![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 10, 2023, 11:53 PM IST
ಹಾವೇರಿ: ನಗರದ ರಾಘವೇಂದ್ರ ಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವವರೇ ಮಠದ ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದ ಪ್ರಕರಣವೊಂದನ್ನು ಪೊಲೀಸರು ಬಯಲಿಗೆಳೆದು, 8 ಮಂದಿಯನ್ನು ಬಂಧಿಸಿದ್ದಾರೆ.
ರಾಘವೇಂದ್ರ ಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವ ಉಡುಪಿ ಮೂಲದ, ಪ್ರಸ್ತುತ ಹಾವೇರಿಯಲ್ಲಿ ನೆಲೆಸಿರುವ ಹರಿಕೃಷ್ಣ ಅನಂತ ರಾವ್ ಪ್ರಕರಣದ ಪ್ರಮುಖ ಆರೋಪಿ. ಧಾರವಾಡ ಜಿಲ್ಲೆಯ ಮಾಂತು ಅಲಿಯಾಸ್ ಮಹಾಂತೇಶ ಜಮನಾಳ, ಸಾಗರ ಜಮನಾಳ, ಬೆಳಗಾವಿ ಜಿಲ್ಲೆಯ ಪ್ರಜ್ವಲ್ ದೊತರೆ, ರಾಘವೇಂದ್ರ ದೊಡ್ಡಮನಿ, ಅಜಯ್ ಸಾಲಹಳ್ಳಿ, ಶಿವಾನಂದ ತಗಡಿನಮನಿ, ಬೆಂಗಳೂರು ನಗರ ವಾಸಿ ಸುನೀಲ್ ಕೆ.ಎನ್., ಜಿ. ಚಂಗಲರಾಯಪ್ಪ ಬಂಧಿತ ಇತರ ಆರೋಪಿಗಳು.
ಹರಿಕೃಷ್ಣ ಅನಂತರಾವ್ ರಾಘವೇಂದ್ರ ಮಠದ ಮತ್ತು ಅದರ ಆಸ್ತಿ ವಿಚಾರವಾಗಿ ನಗರದ ನಿವಾಸಿ ಜಯರಾಮ ಕೊಲ್ಲಾಪುರ ಎಂಬವರನ್ನು ಕೊಲೆ ಮಾಡಲು ಸಂಚು ರೂಪಿಸಿ 8 ಜನ ಆರೋಪಿತರಿಗೆ ಸುಪಾರಿ ಕೊಟ್ಟಿದ್ದ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣದ ವಿವರ
ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ದೇವಗಿರಿ ಯಲ್ಲಾಪುರ ಪೆಟ್ರೋಲ್ ಬಂಕ್ ಹತ್ತಿರ ಆ.10ರಂದು ಸಂಜೆ 4.30ರ ವೇಳೆಗೆ ಜಯರಾಮ ಕೊಲ್ಲಾಪುರ ಮತ್ತು ಅವರ ಮಗ ವಾದಿರಾಜ ಕೊಲ್ಲಾಪುರ ತಮ್ಮ ಬೈಕ್‌ನಲ್ಲಿ ಹಾವೇರಿ ಕಡೆಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಜಯರಾಮನ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿ ಸಿದರು. ವಿಚಾರಣೆ ವೇಳೆ ಹರಿಕೃಷ್ಣನಿಂದ ಸುಪಾರಿ ಪಡೆದಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿ ಹರಿಕೃಷ್ಣ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾನೆ ಎಂದು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಸಂತೋಷ ಪವಾರ್ ತಿಳಿಸಿದ್ದಾರೆ.
ಪ್ರರಕಣವನ್ನು ಭೇದಿಸಿದ ಡಿವೈಎಸ್ಪಿ ಎಂ.ಎಸ್.ಪಾಟೀಲ್ ಅವರ ತಂಡಕ್ಕೆ ಎಸ್ಪಿ ಡಾ|ಶಿವಕುಮಾರ ಗುಣಾರೆ ಬಹುಮಾನ ಘೋಷಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.