ಅದ್ದೂರಿ ಅಕ್ಷರ ಜಾತ್ರೆ ಯಶಸ್ವಿ


Team Udayavani, Jan 9, 2023, 5:50 AM IST

ಅದ್ದೂರಿ ಅಕ್ಷರ ಜಾತ್ರೆ ಯಶಸ್ವಿ

ಹಾವೇರಿ: ಮೂಲ ಸೌಲಭ್ಯ ಕೊರತೆ ಕಾರಣ ದಿಂದಲೇ ಹಲವು ದಶಕಗಳಿಂದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಂಚಿತ ಹಾವೇರಿ, ಮೊದಲ ಬಾರಿಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಹುದಹುದು ಎನ್ನುವಂತೆ ನಡೆದು, ಸೌಲಭ್ಯಗಳೊಂದೇ ಸಮ್ಮೇಳನಕ್ಕೆ ಮನದಂಡವಲ್ಲ ಎಂಬು ದನ್ನು ಸಾಕ್ಷೀಕರಿಸಿ ಅದ್ದೂರಿ ನುಡಿ ಜಾತ್ರೆಯಾಗಿ ಹೊರಹೊಮ್ಮಿತು.

ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಅರ್ಥಪೂರ್ಣ ಧ್ಯೇಯಯೊಂದಿಗೆ ಮೂರು ದಿನ ನಡೆದ ಯಶಸ್ವಿ ಸಮ್ಮೇಳನ, ಮುಂದಿನ ಸಾಹಿತ್ಯ ಸಮ್ಮೇಳನಗಳ ಅಚ್ಚುಕಟ್ಟು ವ್ಯವಸ್ಥೆಗೆ ಮುನ್ನುಡಿ ಹಾಕಿಕೊಟ್ಟಂತಾಗಿದೆ. ಸಮ್ಮೇಳನಾ ಧ್ಯಕ್ಷರ ಅದ್ದೂರಿ ಮೆರವಣಿಗೆ, ಅರಮನೆ ದರ್ಬಾರ್‌ ಮಾದರಿಯಲ್ಲಿ ರಚಿಸಿದ ಕೆಂಪು, ಹಳದಿ ಹಾಗೂ ಬಂಗಾರದ ವರ್ಣಗಳಿಂದ ನಿರ್ಮಿ ಸಿದ ವಿಶೇಷ ರಥ, ರಾಜ್ಯಾದ್ಯಂತ ಸಂಚ ರಿಸಿದ ತಾಯಿ ಭುವನೇಶ್ವರಿಯ ಸುಂದರ ಕನ್ನಡ ರಥಯಾತ್ರೆ, ಏಲಕ್ಕಿ ಕಂಪಿನ ನಗರಕ್ಕೆ ದಸರಾ ಮಾದರಿಯಲ್ಲಿ ಮಾಡಿದ ದೀಪಾಲಂಕಾರ, ಅಕರ್ಷಕ ಸಾರೋಟುಗಳ ವ್ಯವಸ್ಥೆ, ಲಕ್ಷಾಂತರ ಜನರಿಗೆ ನಿತ್ಯ ರುಚಿ-ಶುಚಿಯಾದ ವೈವಿ ಧ್ಯಮ ಯ ಖಾದ್ಯದ ಊಟ, ಯಾವುದೇ ಗದ್ದಲ ಗಲಾಟೆಗೆ ಆಸ್ಪದ ನೀಡದಿರಲು ಮಾಡಿದ 200 ಊಟದ ಕೌಂಟರ್‌ಗಳು, ವಸತಿ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

86 ಪುಸ್ತಕಗಳ ಬಿಡುಗಡೆ: ವಸತಿ, ಊಟದ ಜತೆಗೆ ಮಸ್ತಕಕ್ಕೂ ಜ್ಞಾನಸುಧೆ ಹರಿಸಲಾಯಿತು. 86ನೇ ಸಮ್ಮೇಳನಕ್ಕಾಗಿಯೇ ಬರೋಬ್ಬರಿ 86 ಪುಸ್ತಕಗಳನ್ನು ಬಿಡುಗಡೆಯ ಜತೆಗೆ ವೈವಿಧ್ಯಮಯ ಹಾಗೂ ಹೊಸ ವಿಚಾರಗಳನ್ನೊಳ ಗೊಂಡ 32ಗೋಷ್ಠಿಗಳು ಗಮನ ಸೆಳೆದವು. ಸಮ್ಮೇಳನದ ಹೊರಗೆ ಹೇಗೆ ಜನಸ್ತೋಮ ತುಂಬಿತ್ತೋ ಅಷ್ಟೇ ಜನಸ್ತೋಮ ಆಸಕ್ತಿಯಿಂದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು

