ಶುಭ ಕಾರ್ಯಗಳಿಗೆ ಕವಿದ “ಕೊರೊನಾ ಕಾರ್ಮೋಡ’
Team Udayavani, May 3, 2021, 8:37 PM IST
ವೀರೇಶ ಮಡ್ಲೂರು
ಹಾವೇರಿ: ಕೊರೊನಾ ಎರಡನೇ ಅಲೆ ಗೃಹಪ್ರವೇಶ, ಮದುವೆ ಮುಂತಾದ ಶುಭ ಕಾರ್ಯಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಈ ವರ್ಷವಾದರೂ ಮದುವೆಗಳನ್ನು ಅದ್ಧೂರಿಯಾಗಿ ಮಾಡಬಹುದೆಂದುಕೊಂಡು ತಿಂಗಳುಗಟ್ಟಲೇ ಮೊದಲೇ ತಯಾರಿ ಮಾಡಿಕೊಂಡವರಿಗೆ ಕೊರೊನಾ ಕರ್ಫ್ಯೂ ನಿರಾಸೆ ಮೂಡಿಸಿದೆ.
ಕೊರೊನಾ ಕಾಟದಿಂದ ಕಳೆದ ವರ್ಷ ಮದುವೆ ಮುಂದೂಡಿದ್ದವರಿಗೆ ಈ ವರ್ಷವೂ ಭೀತಿ ತಪ್ಪದಂತಾಗಿದೆ. ಮದುವೆ, ಗೃಹಪ್ರವೇಶ ಮುಂತಾದ ಮಂಗಳ ಕಾರ್ಯಕ್ರಮಗಳನ್ನು ನಿಗದಿ ಮಾಡಿಕೊಂಡವರು ಏನು ಮಾಡಬೇಕೆಂದು ತೋಚದೇ ಗೊಂದಲದಲ್ಲಿ ಸಿಲುಕಿದ್ದಾರೆ. ಈ ಸೀಸನ್ ನಂಬಿ ಜೀವನ ಕಟ್ಟಿಕೊಂಡವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ತಪ್ಪದ ಕೊರೊನಾ ಕಾಟ: ಪ್ರಸಕ್ತ ಮೇ ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚು. ಈ ಅವ ಧಿಯಲ್ಲಿಯೇ ಹೆಚ್ಚಿನ ಮುಹೂರ್ತ ಇರುತ್ತವೆ. ಮಕ್ಕಳಿಗೆ ಬೇಸಿಗೆ ರಜೆ ಎಂಬ ಕಾರಣದಿಂದ ಅನೇಕ ಕುಟುಂಬಗಳು ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿರುತ್ತವೆ. ಈ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ನಿಗದಿಯಾಗಿದ್ದ ನೂರಾರು ಮದುವೆ ಸಮಾರಂಭಗಳಿಗೆ ಕೊರೊನಾ ಕಾಟ ಎದುರಾಗಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿ ನಿಬಂಧನೆ ವಿಧಿಸಿದೆ. ಇದರಿಂದ ಈಗಾಗಲೇ ಮದುವೆ ಇನ್ನಿತರೆ ಸಮಾರಂಭ ನಿಗದಿ ಮಾಡಿಕೊಂಡವರು ಗೊಂದಲದಲ್ಲಿ ಮುಳುಗಿದ್ದಾರೆ. ಕಳೆದ ಡಿಸೆಂಬರ್ ಬಳಿಕ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳು ಅದ್ಧೂರಿಯಾಗಿ ನಡೆದಿದ್ದವು. ಎಲ್ಲವೂ ಸರಿಯಾಯಿತೆಂದುಕೊಂಡು ಶುಭ ಸಮಾರಂಭಗಳನ್ನು ನಿಗದಿ ಮಾಡಿದ್ದರು. ಈಗಾಗಲೇ ಅನೇಕರು ಮೇ ತಿಂಗಳಲ್ಲಿ ವಿವಾಹ ನಿಗದಿ ಮಾಡಿಕೊಂಡು ಮುಂಗಡ ಹಣ ಕೊಟ್ಟು ಕಲ್ಯಾಣ ಮಂಟಪಗಳನ್ನು ಬುಕ್ಕಿಂಗ್ ಮಾಡಿಕೊಂಡಿದ್ದರು. ಸದ್ಯ ಕೊರೊನಾ ಹೆಚ್ಚುತ್ತಿರುವುದರಿಂದ ಕೆಲವರು ಮುಂದಿನ ದಿನಗಳಲ್ಲಿ ಇಟ್ಟುಕೊಂಡರಾಯಿತೆಂದು ಶುಭ ಕಾರ್ಯಗಳನ್ನು ಮುಂದಕ್ಕೆ ಹಾಕುತ್ತಿದ್ದಾರೆ.
