ಮಹಿಳೆಯರ ರಕ್ಷಣೆಗೆ ಹಲವು ಕಾನೂನು
Team Udayavani, Jul 28, 2019, 11:31 AM IST
ಬ್ಯಾಡಗಿ: ನಗರದಲ್ಲಿ ನಡೆದ ಜಿಲ್ಲಾ ಮಹಿಳಾ ಸಮಾಖ್ಯಾ ಕರ್ನಾಟಕ ಕಾರ್ಯಕ್ರಮದಲ್ಲಿ ಪಿಎಸ್‌ಐ ಎಂ.ಎಂ. ಮಹಾಂತೇಶ ಮಾತನಾಡಿದರು.
ಬ್ಯಾಡಗಿ: ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದು ಪಿಎಸ್‌ಐ ಎಂ.ಎಂ. ಮಹಾಂತೇಶ ತಿಳಿಸಿದರು.
ತಾಪಂ ಸಭಾಭವನದಲ್ಲಿ ಜಿಲ್ಲಾ ಮಹಿಳಾ ಸಮಾಖ್ಯಾ ಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಸರಕಾರದಿಂದ ವಿವಿಧ ಯೋಜನೆ ಮತ್ತು ಇಲಾಖೆಗಳಲ್ಲಿ ದೊರೆಯಲಿರುವ ಸೌಲಭ್ಯಗಳ ಸಂಪರ್ಕ ಮಾಹಿತಿ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ-ರಾಜ್ಯ ಸರಕಾರಗಳು ಮಹಿಳೆಯರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ. ಕಾನೂನು ಸಲಹೆ ಅವಶ್ಯಕತೆ ಇರುವವರು ಉಚಿತ ಕಾನೂನು ನೆರವು ಪಡೆದುಕೊಳ್ಳುವ ಮೂಲಕ ಸುರಕ್ಷತೆ ಪಡೆದುಕೊಳ್ಳಬೇಕಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅನೇಕ ದೌರ್ಜನ್ಯ, ಅನ್ಯಾಯ ನಡೆಯುತ್ತಿದ್ದರೂ ಯಾರೊಬ್ಬರು ಧ್ವನಿ ಎತ್ತದ ಕಾರಣ ವರದಿಯಾಗುತ್ತಿಲ್ಲ. ಅಲ್ಲೊಂದು ಇಲ್ಲೊಂದೂ ಘಟನೆಗಳು ಮಾತ್ರ ಬೆಳಕಿಗೆ ಬರುತ್ತಿವೆ. ಮಹಿಳೆಯರಿಗೆ ಅನ್ಯಾಯವಾದಾಗ ಪ್ರತಿಭಟಿಸಬೇಕು. ಜತೆಗೆ ಪೊಲೀಸ್ ಠಾಣೆಗೆ ಬಂದು ತಿಳಿಸುವ ಕಾರ್ಯ ಮಾಡಬೇಕು ಎಂದರು.
ಮಹಿಳಾ ಸಮಾಖ್ಯಾ ಜಿಲ್ಲಾ ಸಂಯೋಜಕಿ ಆರತಿ ಸಬರದ ಮಾತನಾಡಿ, ಮಹಿಳೆಯರು ಮೊದಲು ಸಂಘಟಿತರಾಗಬೇಕು. ಸರಕಾರದ ವಿವಿಧ ಇಲಾಖೆಗಳಡಿ ದೊರೆಯಲಿರುವ ಸೌಲಭ್ಯ ಪಡೆದುಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಬೇಕಿದೆ. ನೊಂದ ಮಹಿಳೆಯರನ್ನು ಸಾಂತ್ವನಗೊಳಿಸುವಂತ ಕಾರ್ಯವನ್ನು ಮಹಿಳಾ ಸಮಾಖ್ಯಾ ಸಂಘಟನೆ ಮಾಡುತ್ತಲಿದೆ ಎಂದರು.
ತಾಪಂ ಇಒ ಪರಶುರಾಮ ಪೂಜಾರ, ಸಿಡಿಪಿಒ ರಾಮಲಿಂಗಪ್ಪ, ಕೃಷಿ ಅಧಿಕಾರಿ ಬಸವರಾಜ ಮರಗಣ್ಣನವರ, ಪಶು ವೈದ್ಯಾಧಿಕಾರಿ ಡಾ. ಗೋಪಿನಾಥ, ತೋಟಗಾರಿಕೆ ಇಲಾಖೆಯ ವಿಜಯಲಕ್ಷ್ಮೀ, ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಯಶೋಧರಾ, ಆರೋಗ್ಯ ಇಲಾಖೆ ಎಲ್.ಬಿ. ಅಜಗಣ್ಣನವರ, ರೇಖಾ ತ್ರಿಪಾಠಿ, ಕೆ. ನಾಗಭೂಷಣ ಇದ್ದರು. ಗೀತಾ ಕನಕಪ್ಪನವರ ಸ್ವಾಗತಿಸಿದರು. ಸುಮಂಗಲಾ ರಾಟಿಮನಿ ನಿರೂಪಿಸಿದರು. ಪಿ.ಎನ್. ರೇಣುಕಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.