![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-415x260.jpg)
Haveri: ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ; ಎರಡು ವಾಹನಗಳು ಸುಟ್ಟು ಭಸ್ಮ
Team Udayavani, Aug 29, 2023, 3:38 PM IST
![Haveri: ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ; ಎರಡು ವಾಹನಗಳು ಸುಟ್ಟು ಭಸ್ಮ](https://www.udayavani.com/wp-content/uploads/2023/08/pataki-620x342.jpg)
ಹಾವೇರಿ: ಪಟಾಕಿ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಎರಡು ವಾಹನಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಭೂಮಿಕ ಟ್ರೇಡರ್ಸ್ ಎಂಬ ಪಟಾಕಿ ಅಂಗಡಿ ಅಗ್ನಿ ಅವಘಡದಿಂದ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿದ್ದ ಬೈಕ್ ಹಾಗು ಟಾಟಾ ಏಸ್ ವಾಹನ ಸುಟ್ಟು ಭಸ್ಮವಾಗಿದೆ.
ವೀರೇಶ ಸಾತೇನಹಳ್ಳಿ ಎಂಬವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-415x260.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.