ಪಾರ್ಕಿಂಗ್‌ಗಾಗಿ ಕ್ಯೂಆರ್‌ ಕೋಡ್‌: ಸಮ್ಮೇಳನ ಹಲವು ಪ್ರಥಮಗಳಿಗೂ ನಾಂದಿಯಾಯಿತು. ಇದೇ ಮೊದಲ ಬಾರಿಗೆ ವಾಹನಗಳ ಪಾರ್ಕಿಂಗ್‌ಗಾಗಿ ಕ್ಯೂಆರ್‌ ಕೋಡ್‌ ಬಳಕೆ ಮಾಡಿ ದ್ದರಿಂದ ವಾಹನ ನಿಲುಗಡೆ ವ್ಯವಸ್ಥಿತವಾಗಿ ನಡೆದು, ಯಾರಿಗೂ ಕಿರಿಕಿರಿ ಎನಿಸಲಿಲ್ಲ. ವೇದಿಕೆಯಲ್ಲಿ ಎಲ್ಲರಿಗೂ ಮಾತನಾಡುವ ಸಮಯದ ಮಿತಿಯನ್ನು ಆಮಂತ್ರಣ ಪತ್ರಿಕೆಯಲ್ಲಿಯೇ ಪ್ರಕಟಿಸುವ ಧೈರ್ಯ ಪ್ರದರ್ಶಿಸಿದ್ದು ಇದೇ ಮೊದಲು. ಪ್ರತಿನಿಧಿಗಳ ನೋಂದಣಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿತ್ತು. ಈ ಪ್ರಥಮಗಳ ಹೊಸ ಅಂಶಗಳ ಅನುಷ್ಠಾನದಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳು ಕಂಡು ಬಂದರೂ ಇವು ಕೆಲವು ಸುಧಾರಣೆಗಳೊಂದಿಗೆ ಮುಂದಿನ ಸಮ್ಮೇಳನಗಳಿಗೆ ಹೊಸ ಭಾಷ್ಯ ಬರೆದಂತಾಯಿತು.

ಸಮ್ಮೇಳನದ ಅತಿಥ್ಯ ನೀಡಲು ಮೂಲ ಸೌಕರ್ಯ ಕೊರತೆಯೇ ನೆಪವಾಗಬಾರದು. ಇಚ್ಛಾ ಶಕ್ತಿಯಿದ್ದರೆ ಸಮ್ಮೇಳನದ ಹೆಸರಲ್ಲಿ ಆ ಸ್ಥಳದಲ್ಲಿ ಸೌಲಭ್ಯಗಳ ಸೃಷ್ಟಿಗೆ ಕಾರಣವಾಗ ಬಹುದು ಎಂಬ ಹೊಸ ಸಂದೇಶವನ್ನೂ ಹಾವೇರಿ ಸಮ್ಮೇಳನ ಸಾರಿದೆ. ಇದೇ ಮೊದಲ ಬಾರಿಗೆ ಎಂಬಂತೆ ಹಾವೇರಿಯಲ್ಲಿ ಮೂರು ದಿನಗಳ ಕಾಲ ನಿರಂತರ ಲಕ್ಷಾಂತರ ಜನರನ್ನು ಹಿಡಿದಿಡುವ ರಾಜ್ಯಮಟ್ಟದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥಿತವಾಗಿ ನಡೆದಿದೆ.

