ಜನಪರ ಯೋಜನೆಗಳ ಅರಿವು ಮೂಡಿಸಿ: ಮುಜಾವರ್
Team Udayavani, Mar 14, 2021, 3:22 PM IST
ಬ್ಯಾಡಗಿ: ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಅಭಿವೃದ್ಧಿ ಮತ್ತು ಹಿತರಕ್ಷಣೆಗೆ ಸರ್ಕಾರಗಳುಹಲವು ಕಾನೂನು ಜಾರಿಗೊಳಿಸಿವೆ. ಆದರೆ,ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇಸದರಿ ಸಮುದಾಯಗಳು ಸಮಾಜದಮುಖ್ಯ ವಾಹಿನಿಯಿಂದ ದೂರ ಉಳಿದಿವೆಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ್ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಹೂಗಾರಗಲ್ಲಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಮತ್ತು ಹಕ್ಕಬುಕ್ಕ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ಬುಡಕಟ್ಟು ಜನಾಂಗದವರಿಗಾಗಿಆಯೋಜಿಸಿದ್ದ ಕಾನೂನು ಅರಿವು-ನೆರವುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಜನಪರ ಕಾರ್ಯಕ್ರಮಗಳನ್ನುಜಾರಿಗೊಳಿಸುವುದರ ಜೊತೆಗೆ ಅಂತಹಯೋಜನೆಗಳ ಬಗ್ಗೆ ತಳಮಟ್ಟದಲ್ಲಿರುವಸಮುದಾಯದ ಜನರಿಗೆ ಅರಿವು ಮೂಡಿಸುವುದೂ ಅಷ್ಟೇ ಮುಖ್ಯವಾಗಿದೆ ಎಂದರು.
ನ್ಯಾಯವಾದಿಗಳ ಸಂಘದ ತಾಲೂಕುಅಧ್ಯಕ್ಷ ಎನ್.ಎಸ್.ಬಟ್ಟಲಕಟ್ಟಿಮಾತನಾಡಿ, ದೇಶದ ಕಾನೂನುಗಳು ನಮ್ಮರಕ್ಷಣೆಗಾಗಿಯೇ ಇದ್ದು, ಕಾನೂನುಗಳ ಬಗ್ಗೆಅರಿವು ಹೊಂದಿದಲ್ಲಿ ಅನ್ಯಾಯದ ವಿರುದ್ಧಪ್ರತಿಭಟಿಸುವ ಶಕ್ತಿ ಸಿಗಲಿದೆ ಎಂದರು.ನ್ಯಾಯವಾದಿ ಎಂ.ಎ.ಅಗಸರ,ಬುಡಕಟ್ಟು ಜನಾಂಗದವರಿಗಾಗಿ ಇರುವಕಾನೂನು ಸೇವೆಗಳ ಕುರಿತು ಉಪನ್ಯಾಸ ನೀಡಿದರು.
ಸಹಾಯಕ ಸರಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ತಹಶೀಲ್ದಾರ್‌ರವಿಕುಮಾರ ಕೊರವರ, ಸಿಪಿಐ ಪಿ.ಎಸ್. ಬಸವರಾಜ, ಪುರಸಭೆ ಮುಖ್ಯಾಧಿ ಕಾರಿವಿ.ಎಂ.ಪೂಜಾರ, ಸಮಾಜ ಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಎಚ್.ಟಿ.ಲಮಾಣಿ,ನ್ಯಾಯವಾದಿ, ಭಾರತಿ ಕುಲಕರ್ಣಿ, ಲಕ್ಷ್ಮೀಗುಗ್ಗರಿ, ಶಿವರಾಜ ಅಂಗಡಿ, ಎಸ್.ಎಚ್.ಗುಂಡಪ್ಪನವರ, ಎಸ್.ಎಚ್.ಕಾಟೇನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
By Election: ಒಂದುವರೆ ವರ್ಷದಿಂದ ಕಾಂಗ್ರೆಸ್ ಸರಕಾರ 1 ಕಿ.ಮೀ.ರಸ್ತೆ ಮಾಡಿಲ್ಲ: ಬಿಎಸ್‌ವೈ
By Election: ದೇಶವನ್ನೇ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡ್ತೇವೆ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.