Haveri: ಕರ್ನಾಟಕ ಜಾನಪದ ವಿವಿ ವಿಶೇಷ-ವಿಭಿನ್ನ
, ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ
Team Udayavani, Sep 7, 2023, 2:25 PM IST
ಶಿಗ್ಗಾವಿ: ಅಪಾರ ಜ್ಞಾನ ಸಂಪತ್ತು ಹಾಗೂ ಇಲ್ಲಿನ ಕಲಾ ಪ್ರತಿಭೆಗಳಿಂದ ಹೊರ ಹೊಮ್ಮುವ ಜನಪದ ಗೀತೆಗಳನ್ನು ಆಲಿಸಿ ಸಂತೋಷವಾಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಶೇಷ ಹಾಗೂ ವಿಭಿನ್ನವಾಗಿದೆ ಎಂದು ಶಿಗ್ಗಾವಿ ಜೆಎಂಎಫ್‌ಸಿ
ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾ ಧೀಶ ರಾದ ಫೈರೋಜಾ ಎಚ್. ಉಕ್ಕಲಿ ಹೇಳಿದರು.
ತಾಲೂಕಿನ ಗೊಟಗೋಡಿ ವಿಶ್ವವಿದ್ಯಾಲಯ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಲ್ಲಿರುವ ಅಧ್ಯಾಪಕರಲ್ಲಿ ಜಾನಪದ ವಿಷಯದ ಕುರಿತಾಗಿ ಅಪಾರ ಜ್ಞಾನವಿದೆ. ಅವರು ಹಾಡುವ ಜನಪದ ಗೀತೆಗಳನ್ನು ಕೇಳಿ ಆಹ್ಲಾದವಾಯಿತು. ಜಾನಪದ ವಿಶ್ವವಿದ್ಯಾಲಯ ವಿಭಿನ್ನವಾದ ಪರಿಕಲ್ಪನೆಯಿಂದ ಕೂಡಿದೆ. ಇಲ್ಲಿನ ಹೊರ ವಾತಾವರಣ ಗಮನ ಸೆಳೆಯಿತು. ಒಳ ಆವರಣ ಇನ್ನೂ ವಿಭಿನ್ನ. ಬಹುಮುಖೀ ಜ್ಞಾನಗಳನ್ನು ಬಿತ್ತುವ ಅಧ್ಯಯನ ಮಾಡುವುದು ವಿಶೇಷವಾಗಿದೆ ಎಂದರು.
ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಮಾತನಾಡಿ, ಸಾಂಸ್ಕೃತಿಕ ಲೋಕವನ್ನು ಹಸಿರಾಗಿಡಬೇಕು ಎನ್ನುವುದೇ ಸಂವಿಧಾನದ ಆಶಾಯವಾಗಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕಲಾ ಸಂಸ್ಕೃತಿಗೆ ನ್ಯಾಯವಿದೆ ಎನ್ನುವ ನ್ಯಾಯಯುತ ಮಾತುಗಳನ್ನಾಡಿದ್ದಾರೆ.
ಅವರಿಗೆ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದೆ ಅನ್ನುವುದು ಸಂತೋಷದ ಸಂಗತಿ ಎಂದರು. ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್ ಮಾತನಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶಿಸ್ತಿನ ವಿಶ್ವವಿದ್ಯಾಲಯ. ಇದು ಪ್ರಪಂಚದಲ್ಲೇ ಏಕೈಕ ಹಾಗೂ ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನವಾಗಿದೆ. ಅದೇ ರೀತಿ, ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ ಎಂದರು.
ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಮಾತನಾಡಿ, ವಿಶ್ವವಿದ್ಯಾಲಯ ನಡೆದು ಬಂದ ದಾರಿ ಹಾಗೂ ಅದರ ರೂಪುರೇಷೆಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಆನಂದಪ್ಪ ಜೋಗಿ, ಡಾ.ವಿಜಯಲಕ್ಷ್ಮೀ ಗೇಟಿಯವರ, ಗೋವಿಂದಪ್ಪ ತಳವಾರ, ಕಿರಿಯ ಸಹಾಯಕ ಶರೀಫ್ ಮಾಕಪ್ಪನವರ, ವಿದ್ಯಾರ್ಥಿ ಬಾಬಾಸಾಹೇಬ್ ಕಾಂಬ್ಳೆ ಜನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.