ಸಂಪರ್ಕ ಸಾಧನೆ ಹೆಚ್ಚಾದಂತೆ ಮಾನವೀಯ ಸಂಬಂಧ ಕ್ಷೀಣ


Team Udayavani, Sep 29, 2018, 5:10 PM IST

29-sepctember-18.gif

ಹಾವೇರಿ: ಹೊಸ ಬರಹಗಾರರಿಗೆ ಉತ್ತೇಜನ ಕೊಡುವ ಉದ್ದೇಶದಿಂದ ‘ಸಂಕ್ರಮಣ ಸಾಹಿತ್ಯ ಬಳಗ’ ಆರಂಭಗೊಂಡಿದ್ದು ಇಲ್ಲಿಯ ಸರಕಾರಿ ನೌಕರರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಲೇಖಕ ಪ್ರೊ| ಚಂದ್ರಶೇಖರ ಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಂಪಾ, ಇಂದು ಸಂಪರ್ಕ ಸಾಧನೆಗಳು ಹೆಚ್ಚಾಗಿವೆ. ಆದರೆ, ಮಾನವೀಯ ಸಂಬಂಧಗಳು ಮಾತ್ರ ಕಡಿಮೆಯಾಗುತ್ತಿವೆ. ತಾತ್ಕಾಲಿಕ ಸುಖ ಮತ್ತು ಪ್ರಸಿದ್ಧಿ ಕೊಡುವ ವಾಟ್ಸಪ್‌, ಫೇಸ್‌ಬುಕ್‌ ಗಳಿಗಿಂತ ಮುದ್ರಣ ಸಾಹಿತ್ಯ ಕೈಗೆ ಸಿಗಬೇಕು. ಇದಕ್ಕಾಗಿ ‘ಸಂಕ್ರಮಣ ಸಾಹಿತ್ಯ ಬಳಗ’ ನಾಡಿನಲ್ಲಿ ಹೊಸ ಹಾಗೂ ದೊಡ್ಡ ವೇದಿಕೆಯಾಗಲಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಳಗ ಆರಂಭವಾಗಲಿದ್ದು ಈಗಾಗಲೇ ಗದಗ, ಹಾವೇರಿ ಹಾಗೂ ದಾವಣಗೆರೆಯಲ್ಲಿ ಪ್ರಾರಂಭವಾಗಿವೆ. ಕೇವಲ 10 ಬರಹಗಾರರು ಇದ್ದರೆ ಸಾಕು, ತಿಂಗಳಿಗೊಂದು ಕಾರ್ಯಕ್ರಮ ಜರುಗಿಸಬೇಕು. ಪುಸ್ತಕ ಚರ್ಚೆ, ವಿಮರ್ಶೆ ಹಾಗೂ ಸಮಕಾಲೀನ ಸಾಂಸ್ಕೃತಿಕ ಸಂದರ್ಭದ ಬಗ್ಗೆ ಚರ್ಚೆ ನಡೆಯಬೇಕೆಂದು ಚಂಪಾ ಹೇಳಿದರು.

ಬಹು ಮುಖ್ಯವಾಗಿ ಯುವ ಬರಹಗಾರರ ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆ ವ್ಯವಸ್ಥೆಯನ್ನು ‘ಸಂಕ್ರಮಣ ಸಾಹಿತ್ಯ ಬಳಗ’ ವಹಿಸಿ ಕನಿಷ್ಠ 300 ಪ್ರತಿಗಳನ್ನು ನಾಡಿನ ಎಲ್ಲ ಘಟಕಗಳಿಗೆ ಮಾರಾಟದ ರೂಪದಲ್ಲಿ ತಲುಪಿಸಲಾಗುವುದು ಎಂದರು. 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಡಾ| ಚಂದ್ರಶೇಖರ ಕಂಬಾರ ಕುರಿತು ಮಾತನಾಡಿದ ಚಂಪಾ, ಕಂಬಾರರು ಒಬ್ಬ ಹಳ್ಳಿ ಮೂಲದಿಂದ ಬಂದ ಸಹಜ ಸಾಹಿತಿ. ತಮ್ಮ ಕಾವ್ಯ ನಾಟಕ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಜನಪದ ಸತ್ವದ ಮೂಲಕ ಸೂರೆಗೊಂಡವರು ಎಂದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಕರಿಯಪ್ಪ ಹಂಚಿನಮನಿಯವರನ್ನು ಸನ್ಮಾನಿಸಲಾಯಿತು. ಪ್ರೊ| ಧರಣೇಂದ್ರ ಕರಕುರಿ, ಡಾ| ಜೆ.ಜಿ. ದೇವಧರ, ಪ್ರಕಾಶ ಮನ್ನಂಗಿ, ರೇಣುಕಾ ಗುಡಿಮನಿ, ವೈ.ಬಿ. ಆಲದಕಟ್ಟಿ ಹಾಗೂ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿದರು. 

ಸಮಾರಂಭದಲ್ಲಿ ಡಾ| ವಿ.ಪಿ. ದ್ಯಾಮಣ್ಣನವರ, ಸಿ.ಆರ್‌. ಮಾಳಗಿ, ಪರಿಮಳಾ ಜೈನ, ಸಿದ್ದುಮತಿ ನೆಲವಿಗಿ, ಮಲ್ಲಿಕಾರ್ಜುನ ಹಿಂಚಿಗೇರಿ, ಸಿ.ಎ. ಕೂಡಲಮಠ, ಎಸ್‌. ಆರ್‌. ಹಿರೇಮಠ, ಸಿ.ಎಸ್‌. ಮರಳಿಹಳ್ಳಿ, ವಿ.ಎಂ. ಪತ್ರಿ, ಮಾಲತೇಶ ಅಂಗೂರ, ಜಿ.ಎಂ. ಓಂಕಾರಣ್ಣನವರ ಮುಂತಾದವರು ಪಾಲ್ಗೊಂಡಿದ್ದರು.

‘ಸಂಕ್ರಮಣ ಸಾಹಿತ್ಯ ಬಳಗ’ ಸಂಚಾಲಕರನ್ನಾಗಿ ಕೃಷ್ಣಾ ಜವಳಿ, ವಾಗೀಶ ಹೂಗಾರ ಹಾಗೂ ಪುಷ್ಪಾ ಶಲವಡಿಮಠ ಅವರನ್ನು ಆಯ್ಕೆ ಮಾಡಲಾಯಿತು. ಲೇಖಕಿ ರಾಜೇಶ್ವರಿ ಸಾರಂಗಮಠ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ನಿರ್ವಹಿಸಿದರು. ವಾಗೀಶ ಹೂಗಾರ ವಂದಿಸಿದರು.

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.