ಗೊಂದಲದಲ್ಲಿ ಆಯೋಜಕರು: ಮೇ ತಿಂಗಳಲ್ಲಿ ಮದುವೆ ನಿಗದಿ ಮಾಡಿಕೊಂಡವರು ಗೊಂದಲದಲ್ಲಿ ಮುಳುಗುವಂತಾಗಿದೆ. ಸರ್ಕಾರ ನಿಗದಿಪಡಿಸಿದಷ್ಟೇ ಜನರನ್ನು ಹೇಗೆ ಆಮಂತ್ರಿಸಬೇಕು? ಅದಕ್ಕಿಂತ ಹೆಚ್ಚು ಜನ ಬಂದರೆ ಸಮಸ್ಯೆಯಾದೀತೇ? ಎಷ್ಟು ಜನರಿಗೆ ಅಡುಗೆ ಸಿದ್ಧಪಡಿಸಬೇಕು? ಎಂಬಿತ್ಯಾದಿ ಗೊಂದಲ ಶುರುವಾಗಿದೆ. ಮುಂದಿನ ದಿನಗಳಲ್ಲಿ ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಹೋಗಲು ನಿರ್ಬಂಧ ವಿಧಿ ಸಿದರೆ ಏನು ಮಾಡೋದು ಎಂಬ ಚಿಂತೆ ಕೆಲವರನ್ನು ಕಾಡುತ್ತಿದೆ. ಮದುವೆ ವೇಳೆ ಕೊರೊನಾ ಸೋಂಕು ತಗಲಿ ಹೆಚ್ಚು ಕಮ್ಮಿಯಾದರೆ ಏನು ಮಾಡೋದು ಇತ್ಯಾದಿ ತಳಮಳದಲ್ಲೇ ಕಾಲ ಕಳೆಯುವಂತಾಗಿದೆ.
ಮದುವೆಗೆ 50 ಜನ: ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ ಧರಿಸುವುದು ಕಡ್ಡಾಯವಾಗಿದೆ. ಮದುವೆ ಸಮಾರಂಭದಲ್ಲಿ ಗರಿಷ್ಠ 50 ಜನರು ಮೀರಬಾರದು. ಶವಸಂಸ್ಕಾರದ ಸಂದರ್ಭದಲ್ಲಿ ಗರಿಷ್ಠ 5 ಜನರಿಗೆ ಭಾಗವಹಿಸಲು ಅನುಮತಿ ನೀಡಿದ್ದು, ಧಾರ್ಮಿಕ ಆಚರಣೆ-ಸಮಾರಂಭಗಳನ್ನು ನಿಷೇಧಿ ಸಿ ಆದೇಶ ಹೊರಡಿಸಲಾಗಿದೆ. ಬೇಸಿಗೆಯಲ್ಲಿ ಹೆಚ್ಚು ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಗೃಹ ಪ್ರವೇಶ ಮುಂತಾದ ಸಮಾರಂಭಗಳು ನಡೆಯುವುದರಿಂದ ವ್ಯಾಪಾರು- ವಹಿವಾಟುಗಳು ಈ ಅವ ಧಿಯಲ್ಲಿ ಹೆಚ್ಚಿರುತ್ತಿದ್ದವು. ಆದರೆ ಕೊರೊನಾ ಎರಡನೇ ಅಲೆ ಮತ್ತೆ ಮದುವೆ ಸೀಸನ್‌ನ ವಹಿವಾಟು ಕುಸಿಯುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.