ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾದ ಪಕ್ಷೇತರರು


Team Udayavani, Apr 7, 2019, 6:00 AM IST

inde

ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸುವ ಅವಧಿ ಮುಕ್ತಾಯಗೊಂಡಿದ್ದು ನಾಮಪತ್ರ ಸಲ್ಲಿಸಿದವರಲ್ಲಿ ಯಾರೆಲ್ಲ ಇದ್ದಾರೆ? ಅವರು ನಾಮಪತ್ರ ಸಲ್ಲಿಸಿದ್ದರ ಹಿಂದೆ ಏನಿದೆ “ಅರ್ಥ’ ಎಂಬ ಚರ್ಚೆ ಶುರುವಾಗಿದೆ.

ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನಿಂದ ಡಿ.ಆರ್‌. ಪಾಟೀಲ, ಬಿಜೆಪಿಯಿಂದ ಶಿವಕುಮಾರ ಉದಾಸಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬಹುಜನ ಸಮಾಜ ಪಕ್ಷದಿಂದ ಆಯೂಬಖಾನ್‌ ಪಠಾಣ, ಇಂಡಿಯನ್‌ ಲೇಬರ್‌ ಪಾರ್ಟಿಯಿಂದ ಶೈಲೇಶ ನಾಜರೆ ಅಶೋಕ, ಉತ್ತಮ ಪ್ರಜಾಕೀಯಾ ಪಾರ್ಟಿಯಿಂದ ಈಶ್ವರ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಬಸವರಾಜ ಶಂಕ್ರಪ್ಪ ದೇಸಾಯಿ, ರುದ್ರಯ್ಯ ಅಂದಾನಯ್ಯ ಸಾಲಿಮಠ, ವೀರಭದ್ರಪ್ಪ ವೀರಪ್ಪ ಕಬ್ಬಿಣದ, ಹನುಮಂತಪ್ಪ ದೇವೇಂದ್ರಪ್ಪ ಕಬ್ಟಾರ, ಮಂಜುನಾಥ ಕಲವೀರಪ್ಪ ಪಂಚಾನನ, ಚಂದ್ರಪ್ಪ ಅಡ್ಡಿಕಾರ, ಹಾಶಂಪೀರಾ ಇನಾಂದಾರ, ಮಖೂºಲ್‌ ಅಹ್ಮದ ಮುಲ್ಲಾ, ನಜೀರ್‌ ಅಹ್ಮದ್‌, ರಾಮಮಪ್ಪ ಸಿದ್ದಪ್ಪ ಬೊಮ್ಮಾಜಿ, ವೀರೇಶ ಮಲ್ಲಪ್ಪ ಕಿರವಾಡಿ, ಶಿದ್ದಪ್ಪ ಕಲ್ಲಪ್ಪ ಪೂಜಾರ, ಡಾ| ಟೀಪುಸಾಬ್‌
ಹುಸೇನಸಾಬ್‌ ಕಲಕೋಟಿ, ಇಸ್ಮಾಯಿಲ್‌
ಮುತ್ತುಬಾಯಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರಲ್ಲಿ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಹಾಗೂತಮಗಿರುವ ಮತಬಲ ತೋರ್ಪಡಿಸಬೇಕು ಎಂಬಏಕೈಕ ಗುರಿಯೊಂದಿಗೆ ನಾಮಪತ್ರ ಸಲ್ಲಿಸಿದ್ದರೆ, ಇನ್ನು ಕೆಲವರು ಕ್ಷೇತ್ರದ ಒಂದಿಷ್ಟು ಮತ ಕಸಿಯಲು ಪ್ರಭಾವಿ ಅಭ್ಯರ್ಥಿಗಳ ಡೆಮ್ಮಿಯೂ ಆಗಿದ್ದಾರೆ. ಮತ್ತೆ ಇನ್ನಷ್ಟು ಜನರು ನಾಮಪತ್ರ ಸಲ್ಲಿಸಿ, ಹಿಂದಕ್ಕೆ ಪಡೆಯುವ ಹವ್ಯಾಸವುಳ್ಳವರೂ ಇದ್ದಾರೆ. ಹೀಗಾಗಿ ಯಾರು ಯಾವ ಉದ್ದೇಶದಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಚರ್ಚೆ ಅಲ್ಲಲ್ಲಿ ನಡೆಯುತ್ತಿದೆ.
ನಾಮಪತ್ರ ಸಲ್ಲಿಸಿದ ಪಕ್ಷೇತರರಲ್ಲಿ ಯಾರು ಕಣದಲ್ಲಿ ಉಳಿದರೆ ಯಾರಿಗೆ ತೊಂದರೆಯಾಗುತ್ತದೆ. ಯಾರಿಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ತೊಡಗಿಕೊಂಡಿವೆ.ಯಾರಿಂದ ತೊಂದರೆಯಾಗುತ್ತದೆಯೋ ಅಂಥ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಲು “ವಿವಿಧ ರೀತಿಯ’ ಪ್ರಯತ್ನವೂ ನಡೆಸಿದೆ.

