ಬದುಕೇ ಮುಳುಗೋಯ್ತು


Team Udayavani, Aug 11, 2019, 12:32 PM IST

haveri-tdy-01

ಹಾವೇರಿ: ಮನೆಯೊಳಗೆ ನೀರು. ಮನೆ ಸುತ್ತಲೂ ನೀರು. ಓಣಿಯಲ್ಲಿಯೂ ನೀರು. ಊರೊಳಗೆ, ಊರ ಹೊರಗೆ ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ನೀರೇ ನೀರು. ಊರೊಳಗೆ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಪ್ಪ, ಹಗ್ಗದ ಸಹಾಯದಲ್ಲಿಯೇ ಸಂಚರಿಸುವ ಸ್ಥಿತಿ

-ಇದು ಅಕ್ಷರಶಃ ನೀರಲ್ಲಿ ಮುಳುಗಿ ನಡುಗಡ್ಡೆಯಂತಾಗಿರುವ ತಾಲೂಕಿನ ಕೋಣನತಂಬಗಿ ಗ್ರಾಮದ ದುಸ್ಥಿತಿ.

ಊರಿನ ಸಂತ್ರಸ್ತರು, ಜಾನುವಾರುಗಳ ಸಹಿತ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿದ್ದಾರೆ. ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ನದಿಯಲ್ಲಿನ ರಭಸ ಮಾತ್ರ ಕಡಿಮೆಯಾಗಿರಲಿಲ್ಲ. ನದಿ ಒಂದೇ ಸಮನೆ ತುಂಬಿ ಹರಿಯುವ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತಲೇ ಇದೆ.

ಊರ ಹೊಲವೆಲ್ಲ ದಾಟಿ ಗ್ರಾಮಕ್ಕೆ ನುಗ್ಗಿರುವ ನೀರು ನಿಂತಲ್ಲೇ ನಿಂತಿದ್ದು ಮನೆಗಳು, ಕಟ್ಟಡಗಳ ಗೋಡೆಗಳು ನೀರಿಗೆ ನೆನೆದು ಒಂದೊಂದಾಗಿ ಕುಸಿಯುತ್ತಿವೆ. ಇದೊಂದೇ ಗ್ರಾಮದಲ್ಲಿ 170ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನೀರು ಆವರಿಸಿರುವ ಮನೆಯೊಳಗೆ ಜನರು ಹೋಗಲು ಬೆದರುತ್ತಿದ್ದಾರೆ. ಒಂದಿಷ್ಟು ಜನ ಶನಿವಾರ ಧೈರ್ಯ ಮಾಡಿ ಮನೆಯೊಳಗೆ ಪ್ರವೇಶಿಸಿ ನೀರಿನಿಂದ ಹಾಳಾಗಬಹುದಾದ ಒಂದಿಷ್ಟು ಸರಕು, ಸರಂಜಾಮುಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳದಲ್ಲಿರುವ ಪರಿಚಯಸ್ಥರು, ಸಂಬಂಧಿಕರ ಮನೆಗೆ ಸ್ಥಳಾಂತರಿಸುತ್ತಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಘೇರಾವ್‌ ಹಾಕಿದ ನಂತರ ಶನಿವಾರ ಮೂರು ತೆಪ್ಪಗಳನ್ನು ಜಿಲ್ಲಾಡಳಿತ ಪೂರೈಸಿದೆ. ಆ ತೆಪ್ಪಗಳಿಂದ ಶನಿವಾರ ಮನೆಯಲ್ಲಿಯೇ ಉಳಿದಿದ್ದ ಗ್ರಾಮಸ್ಥರು ಪಾತ್ರೆಗಳನ್ನು ಹೊರತರುತ್ತಿದ್ದಾರೆ.

