![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 16, 2020, 7:51 PM IST
ಹಾವೇರಿ: ಬ್ಯಾಡಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ವಿರೂಪಾಕ್ಷಪ್ಪ ಬಳ್ಳಾರಿ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶಿಸಲು ಯತ್ನಿಸಿದ ಕಾರು ಚಾಲಕನೋರ್ವ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ.
ಕೋವಿಡ್ 19 ಸಂಬಂಧಿತ ಲಾಕ್ ಡೌನ್ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣ ಹೊರತುಪಡಿಸಿ ಇತರ ಪ್ರಯಾಣಿಕರ ವಾಹನ ಓಡಾಟಕ್ಕೆ ನಿರ್ಭಂಧ ಹೆರಲಾಗಿದೆ. ತುರ್ತು ವೈದ್ಯಕೀಯ ಕಾರಣಗಳಿದ್ದರೆ ಅಧಿಕೃತವಾಗಿ ಪಾಸ್ ಪಡೆದು ಪ್ರಯಾಣ ಮಾಡಬಹುದು.
ಆದರೆ ದಿಲೀಪ್ ಬಂಕಾಪುರ ಎಂಬಾತ ಮಾರುತಿ ವಿಟಾರ್ ಬ್ರಿಜ್ (ಕೆಎ-27 ಎನ್ 4122) ಕಾರಿನ ಮೇಲೆ ಬ್ಯಾಡಗಿ ಶಾಸಕರು ಎಂದು ನಕಲಿ ಪಾಸ್ ಹಾಕಿಕೊಂಡು ಲಕ್ಷ್ಮೇಶ್ವರದಿಂದ ರಾಣೇ ಬೆನ್ನೂರಿಗೆ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಎನ್ನಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆಯಲ್ಲಿ ಈ ಕಾರನ್ನು ಗಮನಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಕಾರು ತಡೆದು ವಿಚಾರಣೆ ನಡೆಸಿದ್ದಾರೆ. ಕಾರಿನ ಮೇಲಿದ್ದ ಶಾಸಕರ ಹೆಸರಿನ ಬಣ್ಣದ ಪಾಸ್ ಸಾಚಾತನದ ಕುರಿತಂತೆ ಸಂಶಯಗೊಂಡು ಸ್ಥಳದಲ್ಲೇ ಶಾಸಕರಿಗೆ ಕರೆಮಾಡಿ ಮಾಹಿತಿ ಪಡೆದಿದ್ದಾರೆ.
ಈ ವೇಳೆಯಲ್ಲಿ ಶಾಸಕರು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ಮಾಡುತ್ತಿದ್ದವನ ಮೇಲೆ ಮೊಕದ್ದಮೆ ದಾಖಲಿಸಿ ಕಾರು ವಶಪಡಿಸಿಕೊಳ್ಳಲು ಅಪರ ಜಿಲ್ಲಾಧಿಕಾರಿಯವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
You seem to have an Ad Blocker on.
To continue reading, please turn it off or whitelist Udayavani.