ಕೈಗೆ ತಲೆಬಿಸಿ: ನಾಮಪತ್ರ ಸಲ್ಲಿಸಿದವರಲ್ಲಿ ಆರು ಅಭ್ಯರ್ಥಿಗಳು ಮುಸ್ಲಿಮರಾಗಿರುವುದು ಕಾಂಗ್ರೆಸ್‌ ಗೆ ತಲೆಬಿಸಿಯಾಗಿದೆ. ಬಹುಜನ ಸಮಾಜ ಪಕ್ಷದಿಂದ ಆಯೂಬಖಾನ್‌ ಪಠಾಣ, ಪಕ್ಷೇತರರಾಗಿ ಹಾನಗಲ್ಲ ತಾಲೂಕಿನ ದ್ಯಾಮನಕೊಪ್ಪದ ಹಾಶಂಪೀರಾ ಇನಾಂದಾರ್‌, ರಾಮತೀರ್ಥ ಹೊಸಕೊಪ್ಪದ
ಮಖೂºಲ್‌ ಅಹ್ಮದ ಮುಲ್ಲಾ, ಸವಣೂರಿನ ನಜೀರ್‌ ಅಹ್ಮದ್‌, ರಾಣಿಬೆನ್ನೂರಿನ ಡಾ| ಟೀಪುಸಾಬ್‌ ಹುಸೇನಸಾಬ್‌ ಕಲಕೋಟಿ ಹಾಗೂ ಶಿಗ್ಗಾವಿಯ ಇಸ್ಮಾಯಿಲ್‌ ಮುತ್ತುಭಾಯ್‌ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಈ ಬಾರಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡದೆ ಇರುವ ಅಸಮಾಧಾನವೇ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರು ನಾಮಪತ್ರ ಸಲ್ಲಿಸಲು
ಕಾರಣ ಎನ್ನಲಾಗುತ್ತಿದೆ. ಮುಸ್ಲಿಂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ
ಎಂಬ ಕೂಗು ಕಾಂಗ್ರೆಸ್‌ನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಈ ಅಸಮಾಧಾನ ಶಮನಗೊಳಿಸುವ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ನೀಡಲಾಗಿದ್ದು, ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.

ಮೂವರ ನಾಮಪತ್ರ ತಿರಸ್ಕೃತ ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಯಸಿ
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಸವಣೂರಿನ ನಜೀರ್‌ ಅಹ್ಮದ್‌ , ವೀರೇಶ ಕಿರವಾಡಿ ಹಾಗೂ ಇಸ್ಮಾಯಿಲ್‌ ಮುತ್ತಭಾಯ್‌ ಅವರ ನಾಮಪತ್ರ ತಿರಸ್ಕೃತಗೊಂಡಿವೆ. ಹೀಗಾಗಿ ಈಗ 19 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳಲ್ಲಿ 16 ಜನರ ನಾಮಪತ್ರ ಕ್ರಮಬದ್ಧವಾಗಿದ್ದು, ಇವರಲ್ಲಿ ಎಷ್ಟು ಜನರು ನಾಮಪತ್ರ ಹಿಂದಕ್ಕೆ ಪಡೆಯುತ್ತಾರೆ ಎಂಬುದು ಏ. 8ರ ವರೆಗೆ ಕಾದುನೋಡಬೇಕಿದೆ.

ಎರಡನೇ ಬಾರಿ ಸ್ಪರ್ಧೆ
ಪಕ್ಷೇತರರಾಗಿ ಈಗ ನಾಮಪತ್ರ ಸಲ್ಲಿಸಿದವರಲ್ಲಿ ಮೂವರು ಈ ಹಿಂದಿನ 2014ರ ಚುನಾವಣೆಯಲ್ಲಿಯೂ ನಾಮಪತ್ರ ಸಲ್ಲಿಸಿ,ಕಣದಲ್ಲಿ ಉಳಿದಿದ್ದರು. ಕಳೆದ ಬಾರಿ ಪಕ್ಷೇತರರಾಗಿ ಆಖಾಡದಲ್ಲಿದ್ದ ವೀರಭದ್ರಪ್ಪ ಕಬ್ಬಿಣದ ಕಳೆದ ಚುನಾವಣೆಯಲ್ಲಿ 1224, ಸಿದ್ದಪ್ಪ ಪೂಜಾರ15,656 ಹಾಗೂ ಹನುಮಂತಪ್ಪ ಕಬ್ಟಾರ 5997 ಮತಗಳನ್ನು ಪಡೆದಿದ್ದರು.

ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಜನರಿಗೆ ಉಚಿತ ಅಕ್ಕಿ, ಸಾಲ
ಮನ್ನಾದಂಥ ಪುಕ್ಕಟೆ ಸೌಲಭ್ಯ ಕೊಟ್ಟು ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿವೆ. ಈ ಸೌಲಭ್ಯಗಳನ್ನು ಕೊಡುವುದು ಬಿಟ್ಟು ಎಲ್ಲ ಬಡವರಿಗೆ ವಾರ್ಷಿಕ ಒಂದು ಲಕ್ಷ ರೂ. ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರನ್ನು
ಬಡತನ ರೇಖೆಯಿಂದ ಮೇಲೆತ್ತಬೇಕು. ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಬಾರಿ 1224 ಮತಗಳು ಬಿದ್ದಿದ್ದವು. ಈ ಬಾರಿ ಇನ್ನೂ ಹೆಚ್ಚು ಮತ ಬೀಳುವ ನಿರೀಕ್ಷೆ ಇದೆ.
ವೀರಭದ್ರಪ್ಪ ಕಬ್ಬಿಣದ, 2ನೇ ಬಾರಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಟಾಪ್ ನ್ಯೂಸ್

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.