ಇದು ಸಮ್ಮೇಳನ ಆತಿಥ್ಯ ಬಯಸುವ ಪುಟ್ಟ ಜಿಲ್ಲೆಗಳಲ್ಲಿ ಹೊಸ ಪ್ರೇರಣೆ ತುಂಬಿದಂತಾಗಿದೆ. ಸಾಹಿತ್ಯ ಸಮ್ಮೇಳನ ಇಷ್ಟೊಂದು ಅಚ್ಚು ಕಟ್ಟಾಗಿ, ಅರ್ಥಪೂರ್ಣವಾಗಿ ನಡೆದಿರುವುದರ ಹಿಂದೆ ಹಾವೇರಿ ಜಿಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಸಾಪ ಅಧ್ಯಕ್ಷ ಡಾ| ಮಹೇಶ ಜೋಶಿ ಅವರ ತವರು ಜಿಲ್ಲೆ ಎಂಬ ಬಲವೂ ಇತ್ತು ಎಂಬುದನ್ನು ಮರೆಯುವಂತಿಲ್ಲ.

ಜನಪದ ಜಾತ್ರೆಯಾದ ನುಡಿ ಜಾತ್ರೆ
ಹಾವೇರಿಯಲ್ಲಿ ನಡೆದ ಅಕ್ಷರ ಜಾತ್ರೆ ಕೇವಲ ಸಾಹಿತ್ಯ-ಸಾಂಸ್ಕೃತಿಕ ಜಾತ್ರೆ ಆಗಿರಲಿಲ್ಲ. ಇದು ಅಕ್ಷರಶಃ ಜನಪದ ಜಾತ್ರೆಯಾಗಿ, ಜನಸಾಮಾನ್ಯರ ಉತ್ಸವವಾಗಿ ಅಚರಿಸಲ್ಪಟ್ಟಿತು. ಮಾತಲ್ಲಿ, ಮನದಲ್ಲಿ ಅಷ್ಠೆà ಏಕೆ, ಇಡೀ ಬದುಕಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡ ಉತ್ತರ ಕರ್ನಾಟಕದ ಅಪ್ಪಟ್ಟ ಗ್ರಾಮೀಣ ಕನ್ನಡಿಗರೇ ಸಮ್ಮೇಳನದಲ್ಲಿ ಅ ಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ, ಸಾಹಿತ್ಯ ಸಮ್ಮೇಳನ ಜನಪದ ಸಮ್ಮೇಳನದ ರಂಗು ಪಡೆದುಕೊಂಡಿದ್ದು ಸಹ ವಿಶೇಷ.

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ. ಇಲ್ಲಿಯ ವ್ಯವಸ್ಥಿತ ಆಯೋಜನೆ ನಿಜಕ್ಕೂ ಮುಂದಿನ ಸಮ್ಮೇಳನಗಳಿಗೆ ಮಾದರಿ ಯಾಗಿದೆ. ಇಲ್ಲಿ ನಡೆದ ಗೋಷ್ಠಿಗಳಲ್ಲಿ ಜನರು ಆಸಕ್ತಿಯಿಂದ ಭಾಗವಹಿಸಿದ್ದು ನೋಡಿದರೆ ಸಮ್ಮೇಳನ ಅರ್ಥಪೂರ್ಣವಾಗಿದೆ ಎಂದೇ ಹೇಳಬೇಕು.
ಶಿವರಾಜ ಪಾಟೀಲ, ವಿಶ್ರಾಂತ ನ್ಯಾಯಮೂರ್ತಿ, ಸುಪ್ರಿಂ ಕೋರ್ಟ್‌

ಮೊದಲು ಸಮ್ಮೇಳನ ಹೇಗೆ ನಡೆಯುತ್ತದೆಯೋ ಎಂಬ ಆತಂಕ ಇತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುವ ಮೂಲಕ ಜಿಲ್ಲೆಯ ಹೆಮ್ಮೆ, ಕೀರ್ತಿ ಹೆಚ್ಚಿಸಿದೆ. ಲಕ್ಷಾಂತರ ಜನರು ಸೇರುವ ಕಾರ್ಯಕ್ರಮ ನಡೆಸಲು ಹಿಂದೇಟು ಹಾಕುತ್ತಿದ್ದ ಜಿಲ್ಲೆಯವರಿಗೆ ಈ ಸಮ್ಮೇಳನದ ಯಶಸ್ಸು ಹೊಸ ಉತ್ಸಾಹ ತುಂಬಿದೆ.
-ಎಂ.ಎಸ್‌. ಕೋರಿಶೆಟ್ಟರ್‌, ಸಾಮಾಜಿಕ ಕಾರ್ಯಕರ್ತರು, ಹಾವೇರಿ

-ಎಚ್‌.ಕೆ.ನಟರಾಜ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ

ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ

Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ

Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ

ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.