ಹಾವೇರಿ: ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ ಎಲೆಬಳ್ಳಿ ಬೆಳೆ ಕ್ಷೇತ್ರ

ಮೂರೇ ವರ್ಷಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಸಾಧ್ಯವಿಲ್ಲ

Team Udayavani, Jan 13, 2025, 5:49 PM IST

ಹಾವೇರಿ: ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ ಎಲೆಬಳ್ಳಿ ಬೆಳೆ ಕ್ಷೇತ್ರ

ಉದಯವಾಣಿ ಸಮಾಚಾರ
ಹಾವೇರಿ: ಬಂಗಾರದ ಬೆಳೆ ಎಂದೇ ಗುರುತಿಸಿಕೊಂಡಿದ್ದ ಎಲೆಬಳ್ಳಿ(ವೀಳ್ಯದೆಲೆ)ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 393.84 ಹೆಕ್ಟೇರ್‌ ಕುಸಿತ ಕಂಡಿರುವುದು ಆತಂಕ ಮೂಡಿಸಿದೆ.

ಕಳೆದ 2-3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಎದುರಾದ ಅತಿವೃಷ್ಟಿ, ಪ್ರವಾಹ ಹಾಗೂ ಬರದಿಂದ ಎಲೆಬಳ್ಳಿ ತೋಟ ನಿರ್ವಹಣೆಗೆ ಕಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಎಲೆಬಳ್ಳಿ ತೋಟದಿಂದ ವಿಮುಕ್ತರಾಗುತ್ತಿದ್ದಾರೆ. ಎಲೆಬಳ್ಳಿ ತೋಟಕ್ಕೆ ನೀರಾವರಿ ಅಗತ್ಯವಿದ್ದು, ಜಿಲ್ಲೆಯಲ್ಲಿ ವಾತಾವರಣದ ವೈಪರಿತ್ಯದ ಪರಿಣಾಮ ವೀಳ್ಯೆದೆಲೆ ಬೆಳೆಯಲು ರೈತರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಲೆಬಳ್ಳಿ ತೋಟ ಕ್ಷೀಣಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 2452.84 ಹೆಕ್ಟೇರ್‌
ಪ್ರದೇಶದಲ್ಲಿದ್ದ ಎಲೆಬಳ್ಳಿ ತೋಟ ಪ್ರಸಕ್ತ ವರ್ಷದಲ್ಲಿ 393.84 ಹೆಕ್ಟೇರ್‌ಗೆ ಕುಸಿತಗೊಂಡಿದೆ.

ಜಿಲ್ಲೆಯ ಸವಣೂರು, ಶಿಗ್ಗಾವಿ, ಹಿರೇಕೆರೂರು, ರಾಣಿಬೆನ್ನೂರು ಭಾಗದಲ್ಲಿ ನವಾಬರ ಕಾಲದಿಂದಲೂ ವ್ಯಾಪಕವಾಗಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಅದರಲ್ಲೂ ಸವಣೂರು ಎಲೆಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಆದರೆ ನಿರಂತರ ಬರದಿಂದ ಎಲೆಬಳ್ಳಿ ತೋಟದ ಮೇಲೆ ಪರಿಣಾಮ ಉಂಟು ಮಾಡಿದೆ. ಅಲ್ಲದೇ ಕೃಷಿ ಕಾರ್ಮಿಕರ ಕೊರತೆ, ವಿವಿಧ ರೋಗಬಾಧೆ, ಸಕಾಲಿಕ ಮಾಹಿತಿ ಕೊರತೆಯಿಂದ ಎಲೆಬಳ್ಳಿ ತೋಟ ಸೊರಗುತ್ತಿವೆ.

ಎಲೆಬಳ್ಳಿ ತೋಟದ ಅಂಕಿ-ಅಂಶಗಳ ಕುರಿತು ಸ್ವತಃ ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕೂಡ ಈ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಮೂರೇ ವರ್ಷಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಸಾಧ್ಯವಿಲ್ಲ. ಆದರೆ ಬೆಳೆ ಸರ್ವೇ ಸಂದರ್ಭದಲ್ಲಿ ಎಲೆಬಳ್ಳಿ, ತರಕಾರಿ ಬೆಳೆ ಎಂದು ಇತ್ತೀಚಿನ ದಿನಗಳಲ್ಲಿ ರೈತರು ನಮೂದಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.

