ಜೇನು ಕೃಷಿಯಿಂದ ವರ್ಷ ಪೂರ್ತಿ ಆದಾಯ


Team Udayavani, May 21, 2021, 8:41 PM IST

21-24

ರಾಣಿಬೆನ್ನೂರ: ಹನುಮನಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜೇನು ಹುಳು ದಿನಾಚರಣೆ ಅಂಗವಾಗಿ ರೈತರ ಆದಾಯಕ್ಕಾಗಿ ಜೇನು ಕೃಷಿ ಕುರಿತು ಗುರುವಾರ ಆನ್‌ ಲೈನ್‌ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹನುಮನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಪ್ರಧಾನ ಮಂತ್ರಿಗಳ ಆಶಯದಂತೆ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಜೇನು ಕೃಷಿ ಒಂದು ಮುಖ್ಯ ಉಪ ಕಸುಬಾಗಲಿದೆ.

ಅದು ನಿರಂತರವಾಗಿ ವರ್ಷ ಪೂರ್ತಿ ಆದಾಯ ತರುವ ಕಸುಬು. ಜೇನು ಕೃಷಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಒಂದು ಬಹು ಉಪಯೋಗಿ ಹಾಗೂ ಹೆಚ್ಚು ಆದಾಯ ತರುವ ಉದ್ಯೋಗವಾಗಿದೆ ಎಂದರು. ಜೇನು ಸಾಕಾಣಿಕೆ ಕೇವಲ ಜೇನು ತುಪ್ಪ ಮತ್ತು ಮೇಣದ ಸಲುವಾಗಿ ಮಾತ್ರ ಎನ್ನುವ ಅಭಿಪ್ರಾಯ ಇದೆ. ಬೆಳೆಗಳಲ್ಲಿ ಪರಾಗ ಸ ³ರ್ಶದ ಮಹತ್ವ, ಪ್ರಕೃತಿಯಲ್ಲಿ ಪರಾಗ ಸ್ಪರ್ಶ ನಡೆಯುವ ವಿಧಾನಗಳು, ಇದರಲ್ಲಿ ಜೇನು ನೊಣಗಳ ಪಾತ್ರ ಇತ್ಯಾದಿಗಳ ಬಗ್ಗೆ ಜನರಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.

ಒಂದು ಸಮೀಕ್ಷೆಯ ಪ್ರಕಾರ ಶೇ. 70 ರಷ್ಟು ಆಹಾರ ಬೆಳೆಗಳು, ಶೇ. 80ಕ್ಕೂ ಹೆಚ್ಚು ಹಣ್ಣು, ತರಕಾರಿ ಮತ್ತು ಅರಣ್ಯ ಬೆಳೆಗಳು, ಹಾಗೂ ಶೇ. 50ಕ್ಕಿಂತಲೂ ಹೆಚ್ಚು ಬೀಜದಿಂದ ವಂಶಾಭಿವೃದ್ಧಿ ಹೊಂದುವ ಸಸ್ಯಗಳು ಪರಾಗ ಸ್ಪರ್ಶಕ್ಕಾಗಿ ಜೇನುನೊಣಗಳನ್ನೇ ಅವಲಂಬಿಸಿವೆ ಎಂದರು. ಪ್ರತಿ ವರ್ಷ ಮೇ 20 ಅನ್ನು ವಿಶ್ವ ಜೇನು ಹುಳು ದಿನವನ್ನಾಗಿ ಆಚರಿಸುವ ನಿರ್ಣಯ ಅಂಗೀಕರಿಸಲಾಗಿದೆ.

ಅಂದಿನಿಂದ ಪ್ರತಿ ವರ್ಷ ಈ ದಿನ ಜೇನು ಹುಳು ಮತ್ತು ಪರಾಗ ಸ್ಪರ್ಶದಲ್ಲಿ ಪ್ರಮುಖವಾಗಿರುವ ಇತರೆ ದುಂಬಿ, ಹುಳುಗಳನ್ನು ಸಂರಕ್ಷಿಸುವ ಕುರಿತು ಜಾಗತಿಕವಾಗಿ ಸಾರ್ವಜನಿಕರ ಗಮನ ಸೆಳೆಯುವುದು ಇದರ ಮುಖ್ಯ ಉದ್ದೇಶ ಎಂದರು. ವಿಜ್ಞಾನಿ ಡಾ| ಪ್ರಸನ್ನ ಪಿ. ಮಾತನಾಡಿ, ಜೇನು ಸಾಕಾಣಿಕೆಯಲ್ಲಿ ಸ್ಲೊವೇನಿಯಾ ಪುಟ್ಟ ರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಇಟಲಿ, ಆಸ್ಟ್ರೀಯಾ ಮತ್ತು ಹಂಗೇರಿ ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡ ಸ್ಲೊವೇನಿಯಾದಲ್ಲಿ ಜೇನು ಸಾಕಾಣಿಕೆ ಅಲ್ಲಿನ ನಾಗರಿಕರ ದಿಧೀರ್ಘ‌ ಕಾಲದ ಸಂಪ್ರದಾಯವಾಗಿದೆ.

