ಅನಂತಕುಮಾರ ಅವರದ್ದು ಪಕ್ಷ ಭೇದವಿಲ್ಲದ ಸೇವೆ
Team Udayavani, Nov 28, 2018, 3:59 PM IST
ಹಾವೇರಿ: ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ದಿ| ಅನಂತಕುಮಾರ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಸಜ್ಜನವರ ಮಾತನಾಡಿ, ಅನಂತಕುಮಾರ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಮಾಡಿದೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತಿಗೂ ತಾರತಮ್ಯ ಮಾಡಿದವರಲ್ಲ, ಅನ್ಯ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಅನಂತಕುಮಾರವರು ಯಾವುದೇ ಫಲಾಪೇಕ್ಷೆಯಿಲ್ಲದೆ, ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು.
ನಾನು ಜನತಾದಳದಲ್ಲಿದ್ದಾಗ ಅವರು ಕೇಂದ್ರ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ನನ್ನ ಕೆಲಸವನ್ನು ಪಕ್ಷಪಾತ ಮಾಡದೇ ಮಾಡಿಕೊಟ್ಟಿದ್ದರು. ಹಸಿದ ಹೊಟ್ಟಿಯಲ್ಲಿ ಸೈಕಲ್ ಮೇಲೆ ತಿರುಗಿ ಪಕ್ಷ ಕಟ್ಟಿ ರಾಷ್ಟ್ರದಲ್ಲಿ ಏಕೈಕ ಪಕ್ಷ ಸರ್ಕಾರ ರಚಿಸುವಲ್ಲಿ ಅನಂತಕುಮಾರವರ ಪಾತ್ರ ಬಹುಮುಖ್ಯವಾಗಿತ್ತು. ಇಂದಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮೋದಿಜೀ ಅವರ ಜತೆಗೆ ಅನಂತಕುಮಾರ ಅವರು ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಅಕಾಲಿಕ ನಿಧನ ನಮೆಗೆಲ್ಲ ಆಘಾತವನ್ನು ಉಂಟುಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ಹಾಗೂ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯಾದರ್ಶಿ ಸಿದ್ದರಾಜ ಕಲಕೋಟಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಿಜೆಪಿ ಎಂದರೇ ಅವಿಭಕ್ತ ಕುಟುಂಬ ಇದ್ದಂತೆ. ಈಗ ನಾವು ನಮ್ಮ ಕುಟುಂಬದ ಹಿರಿಯಣ್ಣನನ್ನು ಕಳೆದುಕೊಂಡಿದ್ದೇವೆ. ಬಿಜೆಪಿಯ ಪ್ರಾರಂಭದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪನವರ ಜತೆಗೆ ಸೈಕಲ್ ಮೇಲೆ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಿದ್ದರು. ಈ ಇಬ್ಬರು ನಾಯಕರು ಜೋಡೆತ್ತಿನ ಬಂಡಿ ಇದ್ದಂತಿದ್ದರು ಎಂದರು.
ಎಂ.ಎನ್. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಮುರಗೆಪ್ಪ ಶಟ್ಟರ, ಶಿವಾನಂದ ಮ್ಯಾಗೇರಿ, ಸುರೇಶ ಹೊಸಮನಿ, ಭಾರತಿ ಮಲ್ಲಿಕಾರ್ಜುನ, ಶೋಭಾ ನಿಸ್ಸಮಗೌಡರ, ಡಾ| ಸಂತೋಷ ಆಲದಕಟ್ಟಿ, ಶಂಕ್ರಣ್ಣ ಮಾತನವರ, ಎಂ.ಬಿ. ಪಾಟೀಲ, ಮಾಲತೇಶ ಸೋಪ್ಪಿನ, ನಿಂಗಪ್ಪ ಗೊಬ್ಬೇರ, ಚೋಳಪ್ಪ ಕಸವಾಳ, ವಿರುಪಾಕ್ಷಪ್ಪ ಕಡ್ಲಿ, ಸಿ.ಡಿ. ಹಾವೇರಿ, ಮುತ್ತಣ್ಣ ಯಲಿಗಾರ, ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.