ನಿವಾರಣೆಯಾಗದ ಸ್ಥಳೀಯ ಸಂಸ್ಥೆ ಮೀಸಲಾತಿ ಗೊಂದಲ
ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೇ ನಾವಿಕನಿಲ್ಲದ ದೋಣಿಯಂತಾದ ಸ್ಥಿತಿ
Team Udayavani, Sep 11, 2020, 4:52 PM IST
ಹಾವೇರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿ 2 ವರ್ಷ ಕಳೆದರೂ, ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲ ನಿವಾರಣೆಯಾಗದ ಕಾರಣ ಇದುವರೆಗೂ ಅಧಿ ಕಾರ ಸಿಕ್ಕಿಲ್ಲ. ಹೀಗಾಗಿ, ಸ್ಥಳೀಯ ಸಂಸ್ಥೆಗಳ ಸ್ಥಿತಿ ನಾವಿಕನಿಲ್ಲದ ದೋಣಿಯಂತಾಗಿದೆ.
2018ರ ಆಗಸ್ಟ್ ತಿಂಗಳಲ್ಲಿ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು, ಸವಣೂರು, ಹಾನಗಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆನಡೆದು, ಸೆಪ್ಟೆಂಬರ್ 3 ರಂದು ಫಲಿತಾಂಶ ಬಂದಿತ್ತು. ಚುನಾವಣೆನಡೆದು ಬರೋಬ್ಬರಿ ಎರಡು ವರ್ಷಗಳು ಕಳೆದಿದ್ದರೂ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ.
2019 ಮೇ ತಿಂಗಳಲ್ಲಿ ಚುನಾವಣೆ ಎದುರಿಸಿದ ಬ್ಯಾಡಗಿ, ಶಿಗ್ಗಾವಿ ಪುರಸಭೆಗಳ ಚುನಾಯಿತ ಅಭ್ಯರ್ಥಿಗಳು ಸಹ ಇದೇ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ, ಸ್ಥಳೀಯ ಆಡಳಿತ ಯಂತ್ರಗಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಜನಪ್ರತಿನಿಧಿಯಾಗಿ ಆಯ್ಕೆಯಾದರೂ ಜನರ ಸೇವೆ ಮಾಡಲು ಇವರಿಂದ ಸಾಧ್ಯವಾಗುತ್ತಿಲ್ಲ.
2 ವರ್ಷ ಹಿಂದೆಯೇ ಚುನಾವಣೆ: ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷಗಳೇ ಕಳೆದಿವೆ. ಮೀಸಲಾತಿಕಾದಾಟದಿಂದ ಕೆಲವರು ತಮಗೆ ಮೀಸಲು ಸಿಗಬೇಕು ಎಂದು ಪಟ್ಟುಹಿಡಿದು ಸರ್ಕಾರದ ಮೀಸಲು ನಿಗದಿ ವಿರುದ್ಧ ನ್ಯಾಯಾಲಯದ ಮೆಟ್ಟಲು ಏರಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ. ಇನ್ನೊಂದೆಡೆ ಅಧಿಕಾರ ಸಿಗದೇ ವಾರ್ಡ್‌ಗಳ ಜನರ ಕುಂದುಕೊರತೆಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗದೇ ಚುನಾಯಿತ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಚುನಾಯಿತ ಸದಸ್ಯರು ಇದ್ದರೂ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಗೊಳ್ಳದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ಮುಂದುವರೆದಿದೆ.
