ಮಗುವನ್ನು ತೊರೆದ ತಾಯಿ ಠಾಣೆಗೆ ಹಾಜರ್!
Team Udayavani, Jan 15, 2021, 4:40 AM IST
ಹಾನಗಲ್ಲ: ಬಡತನದ ಕಾರಣದಿಂದ 10 ತಿಂಗಳ ಕೂಸೊಂದನ್ನು ಹೆತ್ತ ತಾಯಿಯೇ ದಾಬಾ ಒಂದರ ಬಳಿ ಬಿಟ್ಟು ಹೋಗಿದ್ದು, ಮರುದಿನ ಆಕೆಯೇ ಮಗುವಿಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ ಕುತೂಹಲಕಾರಿ ಘಟನೆ ನಗರದಲ್ಲಿ ನಡೆದಿದೆ.
ಜ.12ರಂದು ತಾಲೂಕಿನ ನಾಲ್ಕನೇ ಕ್ರಾಸ್ ಬಳಿಯ ದಾಬಾದಲ್ಲಿ ಮಗುವನ್ನು ತೊರೆದಿದ್ದ ತಾಯಿ ಪಕ್ಕದ ಅಂಗಡಿಯಲ್ಲಿ ಕುಳಿತು ಮಗುವಿನ ಮೇಲೆ ನಿಗಾ ಇಟ್ಟಿದ್ದಳು. ಪೊಲೀಸರು ಆಗಮಿಸಿ ಮಗುವನ್ನು ರಕ್ಷಿಸಿದುದನ್ನು ಕಂಡು ಖುಷಿಯಿಂದ ಮನೆಗೆ ಹೋಗಿದ್ದಳು. ಆದರೆ ರಾತ್ರಿಯಿಡೀ ಪಶ್ಚಾತ್ತಾಪಪಟ್ಟು ಮರುದಿನ ಠಾಣೆಗೆ ಆಗಮಿಸಿ ಮಗು ತನ್ನದೆಂದು ಹೇಳಿದ್ದಾಳೆ. ಪೊಲೀಸರು ವಿಚಾರಿಸಿದಾಗ ಮನೆಯ ಬಡತನ, ಗಂಡನ ಕುಡಿತದಿಂದ ನೊಂದು ಈ ಕೃತ್ಯ ಎಸಗಿದ್ದೇನೆ ಎಂದಿದ್ದಾಳೆ. ಕೊನೆಗೆ ಮಗುವನ್ನು ಆಕೆಗೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.