ತಂತ್ರಜ್ಞಾನ ಪೂರಕ ಬಳಕೆಯಿಂದ ಜ್ಞಾನ ವೃದ್ಧಿ: ರಾಘವೇಂದ್ರ ಎ.ಜಿ.
Team Udayavani, Jan 19, 2020, 2:35 PM IST
ಹಿರೇಕೆರೂರ: ಯುವ ಜನತೆ ಆಧುನಿಕ ತಂತ್ರಜ್ಞಾನಗಳನ್ನು ಪೂರಕವಾಗಿ ಬಳಕೆ ಮಾಡಿಕೊಂಡು ಜ್ಞಾನ ಸಂಪಾದನೆ ಹೆಚ್ಚಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ರಾಘವೇಂದ್ರ ಎ.ಜಿ. ಹೇಳಿದರು.
ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪದವಿ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ ಹಾವೇರಿ, ಕಾಲೇಜಿನ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ನಡೆದ “ಯುವ ಜನತೆಗೆ ಮೊಬೈಲ್ ಬಳಕೆ ಪೂರಕವೋ, ಮಾರಕವೋ’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತದ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದು ಸಾಮಾಜಿಕ ಜಾಲತಾಣಗಳು ಅಗತ್ಯ ಮಾಹಿತಿಮತ್ತು ವಿವಿಧ ಜ್ಞಾನ ಉಣಬಡಿಸುತ್ತಿವೆ. ಈ ಮೂಲಕ ನಮ್ಮಲ್ಲಿರುವ ಜ್ಞಾನ ವಿನಿಮಯ ಮಾಡಿಕೊಳ್ಳಬೇಕು ಮತ್ತು ಅಗತ್ಯ ಮಾಹಿತಿ ಪಡೆದುಕೊಂಡು ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಬೇಕು. ಮೊಬೈಲ್ ಬಳಕೆ ನಮ್ಮ ಜ್ಞಾನ ವೃದ್ಧಿಗೆ ಆಗಬೇಕೇ ವಿನಃ ಅದರಿಂದ ಅಪಾಯ ತಂದೊಡ್ಡುವಂತಾಗಬಾರದು ಎಂದರು.
ಎನ್ನೆಸ್ಸೆಸ್ ಅಧಿ ಕಾರಿ ಡಾ| ಮಂಜುನಾಥ ತಲ್ಲೂರ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಯುವ ಜನೆತೆಗೆ ಸ್ಫೂರ್ತಿಯಾಗಿವೆ. ಅವರ ಸಂದೇಶಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ನೆಹರೂ ಯುವ ಕೇಂದ್ರದ ವಕ್ತಾರ ಜಮಾಲ್‌ಸಾಬ್ ತಾವರಗಿ, ಸದಸ್ಯ ಹನುಮಂತ ಲೇಖನಕಿ, ಪ್ರಾಧ್ಯಾಪಕರಾದ ಡಾ| ಸಿ.ಎಸ್.ಕಮ್ಮಾರ, ಬಿ.ಸಿ.ತಿಮ್ಮೇನಹಳ್ಳಿ, ಡಾ| ಮಹಾಂತೇಶ ಅಂಚಿ, ಡಾ| ವೈ.ವೈ. ಮರಳಿಹಳ್ಳಿ, ವಿಜಯಲಕ್ಷ್ಮೀ ರೂಳಿ ಸೇರಿದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳುಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಷಯ ಮಂಡಿಸಿದರು. ಚರ್ಚಾ ವಿಷಯದ ಪರವಾಗಿ ರಾಘವೇಂದ್ರ ನಡುವಿನಮನಿ ಪ್ರಥಮ, ಪ್ರಕಾಶ ನಾಯ್ಕದ್ವಿತೀಯ, ವಿರೋಧವಾಗಿ ಭವ್ಯ ಗಿರಿಜಪ್ಪನವರ ಪ್ರಥಮ, ಮಮತಾ ಹಿರೇಮಠ ದ್ವಿತೀಯ ಸ್ಥಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.