Haveri ಗ್ಯಾಂಗ್ ರೇಪ್ ಪ್ರಕರಣ SIT ತನಿಖೆಯಾಗಬೇಕು: BJP ಆಕ್ರೋಶ
ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್...; ಬೊಮ್ಮಾಯಿ, ಅಶೋಕ್ ಕಿಡಿ
Team Udayavani, Jan 20, 2024, 6:18 PM IST
ಹಾವೇರಿ : ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಎಸ್ ಐಟಿ ತನಿಖೆಗೆ ಆಗ್ರಹಿಸಿ ಹಾವೇರಿ ಎಸ್ಪಿ ಕಚೇರಿ ಮುಂದೆ ಶನಿವಾರ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ” ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್ ಇದೆ. ತಾಲಿಬಾನ್ ಶಕ್ತಿಗಳು ತಲೆ ಎತ್ತುತ್ತಿವೆ. ಅತ್ಯಾಚಾರ ಆದ ನಾಲ್ಕು ದಿನದ ಬಳಿಕ ಕೇಸ್ ಮಾಡಿದ್ದಾರೆ. ಹಾನಗಲ್ ಪೊಲೀಸರು ಕೇಸ್ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ದುಷ್ಟರ ಜತೆಗೆ ಪೊಲೀಸರು ಸೇರಿದ್ದಾರೆ, ನಾಚಿಕೆಯಾಗಬೇಕು. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗಿ ಗೂಂಡಾಗಳ ಜೊತೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲವಾಗಿದೆ” ಎಂದು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
”ಹಾನಗಲ್ ನಲ್ಲಿ ಘಟನೆ ನಡೆದ ಬಳಿಕವೂ ನಿನ್ನೆ ಬ್ಯಾಡಗಿಯಲ್ಲಿ ನಡೆದಿದೆ ಯಾಕೆ? ರೇಪ್ ಆದರೂ ಕೇಸ್ ಹಾಕಲಿಲ್ಲ. SPಗೆ ಪೋನ್ ಮಾಡಿದ್ದೆ, ರೇಪ್ ಆಗಿಲ್ಲ ಎಂದರು. ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಕೊಟ್ಟ ಮೇಲೆ ಕೇಸ್ ದಾಖಲಾಯಿತು. ಕೇಸ್ ಮಾಡದೆ ಇರಲು ಯಾವ ರಾಜಕೀಯ ಒತ್ತಡ ಇತ್ತು? ಪೊಲೀಸ್ ಸ್ಟೇಷನ್ ಗಳು ಸೆಟ್ಲಮೆಂಟ್ ಸೆಂಟರ್ ಆಗಿದ್ದು, ಇದನ್ನ ಮುಚ್ಚಿ ಹಾಕುವುದರಲ್ಲಿ ಎರಡು ಮಾತಿಲ್ಲ” ಎಂದರು.
”ಸಂತ್ರಸ್ತೆ ಯ ಆರೋಗ್ಯ ತಪಾಸಣೆ ಮಾಡಲಿಲ್ಲ, ಸಿಎಂಗೆ ಮುಖಭಂಗವಾಗುತ್ತದೆ ಎಂದು ಶಿರಸಿಗೆ ಶಿಫ್ಟ್ ಮಾಡಿದಿರಿ. ಸರಕಾರವೆ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು” ಎಂದು ಬೊಮ್ಮಾಯಿ ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಭಾಗಿಯಾದ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ”ಡಿ.ಕೆ.ಶಿವಕುಮಾರ್ ಅವರು ಮುಸಲ್ಮಾನರು ನಮ್ಮ ಬ್ರದರ್ಸ್, ಸಿಸ್ಟರ್ ಅಂದಿದ್ದರು. ಇಲ್ಲಿ ಸಿಸ್ಟರ್ ರೇಪ್ ಆಗಿದೆ ಅಲ್ಲವೇ? ಎಲ್ಲಪ್ಪಾ ನಿಮ್ ಬ್ರದರ್, ಸಿಸ್ಟರ್ ಗಳು? ರೇಪಿಸ್ಟ್ ಗಳು ಬ್ಲಾಸ್ಟ್ ಮಾಡೋರು ನಿಮ್ ಬ್ರದರ್ ಗಳಾ” ಎಂದು ಪ್ರಶ್ನಿಸಿದರು.
”ರಾಜ್ಯದಲ್ಲಿ ಮಟ್ಕಾ, ಜೂಜು , ಎಲ್ಲಾ ಇದೇ ಸುದ್ದಿ. ಬೊಮ್ಮಾಯಿ ಕಾಲದ ಟೆಂಡರ್ ಇನ್ನೂ ಆಗಿಲ್ಲ, ಎಲ್ಲವೂ ನಿಂತು ಹೋಗಿದೆ. ಬರೀ ರೇಪ್ ಮಾತ್ರ ಆಗುತ್ತಿವೆ. ಆರೋಪಿಗಳು ಬಸ್ ಸ್ಟಾಂಡ್ ನಲ್ಲಿ ಯಾರ್ ಬಂದರು ಹೋದರು ಅವರ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಸಂಪರ್ಕ ಇಟ್ಟುಕೊಂಡಿದ್ದರು. ಮೆಸೆಜ್ ಬಂದ ತಕ್ಷಣ ಕಾಡಿಗೆ ತಗೊಂಡು ಹೋಗಿ ರೇಪ್ ಮಾಡುತ್ತಾರೆ, ಮೊದಲು ನಾಲ್ಕು ಜನ,ಬಳಿಕ ಗಲಾಟೆ ಆಗಬಹುದು ಎಂದು ಬೇರೆ ಕಡೆ ಎಳೆದುಕೊಂಡು ಹೋಗಿ ಮೂರು ಜನ ರೇಪ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದು, ಗೊರಕೆ ಸಡ್ಡು ಸಂಪೂರ್ಣ ಕರ್ನಾಟಕಕ್ಕೆ ಮಾತ್ರವಲ್ಲ, ವಿದೇಶಕ್ಕೂ ಕೇಳುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.