ಲಾಕ್‌ಡೌನ್ 2.0; ಪೊಲೀಸರಿಂದ ಬಿಗಿ ಕ್ರಮ
Team Udayavani, Apr 16, 2020, 5:16 PM IST
ಸಾಂದರ್ಭಿಕ ಚಿತ್ರ
ಹಾವೇರಿ: ಕೋವಿಡ್ 19 ಸೋಂಕು ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಎರಡನೇ ಹಂತದ ಲಾಕ್‌ಡೌನ್‌ನ ಮೊದಲ ದಿನ ಬುಧವಾರವೂ ಪೊಲೀಸರು ಬಿಗಿ ಕ್ರಮ ಮುಂದುವರಿಸಿದರು.
ಬೈಕ್ ವಶ, ದಂಡ, ಪ್ರಕರಣ ದಾಖಲು, ಪೆಟ್ರೋಲ್‌ಗೆ ಪಾಸ್ ಕಡ್ಡಾಯ, ಎಲ್ಲೆಡೆ ಬ್ಯಾರಿಕೇಡ್ ಹಾಕಿದ್ದರಿಂದ ಅನಗತ್ಯ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಎಲ್ಲ ವ್ಯಾಪಾರಸ್ಥರು ಈಗ ಮನೆ ಬಾಗಿಲಿಗೆ ಹೋಗಿ ತರಕಾರಿ ಮಾರಾಟ ಮಾಡುವುದು ಮುಂದುವರಿದಿದೆ. ದಿನಸಿ ಅಂಗಡಿಗಳು ತೆರೆದಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿದರು. ಶುದ್ಧ ಕುಡಿಯುವ ನೀರಿನ ಘಟಕ, ಬ್ಯಾಂಕ್ ಸೇರಿದಂತೆ ಎಲ್ಲೆಡೆ ಜನ ಸಾಮಾಜಿಕ ಅಂತರಕ್ಕೆ ಮಹತ್ವ ನೀಡುವುದು ಮುಂದುವರಿಯಿತು.
ಬಡವರಿಗೆ, ಕಾರ್ಮಿಕರಿಗೆ, ಸರ್ಕಾರದಿಂದ, ದಾನಿಗಳಿಂದ ಸಂಘ- ಸಂಸ್ಥೆಗಳಿಂದ ಆಹಾರ ಧಾನ್ಯ ಸಹಾಯ, ಪೊಲೀಸರು, ವೈದ್ಯ ಸಿಬ್ಬಂದಿಗೆ ನೀರು,ಉಪಹಾರ ಸೇವೆ ಮುಂದುವರಿಯಿತು. ಬಹುತೇಕ ರಸಗೊಬ್ಬರ, ಬೀಜ ಮಾರಾಟ, ಕೃಷಿ ಸಲಕರಣೆ ಮಾರಾಟ ಹಾಗೂ ಬೇಕರಿ ಅಂಗಡಿಗಳು ಬಂದ್ ಆಗಿಯೇ ಇದ್ದವು
ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಅನುಷ್ಠಾನ ಮಾಡಲಾಗುತ್ತಿದ್ದು ಏ. 20ರವರೆಗೆ ಇನ್ನಷ್ಟು ಬಿಗಿ ಕ್ರಮ ಜರುಗಿಸಲಾಗುವುದು. ಕೃಷಿ, ವೈದ್ಯಕೀಯ ತುರ್ತು ಅಗತ್ಯ ಸೇರಿದಂತೆ ವಿನಾಯಿತಿ ಇರುವ ಕೆಲ ಸಂದರ್ಭ ಹೊರತುಪಡಿಸಿ ಉಳಿದೆಲ್ಲದವುಗಳಿಗೆ ಕಠಿಣ ಕ್ರಮ ಮುಂದುವರಿಯಲಿದೆ. ಗಡಿ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. -ಕೆ.ಜಿ. ದೇವರಾಜು, ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.