ಅಧಿಕಾರಿಗಳದ್ದೇ ದರ್ಬಾರ್: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಯಾದರೂ ಇನ್ನೂ ಅಧಿಕೃಧಿತವಾಗಿ ಸದಸ್ಯರಾಗಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಜನಪ್ರತಿನಿಧಿ ಗಳ ಆಡಳಿತ ಶುರುವಾದ ಬಳಿಕವೇ ಸದಸ್ಯರ ಅಧಿಕಾರವೂ ಆರಂಭವಾಗುತ್ತದೆ. ಈಗ ಹೆಸರಿಗಷ್ಟೇ ಸದಸ್ಯರಾಗಿದ್ದು, ಯಾವ ಕೆಲಸ ಮಾಡಲಾಗದ ಸ್ಥಿತಿಯಲ್ಲಿ ಸದಸ್ಯರಿದ್ದಾರೆ. ಹೀಗಾಗಿ, ನಗರ ಸಂಸ್ಥೆಗಳು ಸಹಯಾವುದೇ ಕೆಲಸ ಕಾರ್ಯಗಳಿಗೆ ಮಾಡಲು ಸಾಧ್ಯವಾಗದೆ ಅತಂತ್ರವಾಗಿವೆ. ಇದರಿಂದ ಅಧಿಕಾರಿಗಳು ಮಾಡಿದ್ದೇ ಆಟ ಎಂಬಂತಾಗಿದೆ. ಗೆದ್ದ ಸದಸ್ಯರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಇದನ್ನು ವಿರೋಧಿ ಸಲು ಸದಸ್ಯರಿಗೆ ಅಧಿಕಾರದ ಗುರಾಣಿ ಸಿಕ್ಕಿಲ್ಲ. ಇತ್ತ ಮತ ಹಾಕಿ ಗೆಲ್ಲಿಸಿದ ಜನರು ತಮ್ಮ ವಾರ್ಡ್ ಸಮಸ್ಯೆಗಳನ್ನು ಸದಸ್ಯರ ಮುಂದಿಡುತ್ತಿದ್ದು, ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಒಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೆ ಹಿಡಿದಿರುವ ಗ್ರಹಣ ಯಾವಾಗ ತೆರವಾಗುತ್ತೋ, ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು ಯಾವಾಗ ವೇಗ ಪಡೆಯುತ್ತವೆಯೋ ಎಂದು ಜನರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಆಕಾಂಕ್ಷಿಗಳಲ್ಲಿ ಸಂಚಲನ: ರಾಜ್ಯ ಸರ್ಕಾರ ಮತ್ತೂಮ್ಮೆ ನಗರಾಭಿವೃದ್ಧಿ ಇಲಾಖೆ ಮೂಲಕ ಮೀಸಲಾತಿ ನಿಗದಿಗೆಮಾರ್ಗಸೂಚಿಗಳನ್ನು ಪರಿಷ್ಕರಿಸಲು ಆದೇಶಿಸಿರುವುದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಪ್ರಬಲ ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಅನ್ವಯ ಅಧಿ ಕಾರ ಹಿಡಿಯುವ ಕನಸು ಹೊಂದಿರುವ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಲ್ಲಿ ಸಂಚನ ಮೂಡಿಸಿದೆ. ಮೀಸಲಾತಿಪರಿಷ್ಕರಣೆ ಸಂದರ್ಭದಲ್ಲಿ ಎಲ್ಲಿ ನಮಗೆ ಪೂರಕವಾದ ಮೀಸಲಾತಿ ರದ್ದಾಗುತ್ತದೆ ಎಂಬ ಆತಂಕ ಕೆಲವರನ್ನು ಕಾಡುತ್ತಿದ್ದರೆ,ಮೀಸಲಾತಿ ಪರಿಷ್ಕರಣೆಯಿಂದ ತಮಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಕೆಲವು ಆಕಾಂಕ್ಷಿಗಳದ್ದಾಗಿದೆ.
ಚುನಾವಣೆಯಲ್ಲಿ ಗೆದ್ದರೂ ಅಧಿಕೃತವಾಗಿ ನಗರಸಭೆ ಸದಸ್ಯರಾಗಲು ಸಾಧ್ಯವಾಗಿಲ್ಲ, ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದರೂ, ಸದಸ್ಯರು ತಮ್ಮದೇ ವಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿ ನಡೆಯದ ಪರಿಣಾಮ ಅನುದಾನ ಹಾಗೇ ಉಳಿದಿದೆ. ಮೂಲಭೂತ ಸೌಕರ್ಯ ಕೇಳಿ ಬರುವ ಸಾರ್ವಜನಿಕರಿಗೆ ಉತ್ತರಿಸುವುದೂ ಕಷ್ಟವಾಗಿದೆ. – ಸಂಜೀವಕುಮಾರ ನೀರಲಗಿ, ನಗರಸಭೆ ಚುನಾಯಿತ ಸದಸ್ಯರು, ಹಾವೇರಿ
-ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.