![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 30, 2019, 3:03 PM IST
ರಾಣಿಬೆನ್ನೂರ: ತಾಲೂಕಿನ ಮಾಕನೂರು ಗ್ರಾಮದಿಂದ ರಾಣಿಬೆನ್ನೂರಿಗೆ ಸಂಚರಿಸಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೇ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಸರಣಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಮಾಕನೂರು ಕ್ರಾಸ್ ಬಳಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಸಂಭವಿಸಿದೆ.
ತಾಲೂಕಿನ ಕೋಡಿಯಾಲ ಗ್ರಾಮದಲ್ಲಿ ಉಪ-ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಬಹಿರಂಗ ಸಭೆ ನಡೆಸಿ ರಾಣಿಬೆನ್ನೂರತ್ತ ಆರೋಗ್ಯ ಸಚಿವರ ಕಾರು ಮಾಕನೂರು ವೃತ್ತದ ಬಳಿ ಬರುತ್ತಿದ್ದಂತೆ ಧರಣಿ ಆರಂಭಿಸಿದ ನೂರಾರು ವಿದ್ಯಾರ್ಥಿಗಳು, ರೈತ ಮುಖಂಡರು, ಸಚಿವರ ಕಾರನ್ನು ತಡೆದು ವಾಸ್ತವ ಸ್ಥಿತಿ ಮನವರಿಕೆ ಮಾಡಿದರು. ಇದರಿಂದ ಸಚಿವ ಶ್ರೀರಾಮುಲು ಅವರು ವಿದ್ಯಾರ್ಥಿಗಳು ಮತ್ತು ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಸರಣಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಸ್ಥಳಕ್ಕೆ ಘಟಕದ ವ್ಯವಸ್ಥಾಪಕರು ಮತ್ತು ಅವಹೇಳನಕಾರಿ ಶಬ್ದದಿಂದ ವರ್ತಿಸಿದ ಬಸ್ ಚಾಲಕ ಬರುವರೆಗೂ ಸ್ಥಳ ಬಿಟ್ಟಿ ಕದಲುವುದಿಲ್ಲವೆಂದು ಬಿಗಿಪಟ್ಟು ಸಡಿಲಿಸದೇ, ಧರಣಿ ಆರಂಭಿಸಿದ್ದರು.
ಮುಖಂಡರೊಂದಿಗೆಸಮಾಲೋಚನೆ ನಡೆಸುತ್ತಿದ್ದ ಶ್ರೀರಾಮುಲು ಅವರು ವಿದ್ಯಾರ್ಥಿಗಳೊಂದಿಗೆ ಶಾಂತ ಚಿಂತತೆಯಿಂದ ಅವರ ಪರಿಸ್ಥಿತಿಯನ್ನು ಆಲಿಸಿ ಘಟಕ ವ್ಯವಸ್ಥಾಪಕರಿಗೆ ಬೆಳಗ್ಗೆ 7 ಗಂಟೆಯಿಂದ 10-30 ಅವಧಿ ಯಲ್ಲಿ ಕನಿಷ್ಠ 4 ಬಸ್ ಗಳು ಸಂಚರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದರು.
ರೈತ ಮುಖಂಡರಾದ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಶಿವಣ್ಣ ಬಾರ್ಕಿ, ಚಂದ್ರಶೇಖರ ಬಾರ್ಕಿ, ದಿನೇಶ ಪಾಟೀಲ, ಮೇಘರಾಜ ಕವಲೆತ್ತು ಸೇರಿದಂತೆ ಮಾಕನೂರ ಗ್ರಾಮದ ರೈತರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.