ಮತದಾರರ ಪಟಿಗೆ ಹೆಸರು ಸೇರ್ಪಡೆಗೆ ನ. 6 ಕೊನೆ ದಿನ
Team Udayavani, Oct 20, 2019, 3:18 PM IST
ಸವಣೂರು: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಪದವಿಧರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡುವವರು ನ. 6ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್ ವಿ.ಡಿ.ಸಜ್ಜನ್ ತಿಳಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಪದವೀಧರ ಕ್ಷೇತ್ರದ ಮತದಾದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಸಲುವಾಗಿ ಶನಿವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಲು ಪದವಿ ಶಿಕ್ಷಣವನ್ನು ಪಡೆದ ಮತದಾರರಿಗೆ ಅವಕಾಶವಿದ್ದು, ನಮೂನೆ 18 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. 2019 ನ. 1 ದಿನಾಂಕದಿಂದ ಸುಮಾರು 3 ವರ್ಷಗಳ ಹಿಂದೆ ಪದವಿಧರರಾಗಿರಬೇಕು. ಕಳೆದ ಚುನಾವಣೆಯಲ್ಲಿ ಮತದಾರರಾಗಿದ್ದರೂ ಕೂಡಾ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು.
ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೀಡಲಾದ ಪದವಿ ಪ್ರಮಾಣಪತ್ರ ದೃಢೀಕರಣಗೊಂಡ ನಕಲು ಪ್ರತಿಯನ್ನು ಲಗತ್ತಿಸಬೇಕು. ವಿಶ್ವವಿದ್ಯಾಲಯವು ನೋಂದಾಯಿತ ಪದವೀಧರನೆಂಬುದಾಗಿ ನೀಡಿದ ನೋಂದಣಿ ಕಾರ್ಡಿನ ದೃಢೀಕರಣ ಪ್ರತಿ, ಕಾಯಂ ರಹವಾಸಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್‌ಗಳಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಲಗತ್ತಿಸಬೇಕು. ಮತದಾರರ ನಮೂನೆ 18ರಲ್ಲಿ ಸಂಪೂರ್ಣಮಾಹಿತಿಯನ್ನು ತುಂಬಿರಬೇಕು.
ಅನಾವಶ್ಯಕ ವಿವರ (ತಂದೆ, ತಾಯಿ, ಗಂಡ)ಗಳನ್ನು ತೆಗೆದುಹಾಕಬೇಕು. ಭರ್ತಿ ಮಾಡಿದ ಮತದಾರರ ನೋಂದಣಿಯ ಅರ್ಜಿಯನ್ನು ನ. 6ರ ಒಳಗಾಗಿ ಕಂದಾಯ ಇಲಾಖೆಯ ಚುನಾವಣಾ ವಿಭಾಗದ ಕಚೇರಿಗೆ ತಲುಪಿಸಬೇಕು ಎಂದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಸಂಪನ್ಮೂಲ ಅಧಿಕಾರಿ ನಾಗರಾಜ ಬಣಕಾರ, ಅಕ್ಷರದಾಸೋಹ ಅಧಿಕಾರಿ ಸುಣದೊಳ್ಳಿ, ಆರ್.ಎಂ.ಭುಜಂಗ, ಟಿಎಚ್‌ಒ ಡಾ| ಚಂದ್ರಕಲಾ, ಮಾಲಿಂಗಪ್ಪ ಕುಂಬಾರ, ನಾಗಪ್ಪ ತಿಪ್ಪಕ್ಕನವರ ಸೇರಿದಂತೆ
ವಿವಿಧ ಇಲಾಖೆಗಳ ತಾಲೂಕುಮಟ್ಟದ ,ಅಧಿಕಾರಿಗಳು ಇದ್ದರು. ಕಾರ್ಯಕ್ರಮವನ್ನು ಚುನಾವಣಾಧಿಕಾರಿ ಆರ್.ಎಂ.ಅಡಿಗ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ
Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ
ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.