಡೆಯುತ್ತಿದೆ.
ಯುವ ಮತದಾರರು
ಕ್ಷೇತ್ರದಲ್ಲಿ ಈ ಬಾರಿ ಒಟ್ಟು 32943 ಯುವ ಮತದಾರರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 4143, ಗದಗ ವಿಧಾನಸಭೆ ಕ್ಷೇತ್ರದಲ್ಲಿ 4117, ರೋಣ ವಿಧಾನಸಭೆ ಕ್ಷೇತ್ರದಲ್ಲಿ 4075, ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ 4262, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ 3808, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ 4088, ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ 3844 ಹಾಗೂ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ 4606 ಯುವ ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಈ ಬಾರಿ ಒಟ್ಟು 32943 ಯುವ ಮತದಾರರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 4143, ಗದಗ ವಿಧಾನಸಭೆ ಕ್ಷೇತ್ರದಲ್ಲಿ 4117, ರೋಣ ವಿಧಾನಸಭೆ ಕ್ಷೇತ್ರದಲ್ಲಿ 4075, ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ 4262, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ 3808, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ 4088, ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ 3844 ಹಾಗೂ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ 4606 ಯುವ ಮತದಾರರಿದ್ದಾರೆ.
ಶೇ. 100ರಷ್ಟು ಮತದಾನವಾಗಬೇಕು ಎಂಬ ಆಶಯ ಜಿಲ್ಲಾ ಸ್ವೀಪ್ ಸಮಿತಿಯದ್ದಾಗಿದೆ. ಈ ನಿಟ್ಟಿನಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯ ಚುನಾವಣೆಗಿಂತ ಈ ಚುನಾವಣೆಯಲ್ಲಿ ಶೇ. 4ರಷ್ಟು ಮತದಾನ ಹೆಚ್ಚಳ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ಕೆ. ಲೀಲಾವತಿ,
ಅಧ್ಯಕ್ಷರು, ಜಿಲ್ಲಾ ಸ್ವೀಪ್ ಸಮಿತಿ
ಎಚ್.ಕೆ ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.