ಅಲ್ಲದೇ ಈ ಮೊದಲು ಕ್ಷೇತ್ರ ಕಾರ್ಯ ಅಂದರೆ ಸ್ವತಃ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಸಿಬ್ಬಂದಿ ಜಮೀನಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸುತ್ತಿದ್ದರು. ಆದರೆ ಪ್ರಸ್ತುತ ತಾಂತ್ರಿಕತೆ ಪರಿಣಾಮ ಇಂದು ಸ್ವತಃ ರೈತರೇ “ಮೊಬೈಲ್‌ ಆ್ಯಪ್‌’ ಮೂಲಕ ತಮ್ಮ ಬೆಳೆ ನಮೂದು ಮಾಡುವ ಅವಕಾಶವಿದೆ. ಈ ವೇಳೆ ಮೆಕ್ಕೆಜೋಳಕ್ಕೆ ಉತ್ತಮ ಬೆಳೆವಿಮೆ ಇರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ನಮೂದಿಸದೇ ಇರುವುದು ಇಲಾಖೆಗೆ ಸವಾಲಾಗಿದೆ.

ಒಟ್ಟಾರೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿನ ವೀಳ್ಯದೆಲೆ ಅಥವಾ ಎಲೆಬಳ್ಳಿ ತೋಟಗಳು ವರ್ಷದಿಂದ ವರ್ಷಕ್ಕೆ ಕುಸಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಯಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳುವ ಜತೆಗೆ ರೈತರಿಗೆ ಎಲೆಬಳ್ಳಿ ಬೆಳೆಯಲು ಪ್ರೋತ್ಸಾಹ ನೀಡಲು ಮುಂದಾಗಬೇಕಿದೆ.

ಜಿಲ್ಲೆಯಲ್ಲಿ ಅಡಿಕೆ ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದ್ದು,ವೀಳ್ಯದೆಲೆ ಮತ್ತು ತರಕಾರಿ ಬೆಳೆಯ ಕ್ಷೇತ್ರದಲ್ಲಿ ಕುಸಿತ ಕಂಡಿದೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಇದರ ಸಕಾಲಿಕ ನಿರ್ವಹಣೆ ಮತ್ತು ಜಾಗೃತಿ ಮೂಡಿಸುವತ್ತ ಗಮನ ಹರಿಸಿದ್ದೇವೆ.
*ಸಿದ್ರಾಮಯ್ಯ ಸಂಬರಗಿಮಠ, ಸಹಾಯಕ
ನಿರ್ದೇಶಕರು, ತೋಟಗಾರಿಕೆ ಇಲಾಖೆ.

ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ವೀಳ್ಯದೆಲೆ ಬೆಳೆಗಾರರು ಅಪಾರ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಎಲೆಬಳ್ಳಿ ತೋಟ ನಿರ್ವಹಣೆ ಮಾಡಲಾಗದೇ ರೈತರು ಪರ್ಯಾಯ ಬೆಳೆಗಳತ್ತ ಗಮನ ಹರಿಸುತ್ತಿದ್ದರಿಂದ ಜಿಲ್ಲೆಯಲ್ಲಿ ಎಲೆಬಳ್ಳಿ ತೋಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಸರ್ಕಾರ ಎಲೆಬಳ್ಳಿ ಬೆಳೆಗಾರರಿಗೆ ಅಗತ್ಯ
ಪ್ರೋತ್ಸಾಹ ನೀಡಬೇಕಿದೆ.
ಅಲ್ಲಾಭಕ್ತ ಕಡಕೋಳ, ಎಲೆಬಳ್ಳಿ ಬೆಳೆಗಾರ

■ ವೀರೇಶ ಮಡ್ಲೂರ

ಟಾಪ್ ನ್ಯೂಸ್

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

1-nidhi

Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.