ವರದಾ ನದಿಗೆ ನೆರೆ ಬಂದರೆ ನದಿ ಅಂಚಿನ ಗ್ರಾಮಗಳ ಒಂದು ಭಾಗದಲ್ಲಿ ನೆರೆ ತೊಂದರೆ ಎದುರಾಗುತ್ತದೆ. ಆದರೆ, ಇಡೀ ಕೋಣನತಂಬಗಿ ಗ್ರಾಮವನ್ನು ವರದಾ ನದಿ ಸುತ್ತುವರಿದಿರುವುದರಿಂದ ಪ್ರವಾಹ ಬಂದರೆ ಇಡೀ ಊರೊಳಗೆ ನೆರೆ ಉಕ್ಕಿ ಎಲ್ಲ ಸಂಪರ್ಕ ಕಳೆದುಕೊಂಡು ದ್ವೀಪವಾಗುವುದು ಈ ಗ್ರಾಮದ ವಿಶೇಷ. ಕೋಣನತಂಬಗಿ ಗ್ರಾಮದಲ್ಲಿ ಅಂದಾಜು ನಾಲ್ಕು ಸಾವಿರ ಜನಸಂಖ್ಯೆಯಿದ್ದು ಗ್ರಾಮದ ಕ್ವಾಟಿ ಓಣಿ, ಹರಿಜನಕೇರಿ ಹಾಗೂ ಹೊರಕೇರಿ ಸಂಪೂರ್ಣ ಜಲಾವೃತವಾಗಿವೆ. 200ಕ್ಕೂ ಹೆಚ್ಚು ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ. ಊರಿನ ಸೊಸೈಟಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಜನರೊಂದಿಗೆ ಎತ್ತು,ಎಮ್ಮೆ, ಹಸು, ಮೇಕೆ ಸೇರಿದಂತೆ 50ಕ್ಕೂ ಹೆಚ್ಚು ಜಾನುವಾರುಗಳು ಸಹ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಗ್ರಾಮದ ಉಳಿದ ಕಡೆಗಳಲ್ಲಿಯೂ ನೀರು ನುಗ್ಗಿದ್ದು, ಜನಜೀವನ ದುಸ್ತರವಾಗಿದೆ.

ನದಿಗುಂಟ ನೆರೆ ಹಾವಳಿ: ವರದಾ ನದಿ ದಂಡೆಯಲ್ಲಿರುವ ಹಾವೇರಿ ತಾಲೂಕಿನ ಕೋಣನತಂಬಗಿ, ಗುಯಲಗುಂದಿ, ಕೆಸರಳ್ಳಿ, ಮಣ್ಣೂರು, ಚೆನ್ನೂರು, ಕಿತ್ತೂರ, ಮರಡೂರು, ಅಕ್ಕೂರ, ಹಾಲಗಿ, ಮರೋಳ, ನದಿನೀರಲಗಿ, ಕೊಡಬಾಳ, ಹಿರೆಮಗದೂರ, ಕಲಕೋಟಿ, ಸವಣೂರು ತಾಲೂಕಿನ ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ತೊಂಡೂರ, ಡೊಂಬರಮತ್ತೂರ, ಮೆಳ್ಳಾಗಟ್ಟಿ, ಮಣ್ಣೂರು ಹಾಗೂ ಹಾನಗಲ್ಲ ತಾಲೂಕಿನ ಮಲಗುಂದ, ಕೂಡಲ, ಹರವಿ ಗ್ರಾಮಗಳು ಸಹ ನೆರೆಗೊಳಗಾಗಿವೆ. ಈ ಗ್ರಾಮಗಳಲ್ಲಿಯೂ ಜಮೀನು ಅಷ್ಟೇಅಲ್ಲದೇ ಜನವಸತಿ ಪ್ರದೇಶದಲ್ಲಿಯೂ ನೀರು ನಿಂತಿದ್ದು, ಮನೆ ಕುಸಿತ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗ್ರಾಮಸ್ಥರ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ.

ಕೋಣನತಂಬಗಿ ಗ್ರಾಮವನ್ನು ವರದಾ ನದಿ ಸುತ್ತುವರಿದಿದೆ. ಹೀಗಾಗಿ ನೆರೆ ಬಂತೆಂದರೆ ಇಡೀ ಊರು ದ್ವೀಪದಂತಾಗುತ್ತದೆ. ಗ್ರಾಮದ ದ್ವೀಪ ಕ್ವಾಟಿ ಓಣಿಯಿಂದ ಹರಿಜನ ಕೇರಿ ವರೆಗೆ ಎತ್ತರದ ತಡೆಗೋಡೆ ನಿರ್ಮಿಸಿದರೆ ನೆರೆಯಿಂದಾಗಬಹುದಾದ ಜೀವ ಹಾನಿಯನ್ನಾದರೂ ತಡೆಯಬಹುದು. ನೆರೆಪೀಡಿತ ಗ್ರಾಮ ಇದಾಗಿರುವುದರಿಂದ ನವಗ್ರಾಮ ನಿರ್ಮಿಸುವ ವ್ಯವಸ್ಥೆಯೂ ಆಗಬೇಕು. ಆಗ ಮಾತ್ರ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗುತ್ತದೆ.•ಗಂಗಯ್ಯ ಕುಲಕರ್ಣಿ, ಗ್ರಾಮದ ಪ್ರಮುಖ

 

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.