ಜನೌಷಧ ಜತೆ ವಾಕಿಂಗ್ ಮಾಡಿ: ಸಚಿವ ಶಂಕರ್
Team Udayavani, Mar 8, 2021, 5:36 PM IST
ರಾಣಿಬೆನ್ನೂರ: ಕೋಟ್ಯಂತರ ಬಡವರಿಗೆ ಅಗ್ಗದ ದರದಲ್ಲಿ ಯೋಗ್ಯ ಔಷಧ ನೀಡಿ ಅವರ ಆರೋಗ್ಯ ಸುಧಾರಣೆಗೆ ಕಾರಣರಾದ ಕೇಂದ್ರ ಸಚಿವ ದಿ. ಅನಂತಕುಮಾರ ಅವರು, ಬಡವರ ಪಾಲಿನಪಿತಾಮಹರೆನಿಸಿಕೊಂಡು ಇಂದಿಗೂಜನಮಾನಸದಲ್ಲಿ ಉಳಿದಿದ್ದಾರೆ ಎಂದು ತೋಟಗಾರಿಕಾ ಮತ್ತು ರೇಷ್ಮೆ ಖಾತೆ ಸಚಿವ ಆರ್.ಶಂಕರ್ ಹೇಳಿದರು.
ರವಿವಾರ ಸ್ಥಳೀಯ ವಾಗೀಶ ನಗರದಲ್ಲಿ ಹಾವೇರಿ ಜಿಲ್ಲಾ ಜನ ಔಷಧ ಕೇಂದ್ರದ ಮಾಲಿಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ 3ನೇ ವರ್ಷದ ಜನೌಷಧ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜನೌಷ ಧದ ಜೊತೆಗೆ ದಿನಂಪ್ರತಿವಾಕಿಂಗ್, ಪ್ರಾಣಾಯಾಮ, ಯೋಗಾಸನಗಳನ್ನು ಮುನ್ನಡೆಸಿ ಕೊಂಡು ಬಂದರೆ ಉತ್ತಮ ಆರೋಗ್ಯ ಹಾಗೂ ಆಯುಷ್ಯವನ್ನು ಪಡೆಯಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಜನೌಷಧ ದಿವಸ್ ಮಿತ್ರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ದೇಶದಲ್ಲಿ 7599 ಜನೌಷಧ ಕೇಂದ್ರಗಳಿದ್ದು, ರಾಜ್ಯದಲ್ಲಿ 750 ಕ್ಕೂ ಹಾಗೂ ಜಿಲ್ಲೆಯಲ್ಲಿ 25 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದಿ. ಅನಂತಕುಮಾರರ ಕನಸಿನ ಕೂಸಾದ ಈ ಜನೌಷಧ ಕೇಂದ್ರಗಳಿಂದ ಇಂದು ಬಡವರು, ಶ್ರೀಸಾಮಾನ್ಯರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಸಿದ್ದಪ್ಪಚಿಕ್ಕಬಿದರಿ, ಡಾ.ಬಿ.ಆರ್. ಸಾವಕಾರ, ನಗರಸಭಾ ಸದಸ್ಯರಾದಕೆಎಂಪಿ ಮಣಿ, ಹುಚ್ಚಪ್ಪ ಮೇಡ್ಲೆರಿ, ಹಬೀಬುಲ್ಲಾ ಕಂಬಳಿ, ಮಾಳಪ್ಪಪೂಜಾರ, ಸಂಘದ ಪದಾಧಿಕಾರಿಗಳು, ಜನೌಷಧ ವಿತರಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.