![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 24, 2022, 6:27 PM IST
ಬ್ಯಾಡಗಿ: ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಬಹಳಷ್ಟು ಕಡಿಮೆ ಪ್ರಾತಿನಿಧ್ಯ ಹೊಂದಿದ್ದು, ಇಂದಿಗೂ ಅವರನ್ನು ಎರಡನೇ ಹಂತದ ವಿಜ್ಞಾನಿಗಳಂತೆ ಪರಿಭಾವಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿನ ಲಿಂಗ ತಾರತಮ್ಯ ಕೊನೆಗೊಳಿಸುವ ನಿಟ್ಟಿನಲ್ಲಿ ಮಹಿಳಾ ವಿಜ್ಞಾನಿಗಳು ಹೋರಾಟಗಾರ್ತಿಯರಂತೆ
(ಗ್ಲಾಡಿಯೇಟರ್)ಕೆಲಸ ನಿರ್ವಹಿಸಬೇಕಾಗಿದೆ ಎಂದು ಇಸ್ರೋ ವಿಜ್ಞಾನಿ ಅಂಜಲಿ ವಂಶಿ ಅಭಿಪ್ರಾಯಪಟ್ಟರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಣ್ಣಾ ಮಣಿ, ಅನ್ನಪೂರ್ಣಿ ಸುಬ್ರಮಣ್ಯಂ, ರಮಣ್ ಪರಿಮಳ, ರತ್ನಶ್ರೀ, ರೋಹಿಣಿ ಗೋಡೊಲೆ, ಡಾ|ವಿ.ಶಾಂತಾ, ಸೌಮ್ಯಾ ಸ್ವಾಮಿನಾಥನ್, ಸುಜಾತಾ ರಾಮ ದೊರೈ ಹೀಗೆ ವಿಜ್ಞಾನದಲ್ಲಿ ಯಶಸ್ವಿ ಭಾರತೀಯ ಮಹಿಳೆಯರ ಹೆಸರು ಬೇಕಾದಷ್ಟಿದೆ. ಆದರೆ, ಅವರ್ಯಾರೂ ಮುಖ್ಯವಾಹಿನಿಗೆ ಬರದಿರುವುದು ದುರಂತದ ಸಂಗತಿ ಎಂದರು.
ಇಸ್ರೋ ಉಪನಿರ್ದೇಶಕಿ ಕಮಲಾ ರಾಜೇಶ ಮಾತನಾಡಿ, ನಾಗರಿಕತೆ ಮುಂದುವರೆಯಬೇಕಾದಲ್ಲಿ ವಿಜ್ಞಾನ ಅತ್ಯವಶ್ಯಕ. ನಿತ್ಯವೂ ಹೊಸ ಸಂಶೋಧನೆಗಳು
ಮತ್ತು ಅವುಗಳ ಅನುಷ್ಠಾನ ನಿರಂತರವಾಗಿ ನಡೆಯಬೇಕಾಗಿದೆ. ವಿಜ್ಞಾನದ ಜೊತೆಗೆ ಮನುಷ್ಯ ಅಭಿವೃದ್ಧಿಯಾಗಬೇಕಾದ ಅನಿವಾರ್ಯತೆಯಿದೆ ಎಂದರು.
ಸಿಂಧು ಶೈಲೇಶ ಮಾತನಾಡಿ, ಮಕ್ಕಳು ಮೌಢ್ಯಾಚರಣೆ, ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಟ್ಟು ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಬೇಕಾಗಿದೆ. ದೇಶ ಮತ್ತು ಸಮಾಜದ ಅಭಿವೃದ್ಧಿಗೆ ವಿಜ್ಞಾನದ ವಿಕಾಸದಿಂದ ಮಾತ್ರ ಸಾಧ್ಯವಿದೆ. ಈ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅಥವಾ ಶಾಲಾ ಹಂತದಲ್ಲಿಯೇ ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಡಾ|ಅನ್ನಪೂರ್ಣ ಭಟ್ ಪ್ರಸ್ತುತ ದಿನಗಳಲ್ಲಿ ವೈರ್ಮಲ್ಯಕ್ಕಾಗಿ ಸರ್ಕಾರಗಳು ಸಾಕಷ್ಟು ಪ್ರಯೋಗ ಮಾಡುತ್ತಾ ಬಂದಿವೆ. ಮಹಿಳೆಯರು ಅನುಭವಿಸುತ್ತಿದ್ದ ನೋವನ್ನು ಅರಿತು ಬಯಲು ಶೌಚ ಮುಕ್ತ ಗ್ರಾಮ ಘೋಷಣೆ, ಬಳಿಕ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮೂಲಕ ಸ್ವಾಸ್ಥ್ಯಸಹಿತ ನೀರು ಸೇರಿದಂತೆ ಋತುಸ್ರಾವದ ವೇಳೆ ಅವೈಜ್ಞಾನಿಕ ನಿರ್ವಹಣೆ ಕುರಿತು ಮಾಹಿತಿ ನೀಡುವಂತಹ ಕಾರ್ಯಕ್ಕೆ ಮುಂದಾಗಿದ್ದು, ಇವೆಲ್ಲವುಗಳ ಪಾಲನೆ ಮೂಲಕ ನಮ್ಮ
ಗ್ರಾಮ ನಮ್ಮ ಸ್ವತ್ಛತೆ ಎಂಬರ್ಥದಲ್ಲಿ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
ಮುಖ್ಯಶಿಕ್ಷಕ ಶ್ರೀಧರ ಹಣಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಯಾತ್ಯಾಯನಿ ರವೀಂದ್ರ ದೇವರಕಟ್ಟೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಂಕರ ಕಿಚಡಿ, ಸಹಶಿಕ್ಷಕರಾದ ವೈ.ಶಾಂತಮ್ಮ, ಸೌಭಾಗ್ಯ ಕೊಣತಿ, ಶಂಕರ ಲಮಾಣಿ, ಎಸ್.ಹರೀಶ್, ಸುಪ್ರೀತಾ ಹೂಲಿಕಟ್ಟಿ, ಪ್ರಕಾಶ ಕೊರಮರ, ಬಸನಗೌಡ ಪಾಟೀಲ, ಚನ್ನಮ್ಮ ಎರೇಶೀಮಿ, ಅಂಬವ್ವ ಪವಾರ, ಎ.ಎ.ರೂಪಾ, ವೀರಮ್ಮ ಮಠದ, ಮಂಗಳಾ ಕಂಬಿ, ಮೈತ್ರಾ ಹಾಲನಗೌಡ್ರ ಇನ್ನಿತರರಿದ್ದರು. ಮಾಲತೇಶ್
ಕೊರಚರ ಸ್ವಾಗತಿಸಿ, ಅಜ್ಜಪ್ಪ ತಳಮನಿ ನಿರೂಪಿಸಿ, ಮಹೇಶ್ವರ ಕಾರಗಿ ವಂದಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.