ಪ್ರಕರಣಗಳ ವಿಲೇವಾರಿ ತ್ವರಿತವಾಗಲಿ
Team Udayavani, Dec 22, 2019, 2:26 PM IST
ಹಾವೇರಿ : ಪೋಡಿ ಪ್ರಕರಣ, ಹದ್ದು ಬಸ್ತು ಪ್ರಕರಣ, ಇ ಸ್ವತ್ತು, ಪಹಣಿ ಪರಿಷ್ಕರಣೆ, ಪಹಣಿ ತಿದ್ದುಪಡಿ ಸೇರಿದಂತೆ ರೈತರಿಗೆ ಅನುಕೂಲವಾಗುವ ಕಂದಾಯ ಇಲಾಖೆ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜಕುಮಾರ್ ಮೀನಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅವರು ಈ ಸೂಚನೆ ನೀಡಿದರು. ಪಹಣಿಗಳ ತಿದ್ದುಪಡಿ ಕಾಲಕಾಲಕ್ಕೆ ನಡೆಯಬೇಕು. ಪಹಣಿಯಲ್ಲಿ ದಾಖಲಾದ ಹಿಡುವಳಿಯ ಹಕ್ಕುದಾರಿಕೆ ವಿಸ್ತೀರ್ಣ ಹಾಗೂ ವಾಸ್ತವದಲ್ಲಿ ಇರುವ ಹಿಡುವಳಿ ಕುರಿತಂತೆ ಪರಿಶೀಲನೆ ನಡೆಸಿ ದಾಖಲಿಸಬೇಕು.
ಇ-ಸ್ವತ್ತು, ಪೋಡಿ ಪ್ರಕರಣ, ಮೋಜಣಿ ಪ್ರಕರಣ, ಆರ್‌ಟಿಸಿ ಪರಿಷ್ಕರಣೆ, ಸಕಾಲ ಪ್ರಕರಣಗಳು ಇಳಿಮುಖವಾಗಬೇಕು. ತ್ವರಿತ ವಿಲೇವಾರಿ ನಡೆಸಬೇಕು. ಮುಂದಿನ ಸಭೆಯಲ್ಲಿ ಎಲ್ಲ ಪ್ರಕರಣಗಳು ಬಾಕಿ ಇರಬಾರದು ಎಂದು ಸೂಚಿಸಿದರು. ಕಂದಾಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಕಾಲಮಿತಿಯೊಳಗೆ ಪ್ರಕರಣಗಳು ವಿಲೇವಾರಿ ಮಾಡಬೇಕು. ರೈತರ ಕೆಲಸ ಮಾಡುವ ಮಾತೃ ಕಾರ್ಯ ಕಂದಾಯ ಇಲಾಖೆಯ ಕೆಲಸ. ಆದ್ಯತೆ ಮೇರೆಗೆ ರೈತರ ಕೆಲಸ ಮಾಡಬೇಕು ಎಂದರು.
ತಹಶೀಲ್ದಾರ, ಉಪವಿಭಾಗಾಧಿಕಾರಿಗಳ ಕೋರ್ಟ್, ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ ಭೂ ಒತ್ತುವರಿ ತೆರವು, ಕೆರೆಗಳ ಒತ್ತುವರಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಬಹುಪಾಲು ಗ್ರಾಮದೊಳಗಿರುವ ಕೆರೆಗಳಲ್ಲಿ ವಸತಿಗಳನ್ನು ನಿರ್ಮಿಸಿಕೊಂಡು ಒತ್ತುವರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕ್ಫ್ ಭೂಮಿ ಕುರಿತಂತೆ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ವಕ್ಫ್ಆ ಸ್ತಿಗಳನ್ನು ಸರ್ವೇ ಮಾಡಲಾಗಿದೆ ಎಂದು ಅ ಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಯಾವುದೇ ಕಾರಣಕ್ಕೆ ವಕ್ಫ್ ಆಸ್ತಿಗಳನ್ನು ಮಾರಾಟ ಮಾಡುವಂತಿಲ್ಲ. ನೋಂದಣಿ ಕಚೇರಿಯಲ್ಲಿ ಈ ಆಸ್ತಿಗಳನ್ನು ನೋಂದಾಯಿಸುವಂತಿಲ್ಲ. ಈ ಕುರಿತಂತೆ ಗಮನಹರಿಸುವಂತೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿದರು.
ಇ- ಆಡಳಿತ: ಎಲ್ಲ ಇಲಾಖೆಗಳು ಇ ಆಡಳಿತವನ್ನು ಆರಂಭಿಸಬೇಕು. ಆನ್‌ಲೈನ್ ಮೂಲಕವೇ ಅರ್ಜಿ ವಿಲೇವಾರಿ ಕೈಗೊಳ್ಳಬೇಕು. ಸರ್ಕಾರ ಈ ಕುರಿತಂತೆ ಬಹಳ ಆಸಕ್ತಿ ಹೊಂದಿದೆ. ಮೊದಲ ಹಂತದಲ್ಲಿ ಕನಿಷ್ಠ ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಅರಣ್ಯ ಇಲಾಖಾ ಕಚೇರಿ ಇ – ಆಡಳಿತವನ್ನು ಆರಂಭಿಸಬೇಕು ಎಂದು ಸೂಚಿಸಿದರು. ಭೂಮಿ ದರಗಳನ್ನು ಪರಿಷ್ಕರಿಸುವಾಗ ಮಾರುಕಟ್ಟೆಯ ದರಕ್ಕೆ ಹತ್ತಿರವಿರಲಿ. ಮಾರುಕಟ್ಟೆ ದರಕ್ಕೂ ನೋಂದಣಿಯ ದರಕ್ಕೂ ಬಹಳ ವ್ಯತ್ಯಾಸವಿದೆ. ಈ ವ್ಯತ್ಯಾಸದ ಅಂತರವನ್ನು ಕಡಿಮೆ ಮಾಡಿ ಭೂಮಿಯ ದರವನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರೈತರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಭೂಸ್ವಾಧೀನಗಳ ಸಂದರ್ಭದಲ್ಲಿ ರೈತರಿಂದ ಹೆಚ್ಚುವರಿ ದರ ನಿಗ ಮಾಡುವಂತೆ ಬೇಡಿಕೆಗಳು ಬರುತ್ತಿವೆ. ಸರ್ಕಾರಿ ನೋಂದಣಿ ದರಕ್ಕೂ ವಾಸ್ತವವಾಗಿ ಖಾಸಗಿಯಾಗಿ ಮಾರಾಟ ದರಕ್ಕೂ ಬಹಳಷ್ಟು ಅಂತವಿರುವುದನ್ನು ತಗ್ಗಿಸಬೇಕು.
ಈ ಕುರಿತಂತೆ ಉಪ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು ಚರ್ಚಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ| ಎನ್.ತಿಪ್ಪೇಸ್ವಾಮಿ, ವಿವಿಧ ತಹಶೀಲ್ದಾರಗಳು, ಇತರ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.