ಪಾರಮಾರ್ಥ ಜೀವನ ಸಾಗಿಸಿದ ಮಲ್ಲಮ್ಮ
•ವಿವಿಧೆಡೆ ಭಾವಚಿತ್ರ ಮೆರವಣಿಗೆ •ಸ್ತ್ರೀ ಕುಲಕ್ಕೆ ಮಲ್ಲಮ್ಮ ಅನಘ್ಯರ್ ರತ್ನ•ಸನ್ಮಾರ್ಗದಲ್ಲಿ ಜೀವನ ನಡೆಸಿ
Team Udayavani, May 11, 2019, 2:22 PM IST
ರಾಣಿಬೆನ್ನೂರ: ಶ್ರೀ ವೇಮನ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಡಾ| ಆರ್.ಎಂ. ಕುಬೇರಪ್ಪ ಮಾತನಾಡಿದರು.
ರಾಣಿಬೆನ್ನೂರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿದ್ದುಕೊಂಡು ಪಾರಮಾರ್ಥ ಜೀವನ ಸಾಗಿಸಿದರು. ಬದುಕಿನಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯ ಬಂದರೂ ಸತ್ಯ ಮತ್ತು ಸತಿ ಧರ್ಮವನ್ನು ತಪ್ಪದೇ ಪಾಲಿಸಿದವರು ಎಂದು ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು.
ನಗರದ ಪಿ.ಬಿ. ರಸ್ತೆಯ ಶ್ರೀ ವೇಮನ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ಶ್ರೀ ವೇಮನ ವಿದ್ಯಾವರ್ಧಕ ಸಂಘ ಮತ್ತು ರಡ್ಡಿ ಸಮಾಜದ ವತಿಯಿಂದ ಹಮ್ಮಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 598ನೇ ಜನ್ಮದಿನೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ ಜೀವನದ ಭಾರ ಹಾಕಿ ನಡೆದವಳು, ತನ್ನ ಮಾವ ಸೋಮರಡ್ಡಿ ನೀಡಿದ ಮನೆಗೆಲಸ ನಿಭಾಯಿಸುವ ಮೂಲಕ ಗುರು ಹಿರಿಯರಲ್ಲಿ ಗೌರವ ತೋರಿಸಿದವಳು. ಜೀವಿತಾವಧಿವರೆಗೆ ಸನ್ಮಾರ್ಗದಲ್ಲಿ ಜೀವನ ನಡೆಸಿ ಸ್ತ್ರೀ ಕುಲಕ್ಕೆ ಅನಘ್ಯರ್ ರತ್ನವಾಗಿದ್ದರು. ಅವರಂತೆ ಇಂದಿನ ತಾಯಂದಿರು ಮುನ್ನಡೆದರೆ ಬದುಕು ಹಸನಾಗುವುದು ಎಂದರು.
ಡಾ| ಆರ್.ಎಂ. ಕುಬೇರಪ್ಪ ಮಾತನಾಡಿ, ಇಡೀ ವಿಶ್ವಕ್ಕೆ ಗುರುವಾದ ಭಾರತದಲ್ಲಿ ಅನೇಕ ಮಹಾಪುರುಷರು, ಶರಣರು, ಋಷಿಮುನಿಗಳು, ಸಂತರು, ವಚನಕಾರರು ಆಗಿ ಹೋಗಿದ್ದಾರೆ. ಅಂಥವರಲ್ಲಿ ಹೇಮರಡ್ಡಿ ಮಲ್ಲಮ್ಮ ಕೂಡ ಒಬ್ಬರು ಎಂದು ಸ್ಮರಿಸಿದರು.
ಮಣಕೂರ ಸಿದ್ಧಾರೂಢ ಮಠದ ಬಸಮ್ಮತಾಯಿ ಗೌಡ್ರ ಹೇಮರಡ್ಡಿ ಮಲ್ಲಮ್ಮ ಕುರಿತು ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ರಾಮಚಂದ್ರಪ್ಪ ರಾಯರಡ್ಡಿ, ಆರ್.ಡಿ. ಹೊಂಬರಡಿ, ಶ್ರೀನಿವಾಸ ಹಳ್ಳಳ್ಳಿ, ಕೆ.ಡಿ. ಬಜರಡ್ಡಿ, ಟಿ.ಎಫ್. ರಡ್ಡಿ, ಎಸ್.ಎಚ್. ಮೇಟಿ, ಎಸ್.ಕೆ. ಗಿರಡ್ಡಿ, ಎಸ್.ಕೆ. ಹೂಲಿಹಳ್ಳಿ, ಡಿ.ವಿ. ಜೀವನಗೌಡ್ರ, ಮಲ್ಲಿಕಾರ್ಜುನ ಕೆಂಚರಡ್ಡಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.