ಆಣೂರು ಕೆರೆಗೆ ನೀರು ತುಂಬಿಸಲು ಪತ್ರ ಚಳವಳಿ
Team Udayavani, Jun 24, 2019, 10:14 AM IST
ಬ್ಯಾಡಗಿ: ರೈತ ಸಂಘ ಮಹಿಳಾ ಘಟಕದ ಸದಸ್ಯರು ಆಣೂರು ಕರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಪತ್ರ ಚಳವಳಿ ನಡೆಸಿದರು.
ಬ್ಯಾಡಗಿ: ಆಣೂರು ಕೆರೆಗೆ ನೀರು ತುಂಬಿಸುವ ಮೂಲಕ ತಾಲೂಕಿನ 36 ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ರೈತ ಸಂಘದ ಮಹಿಳಾ ಘಟಕಗಳು ಪತ್ರ ಚಳವಳಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರಿಗೆ ಪತ್ರ ಬರೆದಿರುವ ಅವರು, ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ 30 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಆದರೆ, ಈ ವರೆಗೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದ್ದು, ಅದರ ಮುಂದಿನ ಭಾಗವಾಗಿ ಪತ್ರ ಚಳವಳಿ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಸದಸ್ಯರು, ಈ ಯೋಜನೆಗೆ ಈಗಾಗಲೇ 212 ಕೋಟಿ ರೂ. ಮಂಜೂರಾಗಿರುವುದಾಗಿ ಉಸ್ತುವಾರಿ ಸಚಿವರು ಸುಳ್ಳು ಹೇಳುತ್ತಿದ್ದಾರೆ. ವಾಸ್ತವ ಮರೆಮಾಚುವ ಕೆಲಸ ಯಾರಿಂದಲೂ ಆಗುವುದು ಬೇಡ. ಈ ವರೆಗೂ ಯುಟಿಪಿ ಅಧಿಕಾರಿಗಳಿಂದ 0.923 ಟಿಎಂಸಿ ನೀರು ಬಳಕೆ ಮಾಡುವ ಕುರಿತು ಅನುಮತಿ ಕೇಳಲಾಗಿದೆ. ನದಿ ನೀರು ಬಳಕೆ ಮತ್ತು ಹಂಚಿಕೆ ನಿಯಮಾವಳಿಗಳ ಪ್ರಕಾರ ಯಾವ ತಿಂಗಳಿನಲ್ಲಿ ನೀರು ಬಳಸಬಹುದು ಮತ್ತು ಎಷ್ಟು ಅಡಿ ನೀರು ಎತ್ತರ ಬಂದ ಮೇಲೆ ಬಳಕೆ ಮಾಡಬೇಕು ಹೀಗೆ ಹತ್ತು ಹಲವು ಪ್ರಶ್ನೆ ಕೇಳಿದರೆ ಜಿಲ್ಲಾಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಸಮರ್ಪಕ ಉತ್ತರ ನೀಡಲಿಲ್ಲ. ಬದಲಾಗಿ ನಿಮ್ಮವನಾಗಿ ನನ್ನ ಪ್ರಯತ್ನವನ್ನು ಮಾಡುವೆ ಎಂದಷ್ಟೇ ಹೇಳಿದರು.
ರೈತ ಸಂಘದ ಮುಖಂಡರಾದ ಫರೀದಾಬಾನು ನದೀಮುಲ್ಲಾ ಮಾತನಾಡಿ, ಕುಡಿಯುವ ನೀರಿಗಾಗಿ ಇಡೀ ಕುಟುಂಬ ಮೈಲುಗಟ್ಟಲೇ ಅಲೆದಾಡುವಂತಾಗಿದೆ. ನೀರಿಲ್ಲದೇ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ತಮ್ಮ ನಿರ್ದೇಶನದಂತೆ 600 ಅಡಿಗಿಂತ ಹೆಚ್ಚು ಕೊರೆಯುವಂತಿಲ್ಲ. ಆದರೆ, ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ನಮ್ಮ ಅಳಲನ್ನು ಯಾರ ಬಳಿ ತೋಡಿಕೊಳ್ಳಬೇಕು? ನಾವ್ಯಾರು ಸಾಲಮನ್ನಾ ಕೇಳುತ್ತಿಲ್ಲ ಮತ್ತು ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿಗಳೂ ಅಲ್ಲ. ಆದರೆ ಒಂದು ವೇಳೆ ಏನಾದರೂ ಆತ್ಮಹತ್ಯೆಯಂತಾದರೇ ಅದು ಕುಡಿಯುವ ನೀರಿಗಾಗಿಯೇ ಎಂದು ಎಚ್ಚರಿಸಿದರು.
ನ್ಯಾಯವಾದಿಗಳ ಸಂಘದ ಪ್ರಕಾಶ ಬನ್ನಿಹಟ್ಟಿ ಸೇರಿದಂತೆ ಇನ್ನಿತರ ಸದಸ್ಯರು ರೈತ ಸಂಘ ಮಹಿಳಾ ಘಟಕದ ಸದಸ್ಯರಾದ ರೇಣುಕಾ ಉಪ್ಪಿನವರ ಚೌಡವ್ವ ಚಿನ್ನಮ್ಮನವರ, ಚಂದ್ರಕಲಾ ರಾವಳ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.