ಜೇನು ಹುಳುಗಳಿಗೆ ಮಾರಕವಾಗುವ ಕೀಟನಾಶಕಗಳ ಬಳಕೆಯನ್ನು ನಿಷೇಧಿ ಸಿದ ಏಕೈಕ ರಾಷ್ಟ್ರ ಸ್ಲೊವೇನಿಯಾ ಎಂದರು. ವಿಜ್ಞಾನಿ ಡಾ| ವಿನಯಕುಮಾರ ಮಾತನಾಡಿ, ಜೇನು ತುಪ್ಪ ಒಂದು ಉತ್ತಮ ನೈಸರ್ಗಿಕ ಆಹಾರವಲ್ಲದೇ, ಔಷ ಧೀಯ ಗುಣಗಳನ್ನು ಹೊಂದಿದೆ. ಧಾರ್ಮಿಕ ವಿಧಿ  ಗಳಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಜೇನು ಸಾಕಣೆಯಿಂದ ಜೇನು ತುಪ್ಪವಲ್ಲದೆ ಇತರೇ ಉತ್ಪನ್ನಗಳಾದ ಜೇನು ಮೇಣ, ವಿಶೇಷ ಆಹಾರವಾದ ರಾಜಶಾಹಿ ರಸ, ಔಷಧಿ  àಯ ಗುಣವುಳ್ಳ ಜೇನು ವಿಷ ಮುಂತಾದವುಗಳನ್ನು ಪಡೆಯಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಜೇನು ನೊಣಗಳ ಪರಾಗ ಸ್ಪರ್ಶ ಕ್ರಿಯೆಯಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಳ ಅತ್ಯಂತ ಮಹತ್ತರವಾಗಿದೆ.

ಜೇನುತುಪ್ಪದ ಉತ್ಪಾದನೆಗಿಂತ ಬೆಳೆಗಳಲ್ಲಿ ಜೇನು ನೊಣಗಳ ಪರಾಗ ಸ್ಪರ್ಶ ಕ್ರಿಯೆಯಿಂದಾಗುವ ಲಾಭ ಸುಮಾರು 20 ಪಟ್ಟು ಹೆಚ್ಚು ಎಂದು ತಿಳಿಸಿದರು. ಜೇನು ಸಾಕಾಣಿಕೆ ಕೃಷಿಕ ಶಂಕರ್‌ ಸೊಗಲಿ ಮಾತನಾಡಿ, ಜೇನು ಸಾಕಾಣಿಕೆ ಕೃಷಿಯ ಅವಿಭಾಜ್ಯ ಅಂಗವಾಗಿದೆ. ಇದನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಬಹಳ ಆದಾಯ ಪಡೆಯುತ್ತಿದ್ದೇವೆ.

ಜೇನು ಕೃಷಿಯನ್ನು ಮುಖ್ಯ ಕಸುಬಾಗಿ ಅಥವಾ ಉಪ ಕಸುಬಾಗಿ ಯಾರು ಬೇಕಾದರೂ ಮಾಡಿಕೊಳ್ಳಬಹುದು. ಸುಧಾರಿತ ಕ್ರಮಗಳನ್ನು ಅನುಸರಿಸಿ ಜೇನು ಕೃಷಿ ಕೈಗೊಂಡಲ್ಲಿ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದರು. ಆನ್‌ಲೈನ್‌ ತರಬೇತಿ ಶಿಬಿರದಲ್ಲಿ ಸುಮಾರು 70 ರಿಂದ 80 ರೈತರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.

ಟಾಪ್ ನ್ಯೂಸ್

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

13

Kollywood: ಯೂಟ್ಯೂಬ್‌ ವಿಮರ್ಶೆ ಬ್ಯಾನ್‌ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

15

Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ… ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.