ಬೇಡಿಕೆ ಈಡೇರಿಸಲು ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರೂಪಿಸಿದ್ದ ಯೋಜನೆಗಳೆಲ್ಲ ಲಭ್ಯವಾಗಲಿ
Team Udayavani, Feb 6, 2020, 1:41 PM IST
ಹಾವೇರಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖೀಲ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಪ್ರವಾಸಿಗೃಹದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ, ಹೊಸಮನಿ ಸಿದ್ಧಪ್ಪ ಸರ್ಕಲ್ ಮಾರ್ಗವಾಗಿ ಮೈಲಾರ ಮಹದೇವ ವೃತ್ತಕ್ಕೆ ತಲುಪಿತು. ನಂತರ ಅಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಕಾರ್ಮಿಕರಿಗಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 15 ಯೋಜನೆಗಳನ್ನು ರೂಪಿಸಿದ್ದು ಸ್ವಾಗತರ್ಹ. ಆದರೆ, ಆ ಯೋಜನೆಗಳಲ್ಲಿ ಕಾರ್ಮಿಕರಿಗೆ ಕೆಲವೇ ಕೆಲವು ಸೌಲಭ್ಯಗಳು ದೊರಕುತ್ತಿದ್ದು, ಇನ್ನೂ ಕೆಲವು ಸೌಲಭ್ಯಗಳು ದೊರಕುತ್ತಿಲ್ಲ. ಇನ್ನೂ ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಕೂಡಲೇ ಕಾರ್ಮಿಕರ ಎಲ್ಲ ಯೋಜನೆಗಳನ್ನು ಜಾರಿಗೆ ತಂದು ಯೋಜನೆಗಳ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.
ಗೃಹಭಾಗ್ಯ ಯೋಜನೆಯಲ್ಲಿ ಕೆಲವೊಂದು ನ್ಯೂನತೆಯಿದ್ದು, ಎಲ್ಲವನ್ನು ಸರಿಪಡಿಸಬೇಕು. ಇಂದಿನ ದಿನಮಾನಗಳಲ್ಲಿ ಬೆಲೆ ಏರಿಕೆಯಾಗುತ್ತಿರುವ ಕಟ್ಟಡ ಕಾರ್ಮಿಕನಿಗೆ ತನ್ನ ಮನೆಯನ್ನು ನಿರ್ಮಿಸಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಕಾರಣ ಕಾರ್ಮಿಕನಿಗೆ 2 ಲಕ್ಷ ರೂ. ಸಹಾಯಧನ ರೂಪದಲ್ಲಿ ನೀಡಬೇಕು. ಮೂರು ಲಕ್ಷ ರೂ. ಸಾಲ ಕೊಡಬೇಕು ಎಂದು ಒತ್ತಾಯಿಸಿದರು. ಕಟ್ಟಡ ಕಾರ್ಮಿಕನ ವೃತ್ತಿಗಾಗಿ ಓದಗಿರುವ ಸಹಾಯಧನ ಸಾಕಾಗುವುದಿಲ್ಲ. ಆದ್ದರಿಂದ 3 ಲಕ್ಷ ರೂ., ಸಾಲ ಮಂಜೂರು ಮಾಡಬೇಕು ಮತ್ತು ಪಿಂಚಣಿ ಸೌಲಭ್ಯವನ್ನು 1000 ದಿಂದ 3000 ರೂ.ಗಳಿಗೆ ಹೆಚ್ಚಳ ಮಾಡಬೇಕು. ವೈದ್ಯಕೀಯ ಸಹಾಯಧನದ ಯೋಜನೆಯನ್ನು ಎರಡು ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಅದು ಚಿಕಿತ್ಸೆ ಪಡೆಯುವಾಗಲೇ ಹಣ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಾಗ ಒಂದು ಲಕ್ಷ ರೂ. ಪರಿಹಾರ ಯೋಜನೆಯನ್ನು ಜಾರಿಗೆ ತರಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಂಘದ ಸದಸ್ಯರನ್ನು ನೇಮಕ ಮಾಡಬೇಕು. ಸಂಘದ ಕಚೇರಿ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ 10ಗುಂಟೆ ಜಾಗ ನೀಡಬೇಕು. ಕಾರ್ಮಿಕರಿಗಾಗಿ ಯಾವುದೇ ಸಮುದಾಯ ಭವನಗಳು ಇಲ್ಲ. ಕಾರ್ಮಿಕರು ಮದುವೆ ಸಮಾರಂಭಗಳನ್ನು ಬೇರೆ ಬೇರೆ ಕಲ್ಯಾಣ ಮಂಟಪಗಳಲ್ಲಿ ಆಯೋಜಿಸುವಂತಾಗಿದೆ. ಕೂಡಲೇ ನಮಗೆ 10 ಗುಂಟೆ ಜಾಗ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜೈನುಲ್ಲಾದ್ದೀನ್ ಮುಜಾವರ, ಮಹಾಂತೇಶ ನಾಗನೂರ, ಹರೀಶ ಕ್ಷೌರದ, ಷಣ್ಮುಕಗೌಡ ಪಾಟೀಲ, ಚನ್ನಬಸಪ್ಪ ದೊಡ್ಡಮನಿ, ಗುರುಸಿದ್ಧಪ್ಪ ಹಡಪದ, ಶ್ರೀಕಾಂತಗೌಡ ಪುಟ್ಟನಗೌಡ್ರ, ವಿಶ್ವನಾಥ ಕೊಪ್ಪದ, ನಿಂಗನಗೌಡ ಪಾಟೀಲ, ಅಜ್ಜಪ್ಪ ಹಡಪದ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.