ಸಾಂಸ್ಕೃತಿಕ ಹಬ್ಬ ನಾಡಿನಾದ್ಯಂತ ಪಸರಿಸಲಿ
Team Udayavani, Aug 30, 2019, 11:41 AM IST
ಹಿರೇಕೆರೂರ: ಬಿ.ಆರ್.ತಂಬಾಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ವಲಯ ಯುವಜನೋತ್ಸವದ ಕಾರ್ಯಕ್ರಮಗಳ ಭಿತ್ತಿಚಿತ್ರವನ್ನು ಇಫ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ| ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು.
ಹಿರೇಕೆರೂರ: ಇಲ್ಲಿನ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆಯುವ ಪ್ರಸಕ್ತ ಸಾಲಿನ ವಲಯ ಯುವಜನೋತ್ಸವದ ಕಾರ್ಯಕ್ರಮಗಳ ಭಿತ್ತಿಪತ್ರವನ್ನು ಇಫ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ| ನಾರಾಯಣಸ್ವಾಮಿ ಸಿ. ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ನಾಡಿನ ಸಂಸ್ಕೃತಿಯ ಕಲೆ ಬಿಂಬಿಸುವ ಈ ಸಾಂಸ್ಕೃತಿಕ ಹಬ್ಬ ನಮ್ಮ ನಾಡಿನ ತುಂಬ ಪಸರಿಸಲಿ, ಇಂದಿನ ಆಧುನಿಕ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮದಿಂದ ಮಾಡುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ. ಆದ್ದರಿಂದ ಸಾಂಸ್ಕೃತಿಕ ಕಲೆಗಳನ್ನು ಜೀವಂತಗೊಳಿಸಲು ಇಂತಹ ಅಭೂತಪೂರ್ವ ಕಾರ್ಯಕ್ರಮಗಳು ಅವಶ್ಯವಾಗಿವೆ. ಈ ಕಾರ್ಯಕ್ರಮದಲ್ಲಿ ಏರ್ಪಡುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಫ್ಕೋ ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯದ ಯುವ ಜನೋತ್ಸವವು ನಾಡಿನ ಭವ್ಯ ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದೆ. ಆ ಹಬ್ಬವು ಸಾಂಸ್ಕೃತಿಕೆ ಶ್ರೀಮಂತಿಕೆಯನ್ನು ಅಚ್ಚಳಿಯದೇ ಉಳಿಸಿಕೊಂಡು ಇಂದಿನ ಯುವ ಪೀಳಿಗೆಯ ಮುಖಾಂತರ ಮುಂದಿನ ತಲೆಮಾರಿನ ವರೆಗೂ ಕೊಂಡೊಯ್ಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಾಚಾರ್ಯ ಡಾ| ಎಸ್.ಬಿ.ಚನ್ನಗೌಡ್ರ ಮಾತನಾಡಿ, ಯುವಜನೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನೆರವೇರಲಿದೆ. ಈಗಾಗಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 40 ಕಾಲೇಜುಗಳು 27 ಸಾಂಸ್ಕೃತಿಕ ವಿಭಾಗಗಳಾದ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆಗಳಿಗೆ ಸಂಬಂಸಿದ ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಸಮೂಹ ಗೀತೆ, ಜಾನಪದ ಬುಡಕಟ್ಟು ನೃತ್ಯ, ರಸಪ್ರಶ್ನೆ, ಸಿದ್ಧಬಾಷಣ, ಮಣ್ಣಿನ ಕಲಾಕೃತಿಗಳ ರಚನೆ, ವ್ಯಂಗ್ಯ ಚಿತ್ರಗಾರಿಕೆ, ಈ ಎಲ್ಲ ವೈವಿಧ್ಯಮಯ ಸಾಂಸ್ಕೃತಿಕ ವಿಭಾಗಗಳಲ್ಲಿ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಚಾರ್ಯರಿಂದ ದೃಢೀಕರಿಸಿಕೊಂಡು ಸೆ.26, 27 ರಂದು ನಡೆಯುವ ಈ ಸಾಂಸ್ಕೃತಿಕ ಹಬ್ಬಕ್ಕೆ ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ, ಜಿಪಂ ಸದಸ್ಯರಾದ ಪ್ರಕಾಶ ಬನ್ನಿಕೋಡ, ಮಾದೇವಕ್ಕ ಗೊಪಕ್ಕಳ್ಳಿ, ಎನ್.ಎಂ.ಈಟೇರ, ಸಂಸ್ಥೆಯ ನಿರ್ದೇಶಕ ಎಂ.ವಿ.ಹೊಂಬರಡಿ, ಯು.ಯು. ಬಣಕಾರ, ಏಕೇಶ ಬಣಕಾರ, ಆನಂದಪ್ಪ ಹಾದಿಮನಿ, ಎಲ್.ಬಿ.ತೆಂಬದ, ಸಿದ್ದನಗೌಡ ನರೇಗೌಡ್ರ, ಆನಂದಪ್ಪ ಹಾದಿಮನಿ, ದುರಗಪ್ಪ ನೀರಲಗಿ, ರಮೇಶ ಮಡಿವಾಳರ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.