ಕವಿವಿ ಕ್ಯಾಂಪಸ್‌ಗೆ ಸೌಕರ್ಯ ಕೊರತೆ
Team Udayavani, Mar 17, 2021, 4:25 PM IST
ಹಾವೇರಿ: ಸ್ಥಳೀಯ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವ ವಿದ್ಯಾಲಯದ ರಾಜೀವ್ ಗಾಂಧಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮೂಲಭೂತ ಸಮಸ್ಯೆ ಎದುರಿಸುತ್ತಿದ್ದು, ವರ್ಷದಿಂದ ವರ್ಷಕ್ಕೆವಿದ್ಯಾರ್ಥಿಗಳ ಪ್ರವೇಶಾತಿ ಕ್ಷೀಣಿಸುತ್ತಿರುವುದುಅಧ್ಯಯನ ಕೇಂದ್ರದ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ 15 ವರ್ಷಗಳ ಹಿಂದೆಯೇ ಇಲ್ಲಿಕೇಂದ್ರ ಆರಂಭವಾಗಿದ್ದರೂ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಒಂದು ಬಾರಿಯೂನಿಗದಿತ ಗುರಿ ಸಾಧಿ ಸಲುಸಾಧ್ಯವಾಗಿಲ್ಲ. ಈ ಕೇಂದ್ರಲ್ಲಿ ಒಟ್ಟು6 ವಿಭಾಗಗಳಲ್ಲಿ ಅಧ್ಯಯನಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ ಸಹಬೇರೆಬೇರೆ ಕಾರಣಗಳಿಂದಾಗಿವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ.
2005ರಲ್ಲಿ ನಗರದ ಜಿ.ಎಚ್. ಕಾಲೇಜಿನಲ್ಲಿ ಕೇಂದ್ರ ಆರಂಭಗೊಂಡಿತ್ತು, ನಂತರದ ಅವ ಧಿಯಲ್ಲಿಇದಕ್ಕಾಗಿಯೇ ಕೆರಿಮತ್ತಿಹಳ್ಳಿ ವ್ಯಾಪ್ತಿಯಲ್ಲಿರುವ 48ಎಕರೆ ಭೂಮಿಯನ್ನು ಈ ಸ್ನಾತಕೋತ್ತರಕೇಂದ್ರಕ್ಕೆ ನೀಡಲಾಗಿದೆ. ಅಲ್ಲಿ ಈಗಾಗಲೇಸ್ವಂತ ಕಟ್ಟಡ ತಲೆ ಎತ್ತಿ ನಿಂತಿದೆ.
ಕೇಂದ್ರದಲ್ಲಿವೇ 6 ವಿಭಾಗಗಳು:ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿಕನ್ನಡ, ಇಂಗ್ಲಿಷ, ಪತ್ರಿಕೋದ್ಯಮ, ಸಮಾಜಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರಮತ್ತು ಸಮಾಜಕಾರ್ಯ ಈವಿಷಯಗಳಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಆದರೆ ಮೂಲಭೂತ ಸೌಲಭ್ಯಗಳಕೊರತೆಯಿಂದ 2014ರಿಂದ ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಮೊದಲು 376 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರೇ ಈ ವರ್ಷ ಅದು 207ಕ್ಕೆ ಇಳಿದಿದೆ.
ಮೂಲ ಸೌಲಭ್ಯಗಳ ಕೊರತೆ: ವಿದ್ಯಾರ್ಥಿಗಳ ಹೇಳಿಕೆ ಪ್ರಕಾರ ಈ ಕೇಂದ್ರದಲ್ಲಿ ಬೋಧನೆಗಾಗಿ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಇದ್ದರೂ ಖಾಯಂಉಪನ್ಯಾಸಕರಿಲ್ಲದಿರುವುದು ಎದ್ದು ಕಾಣುತ್ತಿದೆ. ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಆಗಾಗ ಕೇಳಿ ಬರುತ್ತಿವೆ. ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಳಿ ಸಮರ್ಪಕವಾಗಿ ಇಂಟರ್‌ನೆಟ್ ಸೌಲಭ್ಯ ದೊರಕುತ್ತಿಲ್ಲ. ಕ್ಯಾಂಟಿನ್, ಝರಾಕ್ಸ್ ಅಂಗಡಿ ಎಲ್ಲದಕ್ಕೂ ದೂರ ತೆರಳಬೇಕಾದ ಪರಿಸ್ಥಿತಿ ಇದೆ. ಕಟ್ಟಡದ ನಿರ್ವಹಣೆ ಸರಿಯಾಗಿಲ್ಲ. ಈ ಎಲ್ಲ ಕೊರತೆಗಳು ವಿದ್ಯಾರ್ಥಿಗಳನ್ನು ಕಾಡುವುದರಿಂದ ಇಲ್ಲಿಪ್ರವೇಶ ಪಡೆಯಲು ಯಾವೊಬ್ಬ ವಿದ್ಯಾರ್ಥಿಯೂ ಆಸಕ್ತಿ ತೋರುತ್ತಿಲ್ಲ.
