ಸಂತ ಕನಕದಾಸರ ಜೀವನ ಚರಿತ್ರೆ ಕಿರುಚಿತ್ರ ಪ್ರದರ್ಶನ
Team Udayavani, Mar 10, 2021, 6:15 PM IST
ಬಂಕಾಪುರ: ಪಟ್ಟಣದ ಕೊಟ್ಟಿಗೇರಿ ಬೀರಪ್ಪ ದೇವಸ್ಥಾನದ ಆವರಣದಲ್ಲಿ ಶ್ರೀ ಕನಕ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ನಿರ್ಮಾಣಗೊಂಡ ಶ್ರೀಸಂತ ಕನಕದಾಸರ ಜೀವನ ಚರಿತ್ರೆಯ ಕಿರುಚಿತ್ರ ಪ್ರದರ್ಶನಕ್ಕೆ ಶ್ರೀ ಕೆಂಡದಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
45 ನಿಮಿಷಗಳ ಕನಕದಾಸರ ಜೀವನಚರಿತ್ರೆಯುಳ್ಳ ಕಿರುಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಕೆಂಡದಮಠದಶ್ರೀಗಳು, ಬೀರಪ್ಪ ಬಚ್ಚಮ್ಮ ದಂಪತಿ ಏಕೈಕ ಪುತ್ರ ತಿಮ್ಮಪ್ಪ (ಕನಕದಾಸರು) ಭೂಮಿಯನ್ನುಅಗೆಯುವಾಗ ಸಿಕ್ಕ ಅಪಾರ ನಿಧಿ ಯನ್ನು ಪ್ರಜೆಗಳಹಿತ ರಕ್ಷಣೆಗಾಗಿ ಬಳಸಿ ತಿಮ್ಮಪ್ಪ, ಕನಕನಾಯಕನಾಗಿಜನರ ಮನದಲ್ಲಿ ಕನಕದಾಸರಾಗಿ ಇಂದಿಗೂಅಜರಾಮರ ವಾಗಿದ್ದಾರೆ. ಅಂತಹ ಮಹಾ ಸಂತಕನಕದಾಸರ ಜೀವನ ಚರಿತ್ರೆಯನ್ನು ಇಂದಿನ ಮಕ್ಕಳಿಗೆ ದೃಶ್ಯ ಮಾಧ್ಯಮದ ಮೂಲಕ ಬಾಗೆವಾಡಿಶ್ರೀ ಕನಕ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದಪ್ರಸ್ತುತಪಡಿಸುತ್ತಿರುವುದು ಶ್ಲಾಘನೀಯಕಾರ್ಯಕ್ರಮಗಳಲ್ಲೊಂದಾಗಿದೆ ಎಂದು ಹೇಳಿದರು.
ಶ್ರೀ ಕನಕ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ: ಎಸ್.ಎಸ್.ಅಳಗುಂಡಗಿ ಮಾತನಾಡಿ, ಸಮಾಜಕ್ಕೆಏನನ್ನಾದರೂ ವಿಶೇಷ ಕೊಡುಗೆ ಕೊಡಬೇಕೆನ್ನುವತುಡಿತ ನನ್ನಲ್ಲಿತ್ತು. ಆದರೆ ಅದನ್ನು ಈ ಮೂಲಕಅಭಿವ್ಯಕ್ತಪಡಿಸುತ್ತಿದ್ದೇನೆ. ಈ ಕಿರುಚಿತ್ರರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಯಹೋಬಳಿ ಮಟ್ಟದ ಗ್ರಾಮಗಳಲ್ಲಿ ಪ್ರದರ್ಶಿಸುವಮೂಲಕ ಕನಕದಾಸರ ಇತಿಹಾಸವನ್ನು ಇಂದಿನಯುವಸಮೂಹಕ್ಕೆ ತಿಳಿಸುವ ಉದ್ದೇಶವಿದೆ ಹೇಳಿದರು.
ಕನಕದಾಸರ ಜನ್ಮಸ್ಥಳ ಬಾಡ ಗ್ರಾಮದಲ್ಲಿ55 ಕೆ.ಜಿ. ಬೆಳ್ಳಿಯಲ್ಲಿ ದಾಸಶ್ರೇಷ್ಠ ಕನಕದಾಸರಮೂರ್ತಿ ತಯಾರಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ಕೆ ಸುಮಾರು34 ಲಕ್ಷ ರೂ. ವೆಚ್ಚ ತಗಲುವ ಸಾಧ್ಯತೆಯಿದ್ದು,ರಾಜ್ಯಾದ್ಯಂತ ಹಾಲುಮತ ಸಮಾಜದಿಂದ ಬೆಳ್ಳಿಕೊಡುಗೆ ನಿರೀಕ್ಷಿಸಲಾಗಿದೆ. ಹಾಲುಮತ ಕುರುಬಸಮಾಜ ಬಾಂಧವರು ತನು, ಮನ, ದನಗಳಿಂದಸೇವೆ ಸಲ್ಲಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಂಡದಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹಾಗೂ ಕನಕ ಅಭಿವೃದ್ಧಿಸಂಸ್ಥೆ ಅಧ್ಯಕ್ಷ ಎಸ್.ಎಸ್.ಅಳಗುಂಡಗಿ ಅವರನ್ನುಮುಖಂಡರಾದ ಬೀರಪ್ಪ ಸಣ್ಣತಮ್ಮಣ್ಣವರ, ಮಧು ಜಂಗಳಿಯವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.