ಹಾವೇರಿ: ವಾಸ್ತವಿಕ ಸ್ಥಿತಿಗತಿ ಪರಿಚಯಿಸುತ್ತದೆ “ಮನವಾಣಿಗಳು’ ಕೃತಿ
Team Udayavani, Jul 8, 2024, 4:00 PM IST
ಉದಯವಾಣಿ ಸಮಾಚಾರ
ಹಾವೇರಿ: ಪ್ರಸ್ತುತ ವಿಕೃತ ಮನಸ್ಸುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ತ ಚಂಚಲ ತಡೆಯಲು ಧಾರ್ಮಿಕ, ಅಧ್ಯಾತ್ಮ, ಶೈಕ್ಷಣಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರತಿನಿಧಿಸಿರುವ “ಮನವಾಣಿಗಳು ಕೃತಿ’ ಪ್ರತಿ ಮನುಷ್ಯನ ಜೀವವಾಣಿಯಾಗಿವೆ ಎಂದು ಬಸವಕಲ್ಯಾಣದ ಗುಣತೀರ್ಥ ವಾಡಿಯ ಮಹಾಮನೆ ಮಹಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ರವಿವಾರ ಚಿನ್ಮಯ ಪ್ರಕಾಶನ ಉಳೇನೂರು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಮನವಾಣಿಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕವಿ ಸೋಮನಾಥ ಡಿ. ಅವರು ತಮ್ಮ ಸಿದ್ಧಾಂತ, ಅನುಭವ ಮತ್ತು ಕೃತಜ್ಞತಾಪೂರ್ವಕ ಬಗೆಗಿನ ಭಾವನೆಗಳಿಗೆ ಕೃತಿ ರೂಪದಲ್ಲಿ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಮನಸ್ಸಿನಲ್ಲಿನ ಭಾವನೆಗಳಿಗೆ ಜ್ಞಾನದ ಒಡಲಿನ ರೂಪ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತಿ ಪ್ರತಿಯೊಬ್ಬರ ಮನಸ್ಸು ಏರಿಳಿತಗಳಿಗೆ ಜಾರಿ ಹೋಗುವುದನ್ನು ತಡೆಯುವಲ್ಲಿ ಯಶಸ್ವಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಬುದ್ಧ, ಬಸವ ಹಾಗೂ ಡಾ| ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನ
ಮಾರ್ಗದರ್ಶಿಯಾಗಿಸುವ ಮನವಾಣಿಗಳು ಕೃತಿ ವಾಸ್ತವಿಕ ಸ್ಥಿತಿಗತಿಗಳನ್ನು ಪರಿಚಯಿಸುತ್ತದೆ. ತಮ್ಮ ಮನಸ್ಸಿನ ಭಾವನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ಆಶಯಗಳು ಸಮಕಾಲೀನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು.
ಪ್ರಾಚಾರ್ಯ ಡಾ| ಅಶೋಕಕುಮಾರ ಮಿಟ್ಟಿ ಮಾತನಾಡಿ, ಮನುಷ್ಯನ ಹುಚ್ಚು ಆಶಯಗಳಿಗೆ ಮನಸ್ಸು ಕಾರಣ. ಸದ್ವಿಚಾರ ಮತ್ತು ಸುವಿಚಾರ ಮೂಲಕ ಬದುಕು ರೂಪಿಸಿಕೊಳ್ಳಲು ಮೌಲಿಕ ವಿಚಾರಗಳ ಹೊತ್ತಿಗೆ ಆಗಿರುವ ಮನವಾಣಿಗಳು ಸಹಕಾರಿ ಎಂದರು.
ಶಿಕ್ಷಕಿ ಜಯಲಕ್ಷ್ಮೀ ಆರ್. ಕೃತಿ ಪರಿಚಯ ಮಾಡಿದರು. ಕವಿ ಎ.ಎನ್. ರಮೇಶ ಗುಬ್ಬಿ, ಸಾಹಿತಿ ಡಾ| ಸವಿತಾ ಸಿರಗೋಜಿ, ತಹಶೀಲ್ದಾರ್ ಮಹೇಶ ಗಸ್ತೆ, ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿದರು. ಸಾಹಿತಿ ಕಲಾವಿದರ ಬಳಗದ ವಿ.ಪಿ. ದ್ಯಾಮಣ್ಣವರ, ಶೇಖಣ್ಣ ಕಳ್ಳಿಮನಿ, ಲೀಲಾವತಿ ಪಾಟೀಲ, ಸವಿತಾ ಹಿರೇಮಠ, ಮಧುಮತಿ ಚಿಕ್ಕೇಗೌಡ್ರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ, ಭಾಗ್ಯ ಎಂ.ಕೆ., ನೇತ್ರಾವತಿ ಅಂಗಡಿ, ಹನುಮಂತಸಿಂಗ್ ರಜಪೂತ್, ರಾಜಾಭಕ್ಷು ಹಾಗೂ ಚಿನ್ಮಯ ಪ್ರಕಾಶನದ ಯಮನಪ್ಪ , ಅಂಜನಪ್ಪ ಉಳೇನೂರು, ವಚನಶ್ರೀ ಉಳೇನೂರು, ಕಾಮ್ರೇಡ್ ರಾಮಾಂಜನೆಪ್ಪ ಇದ್ದರು. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಬಡಿಗೇರ ಹಾಗೂ ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ನಾಗರಾಜ ಹುಡೇದ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು.
ಸಾಹಿತ್ಯಕ ವಲಯದಲ್ಲಿ ಗಮನ ಸೆಳೆದಿರುವ ಮನವಾಣಿಗಳು ಕೃತಿ ಜನವಾಣಿಗಳಾಗಿವೆ. ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿರುವ ಕವಿ ಸೋಮನಾಥ ಡಿ ತಮ್ಮ ಸಾಹಿತ್ಯ ಪ್ರೇಮ ಮುಂದುವರಿಸಲಿ. ಹಾವೇರಿ ನೆಲದಲ್ಲಿ ಚೊಚ್ಚಲ ಕೃತಿ ಬಿಡುಗಡೆ ಆಗುತ್ತಿರುವುದು ಖುಷಿ ವಿಚಾರ.
*ಸತೀಶ ಕುಲಕರ್ಣಿ, ಸಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.