ಮಣ್ಣು ಪರೀಕ್ಷಿಸಿ ಪೋಷಕಾಂಶಗಳ ನಿರ್ವಹಣೆ ಮಾಡಿ: ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್.
ರೈತ ಮಹಿಳೆಯರಿಗೆ ಮಾವಿನ ಹಣ್ಣು ಸಂಸ್ಕರಣೆ ಕಾರ್ಯಾಗಾರ
Team Udayavani, Jun 13, 2022, 3:37 PM IST
ರಾಣಿಬೆನ್ನೂರ: ಉತ್ತಮ ಗುಣಮಟ್ಟದ ಹಾಗೂ ಶುಚಿ-ರುಚಿಯಾದ ಸಂಸ್ಕರಿಸಿದ ತಿನಿಸುಗಳನ್ನು ಪಡೆಯಲು ಗುಣಮಟ್ಟದ ಮಾವಿನ ಹಣ್ಣುಗಳು ಅತ್ಯವಶ್ಯಕ. ಇದಕ್ಕಾಗಿ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶಗಳ ನಿರ್ವಹಣೆ ಮಾಡುವುದರ ಜೊತೆಗೆ ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಮಾವಿನ ಬೆಳೆಗೆ ಬಳಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್. ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಹುಡೆ ಗ್ರಾಮದಲ್ಲಿ ಮಾವಿನ ಹಣ್ಣುಗಳ ಸಂಸ್ಕರಣೆ ಕುರಿತು ರೈತ ಮಹಿಳೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿವಿಧ ಸಂಸ್ಕರಿಸಿದ ಮಾವಿನ ಕಾಯಿ ಮತ್ತು ಹಣ್ಣುಗಳ ಪದಾರ್ಥಗಳು ವರ್ಷದಲ್ಲಿ ಕೇವಲ 3-4 ತಿಂಗಳುಗಳ ಕಾಲ ಮಾತ್ರ ದೊರಕುವುದರಿಂದ ಈ ಹಣ್ಣಿಗೆ ಸಂಸ್ಕರಣೆ ಅತ್ಯಗತ್ಯವಾಗಿದೆ. ಇದರಿಂದ ವರ್ಷಪೂರ್ತಿ ಮಾವನ್ನು ಸವಿಯಬಹುದಾಗಿದೆ. ಜೊತೆಗೆ ಮಾರುಕಟ್ಟೆ ಕಂಡುಕೊಂಡರೆ, ಸಣ್ಣ ಉಧ್ಯಮವನ್ನಾಗಿ ಇದನ್ನು ಪರಿವರ್ತಿಸಿ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದರು.
ಕೇಂದ್ರದ ವಿಜ್ಞಾನಿ ಡಾ| ಸಂತೋಷ್ ಎಚ್. ಎಂ., ದೇವಿಹೊಸೂರಿನ ಸಹಾಯಕ ಪ್ರಾಧ್ಯಾಪಕ ಡಾ| ತಿಪ್ಪಣ್ಣ ಮತ್ತು ಡಾ| ಪೂಜಾರ ಅವರು, ರೈತ ಮಹಿಳೆಯರಿಗೆ ಮನೆಯಲ್ಲೇ ಬೆಳೆದ ಮಾವಿನ ಹಣ್ಣುಗಳನ್ನು ಬಳಸಿ ಜಾಮ್ ತಯಾರಿಕೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು.
ಜಾಮ್ ತಯಾರಿಸಲು ಪ್ರತಿ 1 ಕೆಜಿ ಹಣ್ಣಿನ ತಿರುಳಿಗೆ 750-800 ಗ್ರಾಂ ಸಕ್ಕರೆ ಬೆರೆಸಿ, ಅದರ ಮಿಶ್ರಣವನ್ನು ಕುದಿಸಿ, ಅದು ದ್ರವರೂಪದಿಂದ ಸ್ವಲ್ಪ ಮಟ್ಟಿಗೆ ಘನರೂಪಕ್ಕೆ ಬರುವಂತೆ ಮಾಡಲು ಪೆಕ್ಟಿನ್ ಪುಡಿ (1 ಗ್ರಾಂ) ಸೇರಿಸಬೇಕೆಂದು ತಿಳಿಸಿದರು.
ರೈತ ಮಹಿಳೆ ಪ್ರೇಮಾ ರಾವಳ ಅವರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ತರಬೇತಿ ಶಿಬಿರದಲ್ಲಿ ಸುಮಾರು 25 ರೈತ ಮಹಿಳೆಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.