ಸಮರ್ಪಕ ಬಸ್ ಸಂಚಾರ ಬಸ್ ಅಲ್ಲದೇ ಈ ಸ್ನಾತಕೋತ್ತರ ಕೇಂದ್ರಕ್ಕೆ ಸಮರ್ಪಕ ಬಸ್‌ಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಹಾವೇರಿನಗರದಿಂದ ಸುಮಾರು 9 ಕಿ.ಮಿ ದೂರದಲ್ಲಿಈ ಕೇಂದ್ರವಿದ್ದು, ಬೆಳಗ್ಗೆ ಒಂದೆರಡು ಬಸುಗಳುಓಡಾಡುತ್ತವೆ. ಸಂಜೆಯ ಸಮಯಕ್ಕೆ ಬಸುಗಳಓಡಾಟ ಇಲ್ಲದೇ ವಿದ್ಯಾರ್ಥಿಗಳು ಸುಮಾರು 2 ಕಿ.ಮಿದೂರದ ಹೊಸಳ್ಳಿ ಗ್ರಾಮದವರೆಗೆ ನಡೆದುಕೊಂಡುಬಂದು ಬಸನ್ನು ಹಿಡಿಯುವ ಪರಿಸ್ಥಿತಿ ಇಲ್ಲಿನವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗಿದೆ.
16 ಹುದ್ದೆಗಳು ಖಾಲಿ: ಈ ಸ್ನಾತಕೋತ್ತರ ಕೇಂದ್ರದಲ್ಲಿ 2 ಜನ ಮಾತ್ರ ಖಾಯಂ ಉಪನ್ಯಾಸಕರಿದ್ದು, ಐವರುಅತಿಥಿ ಉಪನ್ಯಾಸಕರು ಗುತ್ತಿಗೆ ಆಧಾರದ ಮೇಲೆ13 ಜನ ಬೋಧನಾ ಸಹಾಯಕರಿದ್ದಾರೆ. ಇಂದಿಗೂ16 ಹುದ್ದೆಗಳು ಖಾಲಿ ಇವೆ. ನಿಯಮಾವಳಿಗಳ ಪ್ರಕಾರ ಇಲ್ಲಿರುವ 6 ವಿಭಾಗಗಳಿಗೆ 36 ಉಪನ್ಯಾಸಕರಿರಬೇಕಾಗಿತ್ತು. ಈ ಕೊರತೆ ಎದ್ದುಕಾಣುತ್ತದೆ. ಹಾವೇರಿ ಜಿಲ್ಲೆಯಲ್ಲಿ 18ಕ್ಕೂ ಹೆಚ್ಚು ಪದವಿ ಕಾಲೇಜುಗಳಿವೆ. ಆದರೆ ಈ ಕೇಂದ್ರದತ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಏಕೆ ಆಸಕ್ತಿತೋರುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಹುಬ್ಬಳ್ಳಿ, ಧಾರವಾಡ ನಗರಗಳತ್ತ ಮನಸ್ಸುಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ಕೊರತೆ ಎದ್ದು ಕಾಣುತ್ತವೆ.
ಕರ್ನಾಟಕ ವಿಶ್ವ ವಿದ್ಯಾಲಯದ ಮುಖ್ಯ ಕ್ಯಾಂಪಸ್ ಮಾದರಿಯಲ್ಲಿವಿವಿ ವ್ಯಾಪ್ತಿಯ ಹಾವೇರಿ ಸ್ನಾತಕೋತ್ತರ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಹೊಂದಲಾಗಿದೆ. ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಸ್ನಾತಕೋತ್ತರಗಳ ಅಭಿವೃದ್ಧಿಗೆಆದ್ಯತೆ ನೀಡಲಾಗುವುದು. ಹಾವೇರಿಯ ಸ್ನಾತಕೋತ್ತರ ಕೇಂದ್ರದ ಶೈಕ್ಷಣಿಕ ಬೆಳವಣಿಗೆಹಾಗೂ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರವೇಇಲ್ಲಿನ ಸಂಸದರು, ಶಾಸಕರುಗಳನ್ನು ಆಹ್ವಾನಿಸಿ ಪ್ರತ್ಯೇಕ ಸಭೆ ನಡೆಸಲಾಗುವುದು. – ಪ್ರೊ| ಕೆ.ಟಿ. ಗುಡಸಿ, ಕುಲಪತಿ, ಕವಿವಿ ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.