ಮಕ್ಕಳಲ್ಲಿ ಕೌಶಲ್ಯ ಹೆಚ್ಚಿಸುವ ಕೆಲಸವಾಗಲಿ
Team Udayavani, Nov 18, 2018, 4:18 PM IST
ಹಾವೇರಿ: ಜಗತ್ತಿನಲ್ಲಿ ಕುಶಲತೆ ಮಹತ್ವ ಪಡೆದುಕೊಂಡಿದ್ದು ಇಂದಿನ ಮಕ್ಕಳಲ್ಲಿ ಕೌಶಲ್ಯತೆ ಹೆಚ್ಚಿಸುವ ಕೆಲಸ ಅವಶ್ಯವಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನ ನಡೆಯಬೇಕು. ಶಿಕ್ಷಕರು ಮುತುವರ್ಜಿ ವಹಿಸಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ವೃತ್ತಿ ಕಲಿಕೋತ್ಸವ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು. ಮಕ್ಕಳ ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು 5ನೇ ತರಗತಿಯಿಂದ ಕಾಲೇಜ್ ಹಂತದ ವರೆಗೂ ಕಲಿಕೋತ್ಸವ ನಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದರು. ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ವೃತ್ತಿ ಶಿಕ್ಷಣ ಶಿಕ್ಷಕ ಮಂಜಪ್ಪ ಆರ್. ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಡಯಟ್ ನಿರ್ದೇಶಕ ಬಸವಲಿಂಗಪ್ಪ ಜಿ.ಎಂ., ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಶಿವಣ್ಣಸೇರಿದಂತೆ ವೃತ್ತಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಇದ್ದರು.
ಗಮನ ಸೆಳೆದ ಪ್ರದರ್ಶನ
ಕೃಷಿ ಉಪಕರಣಗಳು, ಔಷಧ ಸಸ್ಯಗಳು, ಏತ ನೀರಾವರಿ, ಮನೆ ಬಳಕೆ ವಸ್ತುಗಳು, ಗುಡಿ ಕೈಗಾರಿಕೆಗಳು, ಮನೆಮದ್ದು, ತೋಟಗಾರಿಕೆ, ಪಶು ಸಂಗೋಪನೆ, ಆರೋಗ್ಯ, ಹೊಲಿಗೆಗೆ ಸಂಬಂಧಿಸಿದ ವಸ್ತುಗಳು, ಗುಡಿ ಕೈಗಾರಿಕೆಗಳ ವಸ್ತುಗಳು ಪ್ರದರ್ಶನದಲ್ಲಿ ಗಮನ ಸೆಳೆದರೆ, ಬಟ್ಟೆ ಸಾಬೂನು, ವ್ಯಾಸ್ಲೆನ್, ಪೇನಾºಮ್, ಬಟ್ಟೆ ಪೌಡರ್, ಅಲಂಕಾರಿಕ ಬಟ್ಟೆಗಳು, ಶಾಲು, ಹೊದಿಕೆ, ಅಂಗಿ, ಪ್ಯಾಂಟ್, ಟವೆಲ್, ಸೀರೆ, ಕುಪ್ಪಸ, ಗೋಶಾಲೆ, ನರ್ಸರಿ, ಎರೆಗೊಬ್ಬರ, ಎರೆ ಜಲ, ಸಿರಿಧಾನ್ಯ, ಬೀಜಗಳ ಬಿತ್ತನೆ, ಗೊಬ್ಬರ, ಜೈವಿಕ ಇಂಧನ, ಕೈಯಲ್ಲಿ ಹೆಣೆದ ಅಲಂಕಾರಿಕ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.